ಕರಿನಾ ಹೋದಳು ದೀಪಿಕಾ ಬಂದಳು ಡುಂ ಡುಂ ಡುಂ !
, ಶುಕ್ರವಾರ, 7 ಫೆಬ್ರವರಿ 2014 (09:58 IST)
ಕರಣ್ ಜೋಹರ್ ಅವರ ಬಹು ನಿರೀಕ್ಷಿತ ಚಿತ್ರ ಹಸೀ ತೋ ಫಸಿ ಬಿಡುಗಡೆ ಆಗಲಿದೆ ಈ ಚಿತ್ರದಲ್ಲಿ ಪರಿಣಿತಿ ಚೋಪ್ರ ಮತ್ತು ಸೀದ್ಧಾರ್ಥ್ ಮಲ್ಹೋತ್ರ ಜೊತೆಯಾಗಿದ್ದಾರೆ. ಇದೊಂದು ಹಾಸ್ಯ ಪ್ರಧಾನ ಚಿತ್ರವಾಗಿದೆ. ಇದರ ಬಗ್ಗೆ ಕರಣ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಈಗ ಆ ಚಿತ್ರಕ್ಕಿಂತ ಅವರ ಮುಂದಿನ ಪ್ರಾಜೆಕ್ಟ್ ಶುದ್ಧಿ ಬಗ್ಗೆ ಎಲ್ಲರ ಗಮನ. ಕಾರಣ ಇಷ್ಟೇ ಈ ಚಿತ್ರದಲ್ಲಿ ಪಾತ್ರವ. ಅನದರೆ ಅದರಲ್ಲಿರುವ ಕಲಾವಿದರನ್ನು ಬದಲಾವಣೆ ಮಾಡಲಾಗಿದೆ. ಈ ಚಿತ್ರವೂ ಮುಂಬರುವ ಆರುತಿಂಗಳಲ್ಲಿ ಬಿಡುಗಡೆ ಆಗಲಿದೆ. ಅದರಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ ಹೃತಿಕ್ ರೋಶನ್ . ಆದರೆ ಅವೆಲ್ಲ ಸುದ್ದಿಗಿಂತ ಗಟ್ಟಿಯಾದ ಸಂಗತಿ ಬಗ್ಗೆ ಬಾಲಿವುಡ್ ನಲ್ಲಿ ಚರ್ಚೆ ಆಗುತ್ತಿದೆ. ಆ ಚಿತ್ರದಲ್ಲಿ ಕರೀನ ಬದಲಾಗಿ ದೀಪಿಕಾ ಪಡುಕೋಣೆಯನ್ನು ಆಯ್ಕೆ ಮಾಡಿದ್ದಾರೆ ಕರಣ್ ಜೋಹರ್. ಈಗ ಸದ್ಯಕ್ಕೆ ಕರೀನಾಳೆ ಇದ್ದಾಳಾದರು ಸಹ ಸದ್ಯದಲ್ಲೇ ಆಕೆಯನ್ನು ತೆರವುಗೊಳಿಸಿ ಆ ಜಾಗಕ್ಕೆ ದೀಪಿಕ ಬರುವುದು ಬಹುತೇಕ ಖಚಿತವಾಗಿದೆ. ಬಾಲಿವುಡ್ ನಲ್ಲಿ ಇವುಗಳು ಹೊಸದಲ್ಲ ಬಿಡಿ!