Article Bollywood Gossips %e0%b2%95%e0%b2%b0%e0%b3%80%e0%b2%a8%e0%b2%be %e0%b2%85%e0%b2%b7%e0%b3%8d%e0%b2%9f%e0%b2%b5%e0%b2%bf%e0%b2%a8%e0%b2%be%e0%b2%af%e0%b2%95 %e0%b2%92%e0%b2%aa%e0%b3%8d%e0%b2%aa%e0%b2%82%e0%b2%a6 107071900007_1.htm

Daily Horoscope

Select Your Language

Notifications

webdunia
webdunia
webdunia
webdunia

ಕರೀನಾ ಅಷ್ಟವಿನಾಯಕ ಒಪ್ಪಂದ

ಬಾಲಿವುಡ್
ಬಾಲಿವುಡ್‌ನ ನವಿರು ಸೌಂದರ್ಯದ ಬೆಡಗಿ ಕರೀನಾಗೆ ಇದೀಗ ಹೆಚ್ಚಿನ ಅವಕಾಶಗಳು ಹರಿದು ಬರುತ್ತಿವೆ. ಅದರಲ್ಲೊಂದು ಎಂಬಂತೆ ಅಷ್ಟವಿನಾಯಕ ಸಿನಿ ವಿಷನ್ ಲಿ. ಸಂಸ್ಥೆಯು ಮುಂದಿನ ಮೂರು ಸಿನಿಮಾಗಳಿಗಾಗಿ ಕರಿನಾ ಕಪೂರ್ ಜೊತೆ ಒಪ್ಪಂದದಲ್ಲೇರ್ಪಟ್ಟಿದೆ.

ಸಿನಿ ನಿರ್ಮಾಣ ಲಾಂಛನ ಹೊತ್ತ ಕಂಪನಿಗಳು ಬೃಹತ್ ಪ್ರಮಾಣದ ಒಪ್ಪಂದಗಳೊಂದಿಗೆ ತಾರೆಯರನ್ನು ವಶಕ್ಕೆ ತೆಗೆದುಕೊಳ್ಳುವ ಹೊಸ ಬೆಳವಣಿಗೆ ಕಂಡು ಬರತೊಡಗಿದೆ. ಅಷ್ಟವಿನಾಯಕ್ -ಕರೀನಾ ಒಪ್ಪಂದ ಈ ವಿಧಾನದ್ದೆಂದು ವಿಶ್ಲೇಷಿಸಲಾಗುತ್ತಿದೆ.

ಕಳೆದ ದಿನ ಜರುಗಿದ ಒಪ್ಪಂದದಂತೆ ಮೂರು ಸಿನಿಮಾಗಳನ್ನು ಪ್ರಸ್ತುತ ಸಿನಿಮಾ ಸಂಸ್ಥೆಗಾಗಿ ಕರಿನಾ ಅಭಿನಯಿಸಿ ಪೂರ್ಣಮಾಡಿಕೊಡಬೇಕಿದೆ ಎಂದು ವಕ್ತಾರರು ಹೇಳಿದ್ದಾರೆ. ಆದರೆ ಸಿನಿಮಗಳ ವಿವರ ಇನ್ನಷ್ಟೇ ಬಹಿರಂಗವಾಗಬೇಕಿದೆ.

ಅಷ್ಟವಿನಾಯಕ್ ಸಿನಿ ಸಂಸ್ಥೆಯು 2009ರ ವೇಳೆಗೆ ಪ್ರಸ್ತುತ 3 ಸಿನಿಮಾಗಳನ್ನು ಪೂರ್ಣಗೊಳಿಸಲು ನಿರ್ಧರಿಸಿದೆ. ಸಿನಿಮಾಗಳ ಶೀರ್ಷಿಕೆ, ಇತರ ತಾರಾಗಣಗಳ ವಿವರಕ್ಕಾಗಿ ಕಾಯಲಾಗುತ್ತಿದೆ.

Share this Story:

Follow Webdunia kannada