ಕಮಲ್ ಹಾಸನ್ ದೆಹಲಿಗೆ ಹೋಗಿದ್ದು ಯಾಕೆ?
, ಬುಧವಾರ, 2 ಏಪ್ರಿಲ್ 2014 (09:24 IST)
ಕಮಲಾ ಹಾಸನ್ ಭಾರತೀಯ ಚಿತ್ರರಂಗದ ವಿಭಿನ್ನ ನಟ. ಅವರ ಬಗ್ಗೆ ಚಿತ್ರರಂಗದಲ್ಲಿ ವಿಶೇಷ ಆದರ. ಕಾರಣ ಅವರ ವಿನೂತನವಾದ ಪ್ರಯೋಗಗಳು. ಇದರಿಂದ ಹೆಚ್ಚು ಹೆಚ್ಚು ಅಭಿಮಾನಿಗಳನ್ನು ತಮ್ಮದಾಗಿಸಿ ಕೊಂಡಿದ್ದಾರೆ .ಕಮಲಾ ಹಾಸನ್ ಇತ್ತೀಚೆಗೆ ದೆಹಲಿಗೆ ಹೋಗಿದ್ದರು ಅದಕ್ಕೆ ಕಾರಣ ಏನು ? ಅವರು ಈಗ ಕನ್ನಡ ಚಿತ್ರ ಚಿತ್ರರಂಗದ ಪ್ರಸಿದ್ಧ ನಟ ನಿರ್ದೇಶಕ ರಮೇಶ್ ಅರವಿಂದ್ ಅವರ ಚಿತ್ರದ ನಟನೆಯಲ್ಲಿ ನಿರತರಾಗಿದ್ದಾರೆ. ಚಿತ್ರಕ್ಕೆ ಸಂಬಂಧ ಪಟ್ಟಂತೆ ಅಲ್ಲಿಗೆ ಹೋಗಿದ್ದರಾ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡಿತ್ತು.
ಆದರೆ ಅವರು ಉತ್ತಮ ವಿಲನ್ ಚಿತ್ರಕ್ಕೆ ಸಂಬಂಧ ಪಟ್ಟಂತೆ ನವ ದೆಹಲಿಗೆ ಹೋಗಿರಲಿಲ್ಲ ಅವರು ಯುಗಾದಿ ಹಬ್ಬದ ಆಚರಣೆಗೆಂದು ಮತ್ತು ಪದ್ಮಭೂಷಣ ಪ್ರಶಸ್ತಿ ಪಡೆಯಲೆಂದು ಅಲ್ಲಿಗೆ ಹೋಗಿದ್ದಾರೆ ವಿನಃ ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳಲು ಅಲ್ಲವೇ ಅಲ್ಲ .
ಕಮಲ್ ಈಗ ಉತ್ತಮ ವಿಲನ್ ಚಿತ್ರದ ಜೊತೆಗೆ ಬಹು ನಿರೀಕ್ಷಿತ ಚಿತ್ರ ವಿಶ್ವ ರೂಪಂ2 ರಲ್ಲಿ ಬ್ಯುಸಿ ಆಗಿದ್ದಾರೆ ಈ ಉಳಗನಾಯಗನ್ .