Publish Date: Fri, 08 Aug 2008 (20:38 IST)
Updated Date: Fri, 08 Aug 2008 (20:37 IST)
ಕರೀನಾ ಕಪೂರ್‌ರಿಗೆ ಹಾಲಿವುಡ್‌ನಲ್ಲೂ ಬೇಡಿಕೆ ಇರುವುದೇನೊ ನಿಜ, ಆದರೆ ಆಕೆ ಅಲ್ಲಿಗೆ ಹೋಗುವುದಿಲ್ಲವಂತೆ. ಕರೀನಾ ಬಾಲಿವುಡ್‌ನತ್ತ ಸಾಗುತ್ತಿದ್ದಾರೆ ಎಂದು ಗುಸು ಗುಸು ಕೇಳ ಹತ್ತಿತ್ತು, ಆದರೆ ಕರೀನಾರ ವಕ್ತಾರ ನಮ್ಮ ಬಾಲಿವುಡ್ ಬೇಬ್ ಎಲ್ಲಿಗೂ ಹೋಗುತ್ತಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಕರೀನಾ ಅಂತಾರಾಷ್ಟ್ರೀಯ ಚಿತ್ರ ನಿರ್ಮಾಪಕರ ಗಮನ ಸೆಳೆದಿದ್ದಾರೆ ಆದರೆ ಕರೀನಾಗೆ ಬಾಲಿವುಡ್‌ನಲ್ಲೇ ಕೈ ತುಂಬಾ ಅವಕಾಶಗಳಿರುವಾಗ, ಅಲ್ಲೀಗೇಕೆ ಸುಮ್ಮನೆ ಎಂದು ಹಾಲಿವುಡ್‌ಗೆ ಒಲ್ಲೆ ಎನ್ನುತ್ತಿದ್ದಾರಂತೆ ಕರೀನಾ.
ಬಿಬೊರ ಆಧಿಕೃತ ವಕ್ತಾರ "ಕರೀನಾರಿಗೆ ಡೇನಿಯಲ್ ಸಿಲ್ವರ್‌ಮಾನ್ ಅವರ ನಿರ್ದೇಶನದ 'ಕಾಮೆರ' ಚಿತ್ರದಲ್ಲಿ ಪಾತ್ರವೊಂದರ ಅಫರ್ ಬಂದಿದ್ದು ನಿಜ ಆದರೆ ಅವರು ಆ ಚಿತ್ರಕ್ಕೆ ಸಹಿ ಹಾಕಿಲ್ಲ" ಎಂದು ತಿಳಿಸಿದ್ದಾರೆ.
ಕರೀನಾ ಯಾವುದಾದರು ಹಾಲಿವುಡ್ ಚಿತ್ರಗಳನ್ನು ಮಾಡುತ್ತಿದ್ದಾರೆಯೇ ಎಂದು ಕೇಳಿದ್ದಕ್ಕೆ, "ಕರೀನಾ ಮುಂದಿನ ಒಂದೂವರೆ ವರ್ಷದವರೆಗೆ ಬಾಲಿವುಡ್ ಚಿತ್ರಗಳಲ್ಲಿ ಬ್ಯೂಸಿಯಾಗಿದ್ದಾರೆ. ಅಲ್ಲಿಯವರೆಗೆ ಅವರು ಯಾವುದೇ ಅಂತಾರಾಷ್ಟ್ರೀಯ ಚಿತ್ರ ಮಾಡುತ್ತಿಲ್ಲ. ಕರೀನಾರಿಗೆ ಇತರ ಎರಡು ಹಾಲಿವುಡ್ ಚಿತ್ರಗಳಿಗೆ ಕೋರಿಕೆ ಬಂದಿದ್ದು, ಆ ಬಗ್ಗೆ ಈಗ ತಾವು ವಿವರ ಬಹಿರಂಗಪಡಿಸಲು ಬಯಸುವುದಿಲ್ಲ" ಎಂದು ಅವರು ಹೇಳಿದ್ದಾರೆ.
ಅಂತೂ, ಇಲ್ಲಿದೆ ಬಾಲಿವುಡ್, ಸುಮ್ಮನೇಕೆ ಹಾಲಿವುಡ್ ಎನ್ನುತ್ತಾ ಬಿಂದಾಸ್ ಆಗಿದ್ದಾರೆ ಬಿಬೊ...