Article Bollywood Gossips %e0%b2%95%e0%b2%b0%e0%b2%a3%e0%b3%8d %e0%b2%9a%e0%b2%bf%e0%b2%a4%e0%b3%8d%e0%b2%b0%e0%b2%a6%e0%b2%b2%e0%b3%8d%e0%b2%b2%e0%b2%bf %e0%b2%b6%e0%b2%be%e0%b2%b0%e0%b3%82%e0%b2%95%e0%b3%8d 108030100016_1.htm

Daily Horoscope

Select Your Language

Notifications

webdunia
webdunia
webdunia
webdunia

ಕರಣ್ ಚಿತ್ರದಲ್ಲಿ ಶಾರೂಕ್

ಕರಣ್
ಬಾಲಿವುಡ್ ಚಿತ್ರರಂಗದಲ್ಲಿ ಕಡಿಮೆ ವಯಸ್ಸಿನಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಸಾಧನೆ ಮಾಡಿದವರ ಸಾಲಿನಲ್ಲಿ ನಿರ್ದೇಶ ಕರಣ್ ಜೋಹರ್‌ಗೆ ಪ್ರಥಮ ಸ್ಥಾನ. ಕೌಟಂಬಿಕ ಹಾಗೂ ರೋಮ್ಯಾಂಟಿಕ್ ಚಿತ್ರಗಳನ್ನು ಇಲ್ಲಿಯವರೆಗೆ ನೀಡಿದ ಜೋಹರ್ ತಮ್ಮ ಮುಂದಿನ ಚಿತ್ರವನ್ನು ಭಯೋತ್ಪಾದನೆ ಕುರಿತ ಚಿತ್ರವನ್ನು ಮಾಡಲಿದ್ದಾರೆ.

ಭಯೋತ್ಪಾದನೆ ಆಧಾರಿತ ಚಿತ್ರದಲ್ಲಿ ಶಾರೂಕ್ ಖಾನ್ ನಾಯಕನ ಪಾತ್ರವಹಿಸಲಿದ್ದಾರೆ.ಕಾಜೋಲ್ ಕೂಡಾ ಚಿತ್ರನಲ್ಲಿ ನಟಿಸುವ ಅವಕಾಶವನ್ನು ಪಡೆದಿದ್ದಾರೆ. ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ಉಗ್ರರು ನಡೆಸಿದ ದಾಳಿಯ ಕುರಿತ ಕಥಾವಸ್ತುವನ್ನು ಹೊಂದಿದೆ.

ಕರಣ್ ಜೋಹರ್ ತಮ್ಮ ಚಿತ್ರಕ್ಕೆ ಖಾನ್ ಎಂದು ಹೆಸರಿಡಲಿದ್ದಾರೆ.ಹಾಗೂ ಚಿತ್ರದಲ್ಲಿ ಯಾವುದೇ ಹಾಡುಗಳಿರುವುದಿಲ್ಲ ಎಂದು ಬಾಲಿವುಡ್ ಚಿತ್ರರಂಗದ ಮೂಲಗಳು ತಿಳಿಸಿವೆ.

ಚಿತ್ರದಲ್ಲಿ ಉಗ್ರರಿಂದ ಅಪಹರಿಸಲ್ಪಟ್ಟ ವ್ಯಕ್ತಿಯ ಪಾತ್ರವನ್ನು ಶಾರೂಕ್ ಮಾಡುತ್ತಿದ್ದು,ಸೆಪ್ಟೆಂಬರ್ 11ರ ಘಟನೆಯ ನಂತರ ಮುಸ್ಲಿಂ ಹೆಸರಿನ ವ್ಯಕ್ತಿಗಳನ್ನು ಅನುಮಾನಾಸ್ಪದವಾಗಿ ನೋಡುವ ಘಟನೆಗಳನ್ನು ಚಿತ್ರದಲ್ಲಿ ರೂಪಿಸಲಾಗಿದೆ.

ತಮ್ಮ ಚಿತ್ರಕ್ಕೆ "ಖಾನ್ " ಎಂದು ಹೆಸರಿಡುವುದರೊಂದಿಗೆ "ಕೆ" ದಿಂದ ಆರಂಭವಾಗುವ ಅಕ್ಷರಗಳೊಂದಿಗೆ ಭಾವನಾತ್ಮಕತೆಯನ್ನು ಕರಣ್ ಜೋಹರ್ ಮುಂದುವರೆಸಿದ್ದಾರೆ.

Share this Story:

Follow Webdunia kannada