ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕವೂ ಕರೀನ ಕಪೂರ್ ಪಾಪ್ಯುಲಾರಿಟಿ ಕಡಿಮೆ ಆಗೇ ಇಲ್ಲ. ಆಕೆಯ ಸೆಕ್ಸಿ ಮೈ ಹೊಳಪು ಇನ್ನು ಜಾಸ್ತಿ ಆಗಿದೆ ವಿನಃ ಕಡಿಮೆ ಉಹುಂ ಆಗೇ ಇಲ್ಲ ಬಿಡಿ. ಆಕೆಯ ಬಗ್ಗೆ ಇರುವ ಅಭಿಮಾನ ಎಷ್ಟರ ಮಟ್ಟಿಗೆ ಇದೆ ಅಂದ್ರೆ ಸ್ಮಾಲ್ ಮತ್ತು ಬಿಗ್ ಸ್ಕ್ರೀನ್ ಎರಡರಲ್ಲೂ ಕರೀನಾ ಕರೀನಾ !
ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಆಕೆ ಅಂದ್ರೆ ಸಾಯ್ತಾರೆ ಅಭಿಮಾನಿಗಳು.
ಆದರೆ ಆಕೆಗೆ ಕೊಡುವ ಸಂಭಾವನೆ ವಿಷಯದಲ್ಲಿ ಎಂದಿಗೂ ರಾಜಿ ಆಗಿಲ್ಲ ಈ ಚೆಲುವೆ . ಒಂದು ಕಾಲದಲ್ಲಿ ಸೈಫ್ ಸಿನಿಮಾಕ್ಕೂ ಆಕೆ ಬೇಕಾದಷ್ಟು ದುಡ್ಡು ತೆಗೆದು ಕೊಂಡು ನಟಿಸಿದ್ದಳು .
ಲೆಬನಾನ್ ನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಡ್ಯಾನ್ಸ್ ಮಾಡಲು ಆಕೆ ತೆಗೆದುಕೊಂಡ ಅಮೌಂಟು ಸುಮಾರು ಒಂದೂವರೆ ಕೋಟಿ ರೂಪಾಯಿ . ಅರಬ್ಸ್ ಗಾಟ್ಸ್ ಟ್ಯಾಲೆಂಟ್ ಹೆಸರಿನ ಈ ರಿಯಾಲಿಟಿ ಷೋ ನಲ್ಲಿ ಆಕೆ ಭಾಗವಹಿಸಲೆಂದು ಪಡೆದ ಮೊತ್ತ ಇಷ್ಟೇ ಬಿಡಿ! ಅಷ್ಟೇ ಅಲ್ಲದೆ ಈ ರಿಯಾಲಿಟಿ ಶೋನಲ್ಲಿ ಡ್ಯಾನ್ಸ್ ಮಾಡಿದ ಬಳಿಕ ಪಡೆದ ಗಿಫ್ಟ್ ಸಹ ಭಾರಿಯಾಗೆ ಇತ್ತು ಅಂತಾರೆ ಅಲ್ಲಿದ್ದವರು !
ಬಾಲಿವುಡ್ ನಟಿಗೆ ಈ ಪರಿ ದುಡ್ಡು ಸಿಕ್ಕೋದು ನಿಜಕ್ಕೂ ಗ್ರೇಟೆ ಬಿಡಿ ಅಂತಾರೆ ಬಿ ಟೌನ್ ಮಂದಿ ಸೈಫ್ ಜೊತೆ ಮದುವೆ ಆದ ಬಳಿಕ ಆಕೆ ಲೈಫ್ ನಲ್ಲಿ ಒಳ್ಳೆ ಟರ್ನ್ ಸಿಕ್ಕಿದೆ ಅಂತಾರೆ ಎಲ್ರು.. ಸೈಫ್ ಈ ಬಗ್ಗೆ ಹೆಂಡ್ತಿ ಹತ್ರ ದುಡ್ಡು ಕೇಳದಿದ್ದರೆ ಸಾಕು.. ಹೇಳೋಕೆ ಆಗಲ್ಲ ಹೆಂಡತಿಗೆ ತಕ್ಕ... !