Publish Date: Thu, 18 Oct 2007 (19:39 IST)
Updated Date: Thu, 18 Oct 2007 (19:39 IST)
ಬಾಲಿವುಡ್ ಚಿತ್ರರಂಗದ ಖ್ಯಾತ ನಟ ರಾಜಕುವರ ಸೈಫ್ ಅಲಿಖಾನ್ ಬಾಲಿವುಡ್ ಬೆಡಗಿ ಖ್ಯಾತ ನಟಿ ಕರೀನಾ ಕಪೂರ್ ಅವರೊಂದಿಗೆ ಪ್ರೇಮಸಂಬಂಧವಿದೆ ಎಂದು ಕರೀನಾಳ ಸಮ್ಮುಖದಲ್ಲಿ ಲಕ್ಮೆ ಫ್ಯಾಶನ್ ವೀಕ್ ಸಮಾರಂಭದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಳೆದ ಹಲವು ತಿಂಗಳುಗಳಿಂದ ಸುದ್ದಿಗಳ ಉಹಾಪೋಹಗಳಿಗೆ ತೆರೆ ಎಳೆಯಲು ಬಯಸಿದ್ದೆನೆ ಎಂದು ಹೇಳಿದ್ದಾರೆ.
ಬಾಲಿವುಡ್ ಉದ್ಯಮದ ಹೆಸರಾಂತ ಫ್ಯಾಶನ್ ಡಿಜೈನರ್ ಮನೀಶ್ ಮಲ್ಹೋತ್ರಾ ಅವರು ಆಯೋಜಿಸಿದ ಫ್ಯಾಶನ್ ಕರೀನಾ ಮತ್ತು ಸೈಫ್ ಪರಸ್ಪರ ಆಲಿಂಗಿಸಿಕೊಂಡು ಭಾಗಿಯಾಗಿರುವುದು ಎಲ್ಲರ ಹುಬ್ಬೇರಲು ಕಾರಣವಾಗಿದೆ.
ಶಹೀದ್ ಕಪೂರ್ ಗೈರುಹಾಜರಿ ಅವರ ಸಂಬಂಧಗಳಿಗೆ ಇನ್ನಷ್ಟು ಮೆರಗು ತಂದಿದೆ.ಆದರೆ ಕರೀನಾಳ ಪ್ರೀಯಕರನೆಂದು ಖ್ಯಾತಿಯಾದ ಬಾಲಿವುಡ್ ನಟ ಶಹೀದ್ ಕಪೂರ್ ಕರೀನಾಳ ಚೆಲ್ಲಾಟಗಳ ಬಗೆಗೆ ಮೂಕಪ್ರೇಕ್ಷಕರಾಗಿರುವುದು ಬಾಲಿವುಡ್‌ನಲ್ಲಿ ಉಹಾಪೋಹಗಳಿಗೆ ಕಾರಣವಾಗಿದೆ.
ಕಳೆದ ವರ್ಷ ವಿಲ್ಸ್ ಇಂಡಿಯಾ ಆಯೋಜಿಸಿದ ಲೈಫ್ ಸ್ಟೈಲ್ ಫ್ಯಾಶನ್ ಶೋನಲ್ಲಿ ಕರೀನಾ ಶಹೀದ್‌ನೊಂದಿಗೆ ಭಾಗವಹಿಸಿದ್ದಳು.
ಅಕ್ಟೋಬರ್ 5 ರಂದು ನವದೆಹಲಿಯ ನೈಟ್ ಕ್ಲಬ್ ಒಂದರಲ್ಲಿ ಸೈಫ್ ಮತ್ತು ಕರೀನಾ ಪರಸ್ಪರ ಅಪ್ಪಿಕೊಂಡು ನೃತ್ತಿಸುತ್ತಿರುವ ದೃಶ್ಯವನ್ನು ಛಾಯಾಗ್ರಾಹಕ ಸೆರೆಹಿಡಿದಿದ್ದರೂ ಒತ್ತಾಯದಿಂದ ಛಾಯಾಗ್ರಾಹಕನ ಕ್ಯಾಮರಾದಲ್ಲಿರುವ ರೀಲ್‌ನ್ನು ಅಳಿಸಿಹಾಕಿದ್ದರು.