Publish Date: Thu, 20 Sep 2007 (17:04 IST)
Updated Date: Thu, 20 Sep 2007 (17:04 IST)
ಬಾಲಿವುಡ್ ಸಂಗೀತ ನಿರ್ದೆಶಕ ಇಮ್ತಿಯಾಜ್ ಅಲಿ ಅವರ ಪ್ರಣಯ ಪ್ರಧಾನವಾದ ಹಾಡುಗಳನ್ನು ಹೊಂದಿರುವ ಜಬ್ ವ್ಹಿ ಮೆಟ್ ಅಲ್ಬಂ ಚಿತ್ರದ ಆಡೀಯೋಗಳನ್ನು ಚಿತ್ರದ ನಾಯಕಿ ಕರೀನಾ ಕಪೂರ್ ಬಿಡುಗಡೆ ಮಾಡಲಿದ್ದಾರೆ.
ಕರೀನಾ ಝೀ ಟಿವಿಯವರ ಪ್ರಮುಖ ಕಾರ್ಯಕ್ರಮವಾದ ಸ,ರೆ,ಗ,ಮ ಪ ದಲ್ಲಿ 30 ನಿಮಿಷಗಳ ಅವಧಿಗೆ ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಬಾಲಿವುಡ್ ಮೂಲಗಳು ತಿಳಿಸಿವೆ.
ಜಬ್ ವ್ಹಿ ಮೆಟ್ ಅಲ್ಬಂ ಚಿತ್ರದ ಆಡೀಯೋ ಗೀತೆಗಳನ್ನು ಪ್ರೀತಂ ಅವರು ರಚಿಸಿದ್ದಾರೆ ಎಂದು ಬಾಲಿವುಡ್ ಮೂಲಗಳು ತಿಳಿಸಿವೆ. ಆದಿತ್ಯನಾರಾಯಣ ಮತ್ತು ಕರೀನಾ ಅವರು ಮ್ಯೂಸಿಕ್ ಅಲ್ಬಂ ಅನ್ನು ಜಂಟಿಯಾಗಿ ಬಿಡುಗಡೆ ಮಾಡಲಿದ್ದಾರೆ.
ಜಬ್ ವ್ಹಿ ಮೆಟ್ ಸಂಗೀತ ಉತ್ತಮವಾಗಿದೆ. ತಮ್ಮ ಸಹನಟಶಾಹೀದ್ ಕಪೂರ್ ಕೆನಡಾದಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸಿದ್ದರಿಂದ ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದಾರೆ ಎಂದು ಕರೀನಾ ಹೇಳಿದ್ದಾರೆ.
ಜಬ್ ವ್ಹಿ ಮೆಟ್ ಚಲನಚಿತ್ರ ಮುಂಬರುವ ಅಕ್ಟೋಬರ್ 26 ರಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ದೆಶಕರು ತಿಳಿಸಿದ್ದಾರೆ.