Article Bollywood Gossips %e0%b2%95%e0%b2%b0%e0%b3%80%e0%b2%a8%e0%b2%be%e0%b2%97%e0%b2%be%e0%b2%97%e0%b2%bf %e0%b2%b8%e0%b3%88%e0%b2%ab%e0%b3%8d%e2%80%8c %e0%b2%86%e0%b2%b2%e0%b2%bf %e0%b2%ab%e0%b3%88%e0%b2%9f%e0%b3%8d%e2%80%8c 107080900013_1.htm

Daily Horoscope

Select Your Language

Notifications

webdunia
webdunia
webdunia
webdunia

ಕರೀನಾಗಾಗಿ ಸೈಫ್‌ ಆಲಿ ಫೈಟ್‌

ಕರೀನಾಗಾಗಿ
ನಾಯಕಿ ಏಕಾಂತ ಪ್ರದೇಶದಲ್ಲಿ ಚಲಿಸುವುದು. ಆಗ ಖಳನಾಯಕ ಅಥವಾ ರೌಡಿಗಳ ಗ್ಯಾಂಗ್ ಕೆಣಕಿ ಆಕ್ರಮಿಸುವುದು. ಇದೇ ವೇಳೆ ನಾಯಕ ಪ್ರತ್ಯಕ್ಷನಾಗಿ ಅವರನ್ನೆಲ್ಲಾ ಹೊಡೆದೋಡಿಸಿ ನಾಯಕಿಯೊಂದಿಗೆ ಡ್ಯುಯೆಟ್ ಹಾಡುವುದು...

ಇದೆಲ್ಲಾ ಸಿನಿಮಾ... ರೀಲು, ಅಂತೀರಾ? ಆದರೆ ಲಡಾಕ್‌ನಲ್ಲಿ 'ತಷಾನ್ ಇನ್ ಲಡಾಕ್' ಎಂಬ ಯಶ್‌ರಾಜ್ ಸಿನಿಮಾವ ಚಿತ್ರೀಕರಣದ ವೇಳೆ ನಾಯಕಿ ಕರೀನಾ ಹಾಗೂ ನಾಯಕ ಸೈಫ್‌ ಆಲಿಖಾನ್ ಇಂತಹ ನೈಜ ಘಟನೆಯನ್ನು ಎದುರಿಸಿದರು.

ಅಲ್ಲಿ ಕರೀನಾ ಅಭಿಮಾನಿ ಯುವಕರ ಗುಂಪೊಂದು ಆಕೆಯನ್ನು ಕೆಣಕಲು ಬಂತು. ದೂರಹೋಗಲು ಶಾಂತವಾಗಿ ತಿಳಿಸಿದಾಗ ಅವರು ಮತ್ತಷ್ಟು ಗದ್ದಲವೆಬ್ಬಿಸಿದರು. ಆಗ ಸಿನಿಮಾ ಹೀರೋನಂತೆ ಅವರ ಮೇಲರಗಿ ನಾಲ್ಕು ತಪರಾಕಿ ಬಿಟ್ಟ ಸೈಫ್ ಕರೀನಾಳನ್ನು ಸೇಫ್ ಆದ ಜಾಗಕ್ಕೆ ಕರೆದೊಯ್ದರು... ಇದು ವಿವರಣೆ.

ಆದರೆ ಸೈಫ್‌ರಲ್ಲಿ ಕೇಳಿದರೆ, ಹಾಗೇನಿಲ್ಲ, ಸಣ್ಣಘಟನೆ ಆಗಿತ್ತು. ಕರೀನಾ ಅಭಿಮಾನಿಗಳು ಅವರ ಕೈಕುಲುಕಲು ವಿನಂತಿಸಿದರು. ಆಕೆ ಒಲ್ಲೆ ಅಂದರು. ಆವಾಗ ನಾವೆಲ್ಲಾ ತಿಳಿ ಹೇಳಿ ದೂರಕಳುಹಿಸಿದೆವು... , ನಾನು ಅವರೊಂದಿಗೆ ಹೊಡೆದಾಟವೇನೂ ನಡೆಸಿಲ್ಲ ಅನ್ನುತ್ತಾರೆ.

ಎಲ್‍ಒಸಿ ಸಿನೆಮದ ಬಳಿಕ ಸೈಫ್ ಹಾಗೂ ಕರೀನಾ ಗೆಳೆಯರಂತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಇಂತಹ ಸಂದರ್ಭದಲ್ಲಿ ಆಕೆ ಮೇಲೆರಗಿದ ಹಲ್ಲೆಕಾರರೊಂದಿಗೆ ಸೈಫ್‌ ಆಲಿ ಖಾನ್ ಹೊಡೆದಾಟ ನಡೆಸಿದ್ದರೆ ವಿಶೇಷವಿಲ್ಲ. ಸಹೋದ್ಯೋಗಿಗಳು ಎಂಬ ಕಾರಣವೂ ಇದೆಯಲ್ಲ ಎನ್ನುತ್ತಾರೆ ಇತರರು.

Share this Story:

Follow Webdunia kannada