Article Bollywood Gossips %e0%b2%95%e0%b2%b0%e0%b3%80%e0%b2%a8%e0%b2%be %e0%b2%85%e0%b2%ad%e0%b2%bf%e0%b2%a8%e0%b2%af%e0%b2%a6 %e0%b2%97%e0%b3%8b%e0%b2%b2%e0%b3%8d%e2%80%8c%e0%b2%ae%e0%b2%be%e0%b2%b2%e0%b3%8d 107072100008_1.htm

Select Your Language

Notifications

webdunia
webdunia
webdunia
webdunia

ಕರೀನಾ ಅಭಿನಯದ ಗೋಲ್‌ಮಾಲ್

ಕರೀನಾ
IFMIFM
ಬಾಲಿವುಡ್‌ನ ಮಾದಕ ಬೆಡಗಿ ಕರೀನಾ ಕಪೂರ್ ‌ ಇದೀಗ ಹಾಸ್ಯ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೋಹಿತ್ ಶೆಟ್ಟಿ ಅವರ 'ಗೋಲ್‌ಮಾಲ್‌ ರಿಟರ್ನ್ಸ್‌'ನಲ್ಲಿ ಕರೀನಾ ಮಿಂಚಲಿದ್ದಾರೆ.

ಚಿತ್ರದ ತಾರಾಗಣದಲ್ಲಿ ಅಜಯ್‌ದೇವಗನ್, ತುಷಾರ್ ಕಪೂರ್,ಅರ್ಷಾದ್ ವರ್ಷಿ,ಶ್ರೇಯಾಸ್ ತಲ್ಪಾಡೆ ಮುಂತಾದವರಿದ್ದಾರೆ. ಶ್ರೀ ಅಷ್ಟವಿನಾಯಕ ಸಿನಿ ಸಂಸ್ಥೆಯೊಂದಿಗಿನ ಮೂರು ಒಪ್ಪಂದಗಳಲ್ಲೊಂದು ಈ ಚಿತ್ರ ಎಂಬುದು ಹೊಸ ವಿಚಾರ.

ಕರೀನಾ ಅವರ ಇತರ ಇನ್ನೊಂದು ಚಿತ್ರ ಅಕ್ಟೋಬರ್‌ನಲ್ಲಿ ತೆರೆಕಾಣಲಿದೆ. ಶಾಹೀದ್ ಕಪೂರ್ ಅವರು ನಾಯಕನಾಗಿ ಹೊರ ಹೊಮ್ಮಲಿರುವ ಈ ಚಿತ್ರಕ್ಕೆ ಇನ್ನಷ್ಟೇ ಹೆಸರಿಡಬೇಕಿದೆ. 2009ರ ವೇಳೆಗೆ ಕರೀನಾ ಅವರ ಇತರ ಇನ್ನಷ್ಟು ಚಿತ್ರಗಳು ಸಿದ್ಧವಾಗುವ ನಿರೀಕ್ಷೆ ಇದೆ.

ಪ್ರಸ್ತುತ ಗೋಲ್‌ಮಾಲ್ ಕರೀನಾ ಅವರ ಪ್ರಮುಖ ಮೂರು ಚಿತ್ರಗಳಲ್ಲಿ ಮೊದಲನೆಯದು. ಗೋಲ್‌ಮಾಲ್‌ ಚಿತ್ರೀಕರಣವು ನವೆಂಬರ್‌ನಲ್ಲಿ ದುಬೈನಲ್ಲಿ ಜರುಗಲಿದೆ.

Share this Story:

Follow Webdunia kannada