ಕರೀನಾಗೆ ಪತಿ ಸೈಫ್ ಆಲಿ ಖಾನ್ನಿಂದ ಟಿಪ್ಸ್
Publish Date: Wed, 21 Aug 2013 (11:19 IST)
Updated Date: Wed, 21 Aug 2013 (11:19 IST)
ಕರೀನಾ ಸೈಫ್ ಆಲಿ ಖಾನ್ ಮದುವೆಯಾಗಿ ಭರ್ಜರಿ ಹನಿಮೂನ್ ಮುಗಿಸಿಕೊಂಡು ಬಂದಿದ್ದು ನಿಮಗೆಲ್ಲಾ ಗೊತ್ತೇ ಇದೆ. ಈಗ ಅದಾದ ಬಳಿಕ ಇಬ್ಬರೂ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಮಡದಿಗೆ ವಿಶೇಷ ಟಿಪ್ಸ್ ನೀಡುವುದರಲ್ಲಿ ಸೈಫ್ ಸಖತ್ ಮುಂದಿದ್ದಾರಂತೆ. ಈ ಮೂಲಕ ಸಿಕ್ಕಾಪಟ್ಟೆ ಪ್ರೊಟೆಕ್ಟಿವ್ ಗಂಡ ಸೈಫ್ ಆಲಿ ಖಾನ್ ಎನಿಸಿಕೊಂಡಿದ್ದಾರೆ. ಬಾಲಿವುಡ್ನ ಈ ಹಾಟ್ ದಂಪತಿಗಳಿಗೆ ಬಿಡುವಿಲ್ಲದ ಕೆಲಸವಂತೆ. ಅದರ ನಡುವೆಯೂ ಸೈಫ್ ವೃತ್ತಿ ಬದುಕಿನಲ್ಲಿ ತಮ್ಮ ಪತ್ನಿಗೆ ಒಂದಿಷ್ಟು ಸಲಹೆ ಸೂಚನೆ ನೀಡಿದ್ದಾರಂತೆ.ಕರೀನಾ ನಿರ್ದೇಶಕ ಪ್ರಕಾಶ್ ಝಾ ಜತೆ ಸತ್ಯಾಗ್ರಹ ಸಿನೆಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಸೈಫ್ ಕೂಡಾ ಈ ಹಿಂದೆ ಅವರ ಜತೆ ಕೆಲಸ ಮಾಡಿದ್ದರು. ಹಳೆ ಅನುಭವದ ಮೇಲೆ ಪತ್ನಿ ಕರೀನಾಗೆ ಸೈಫ್ ಒಂದಿಷ್ಟು ಎಚ್ಚರಿಕೆ ನೀಡಿದ್ದಾರೆ. ನಿರ್ದೇಶಕ ಪ್ರಕಾಶ್ ಝಾ ಜತೆ ಕೆಲಸ ಮಾಡಬೇಕು ಅಂದ್ರೆ ಪಾತ್ರಕ್ಕಾಗಿ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿರಬೇಕು. ಅದಕ್ಕಾಗಿ ರಿಸರ್ಚ್ ಮಾಡಲೇಬೇಕು, ಹಾರ್ಡ್ ವರ್ಕ್ ಅಂತೂ ಕಡ್ಡಾಯ ಎಂದಿದ್ದಾರೆ. ಪ್ರಕಾಶ್ ಝಾ ಅವರಿಗೂ ಬಾಲಿವುಡ್ ಇಂಡಸ್ಟ್ರಿಯಲ್ಲಿ ಕರೀನಾ ಬುದ್ದಿವಂತ ನಟಿ ಎನ್ನುವುದು ಗೊತ್ತಿದೆ. ಹಾಗಾಗಿ ಕರೀನಾಗೆ ಪ್ರಕಾಶ್ ಜೊತೆ ಕೆಲಸ ಮಾಡುವುದು ಕಷ್ಟವಾಗಲಿಕ್ಕಿಲ್ಲ ಎಂಬುದು ಬಾಲಿವುಡ್ ಮಂದಿಯ ವಿಶ್ಲೇಷಣೆ.