Article Bollywood Gossips %e0%b2%95%e0%b2%b0%e0%b3%80%e0%b2%a8%e0%b2%be %e0%b2%8e%e0%b2%b2%e0%b3%8d%e0%b2%b2%e0%b3%8b %e0%b2%b8%e0%b3%88%e0%b2%ab%e0%b3%8d %e0%b2%85%e0%b2%b2%e0%b3%8d%e0%b2%b2%e0%b3%86 108071900037_1.htm

Select Your Language

Notifications

webdunia
webdunia
webdunia
webdunia

ಕರೀನಾ ಎಲ್ಲೋ ಸೈಫ್ ಅಲ್ಲೆ...!

ಕರೀನಾ ಕಪೂರ್
IFM
ನಮಗೆಲ್ಲರಿಗೂ ಗೊತ್ತಿರುವಂತೆ, ಸೈಫ್‌ಗೆ ತನ್ನ ಜೀವ(ನ)ದ ಗೆಳತಿ ಕರೀನಾಳನ್ನು ಬಿಟ್ಟಿರುವುದು ಸಾಧ್ಯವೇ ಆಗುತ್ತಿಲ್ಲ. ವಿಷಯವೇನೆಂದರೆ ಇತ್ತೀಚೆಗೆ ಕರೀನಾಳೊಂದಿಗೆ ಸಾಕಷ್ಟು ಸಮಯ ಕಳೆಯಬೇಕೆಂಬ ಬಯಕೆಯೊಂದಿಗೆ, ವಿಶ್ವದುದ್ದಕ್ಕೆ ಕರೀನಾ ಹೋದಲೆಲ್ಲಾ ಸೈಫ್ ಅವಳನ್ನು ಹಿಂಬಾಲಿಸತೊಡಗಿದ್ದಾನೆ.

ಇತ್ತೀಚೆಗೆ ಕರೀನಾ ಲಂಡನ್‌ನಲ್ಲಿದ್ದಳು, ಪುಣ್ಯಕ್ಕೆ ಸೈಫ್ ಕೂಡ ತನ್ನದೇ ನಿರ್ಮಾಣ ಸಂಸ್ಥೆಯ ಚಿತ್ರದ ಚಿತ್ರೀಕರಣಕ್ಕಾಗಿ ಅಲ್ಲಿದ್ದ. ಆದರೆ ಈಗ ಈ ಜೋಡಿ ಹಕ್ಕಿಗಳು ಅಮೆರಿಕಾಗೆ ಹಾರುವಂತೆ ಕಾಣಿಸುತ್ತಿದೆ. ಇಮ್ತಿಯಾಜ್ ಅಲಿ ಅವರಿಂದ ನಿರ್ದೇಶಿತವಾಗುತ್ತಿರುವ ಸೈಫ್‌ನ ಮುಂದಿನ ಚಿತ್ರ ಅಮೆರಿಕಾದಲ್ಲಿ ಚಿತ್ರೀಕರಣಗೊಳ್ಳುವ ಸಾಧ್ಯತೆಗಳಿವೆ. ಸೈಫ್ ಅದೃಷ್ಟಕ್ಕೆ ಕರೀನಾ ನಟಿಸುತ್ತಿರುವ ಸಾಜಿದ್ ನಾಡಿಯಾದ್‌ವಾಲಾರ 'ಕಂಬಕ್ತ್ ಇಶ್ಕ್' ಸಹ ಅಮೆರಿಕದಲ್ಲಿ ಚಿತ್ರೀಕರಣಗೊಳ್ಳಲಿದೆ. ಕರೀನಾ ಲಾಸ್ ಏಂಜಲೀಸ್‌ನಲ್ಲಿದ್ದರೆ ಸೈಫ್ ಸಾನ್ ಫ್ರಾನ್ಸಿಸ್ಕೊದಲ್ಲಿರುತ್ತಾನೆ. ಅವರಿಬ್ಬರ ನಡುವೆ ಕೇವಲ ಒಂದು ಗಂಟೆ ಕ್ರಮಿಸಬೇಕಾದ ಅಂತರವಷ್ಟೆ. ಕೇವಲ ಕರೀನಾಳ ಬಳಿ ಸೇರಲು ಅರ್ಧ ವಿಶ್ವವೆಲ್ಲಾ ಸುತ್ತಿ ಸೈಫ್ ಸಾಗಿ ಬಂದಿದ್ದ ದೂರದ ಎದುರು ಒಂದು ಗಂಟೆ ಪ್ರಯಾಣ ಏನೇನೂ ಅಲ್ಲ. ಕರೀನಾ ಐಐಎಫ್ಎ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರದರ್ಶನ ನೀಡಲಿದ್ದುದರಿಂದ ಸೈಫ್ ಲಂಡನ್‌ನಿಂದ ಬ್ಯಾಂಕಾಕ್‌ಗೆ ಹಾರಿದ್ದರು. ಆನಂತರ ಫ್ರಾಂಕ್‌ಫರ್ಟ್‌‌ನಲ್ಲಿ ಶಾರುಖ್ ಖಾನ್‌ರ ಟೆಂಪ್ಟೇಶನ್ ಕಾರ್ಯಕ್ರಮದಲ್ಲಿ ಕರೀನಾ ಭಾಗವಹಿಸುತ್ತಿದ್ದುದರಿಂದ ಸೈಫ್ ಕೂಡ ಅಲ್ಲಿಗೆ ತಲುಪಿದ್ದರು. ಇಷ್ಟೆಲ್ಲದರ ನಂತರ ಕರೀನಾಳ ಹಿಂದೆ ವಿಶ್ವವೆಲ್ಲಾ ಸುತ್ತಿ ದಣಿದಿರುವ ಸೈಫ್ ಈಗಲಾದರೂ ಅವಳು ಸನಿಹದಲ್ಲಿರುವಳೆಂದು ನೆನೆದು ಒಂದಿಷ್ಟು ನೆಮ್ಮದಿಯ ನಿಟ್ಟುಸಿರು ಬಿಡಬಹುದು!

Share this Story:

Follow Webdunia kannada