Publish Date: Wed, 25 Jul 2007 (13:19 IST)
Updated Date: Wed, 25 Jul 2007 (13:18 IST)
ಬಾಲಿವುಡ್ ತಾರೆಯರ ಅಭಿಮಾನಿಗಳೀಗ ಬೆಚ್ಚಿಬೀಳುವಂತಾಗಿದೆ. ಸಿನಿಮಾದಲ್ಲಿ ಗುಂಡು-ತುಂಡು, ಕತ್ತಿ ಲಾಂಗ್, ಬೆಡ್‌ರೂಮ್ ಸೀನ್‌ಗಳಲ್ಲಿ ವಿಜ್ರಂಭಿಸುವವರೆಲ್ಲಾ ನಿಜಜೀವನದಲ್ಲಿ ಭಿನ್ನವಾಗಿರುತ್ತಾರೆ ಎಂಬುದು ಇದಕ್ಕೆ ಕಾರಣ.
ಇಂತಹ ಸುದ್ದಿಯೊಂದು ಇಲ್ಲಿದೆ. ಜಾಗತಿಕ ಪ್ರಾಣಿದಯಾ ಸಂಘಟನೆ (ಪೆಟಾ)ಕೊಡಮಾಡುವ ಸುಂದರ ಸಸ್ಯಾಹಾರಿ ಪ್ರಶಸ್ತಿ ಈ ಬಾರಿ ಬಾಲಿವುಡ್ ಬೆಡಗಿ ಕರೀನಾ ಕಪೂರ್ ಹಾಗೂ ಮಾಧವನ್ ಇವರಿಗೆ ಲಭಿಸಿದೆ.
ಪೆಟಾ ಸಂಘಟನೆ ಹಮ್ಮಿಕೊಂಡಿದ್ದ ಆನ್‌ಲೈನ್ ಮತದಾನದ ಫಲಿತಾಂಶದಲ್ಲಿ ಇವರಿಬ್ಬರಿಗೆ ಹೆಚ್ಚು ಜನಮತ ಲಭಿಸಿದ್ದು, ಸಸ್ಯಾಹಾರಕ್ಕಾಗಿ ಪ್ರಶಸ್ತಿ ಲಭಿಸಿದೆ.
ಸ್ಪರ್ಧೆಯಲ್ಲಿ ರನರ್-ಅಪ್‌ಗಳಾಗಿ ಮಲ್ಲಿಕಾ ಶೆರಾವತ್ , ಮಹಿಮಾಚೌಧರಿ, ಶಾಹೀದ್ ಕಪೂರ್, ರಜನೀಶ್ ದುಗ್ಗಲ್ ಮುಂತಾದವರಿದ್ದಾರೆ ಎಂಬುದೂ ಗಮನಾರ್ಹ ವಿಷಯ.
ಮಹಿಳಾ ವಿಭಾಗದಲ್ಲಿ ಪ್ರಶಸ್ತಿ ಪಡೆದ ಕರೀನಾ ಇದಕ್ಕೆ ಅರ್ಹತೆ ಪಡೆದ ಸುಂದರ ಮುಖಭಾವ ಹೊಂದಿದ್ದು, ಇದಕ್ಕೆ ಸಸ್ಯಾಹಾರವೇ ಕಾರಣ ಎಂಬುದೀಗ ಮನದಟ್ಟುಮಾಡಿದಂತಾಗಿದೆ. ಕರೀನಾಗೆ ಇತ್ತೀಚೆಗಷ್ಟೇ 'ಓಂಕಾರ'ದ ನಟನೆಗಾಗಿ ಶ್ರೇಷ್ಠತೆಯ ಪ್ರಶಸ್ತಿ ಲಭಿಸಿತ್ತು.
ಪುರುಷ ವಿಭಾಗದಲ್ಲಿ ಮಾಧವನ್ ಕಿರುತೆರೆ ಹಾಗೂ ಹಿರಿತೆರೆಗಳಲ್ಲಿ ಬಹಳಷ್ಟು ಸಾಧನೆ ನಡೆಸಿದವರಾಗಿದ್ದಾರೆ. ಯುವ ಜನತೆಗೆ ಎಂದೆಂದೂ ಸಸ್ಯಾಹಾರಿಗಳಾಗಿರಿ, ದೇಹಾರಾರ್ಢ್ಯ ಹೊಂದಿರಿ ಎಂಬುದನ್ನೇ ಮಾಧವನ್ ತಿಳಿಸುವ ಹಿತೋಕ್ತಿ. ಇದೆಲ್ಲವನ್ನೂ ಪರಿಗಣಿಸಿ ಅವರಿಗೆ ಪ್ರಶಸ್ತಿ ಲಭಿಸಿದೆ.