ಕನ್ನಡದಲ್ಲಿ ಐಶ್ವರ್ಯ ರೈ ನಟಿಸ್ತಾರಾ?
, ಗುರುವಾರ, 20 ಮಾರ್ಚ್ 2014 (10:10 IST)
ಗಾಳಿ ಸುದ್ದಿಗೇನು ಬರವಿಲ್ಲ ಚಿತ್ರ ರಂಗದಲ್ಲಿ. ಆದರೆ ಅದು ನಿಜ ಆಗ್ಲಿ ಅಂತ ಕಾಯೋರು ಸಹಿತ ತುಂಬಾ ಮಂದಿ ಇದ್ದಾರೆ. ಬಾಲಿವುಡ್ನ ಅಪರೂಪದ ಸುಂದರಿ , ಕರಾವಳಿ ಚೆಲುವೆ ,ಅಭಿಷೇಕ್ ಬಚ್ಚನ್ ಅರ್ಧಾಂಗಿ ಮತ್ತು ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಸೊಸೆ ಐಶ್ವರ್ಯ ರಾಯ್ ಬಚ್ಚನ್ ಕನ್ನಡ ಸಿನಿಮಾದ ಮನಮೋಹಕದಲ್ಲಿ ನಟಿಸುತ್ತಿದ್ದಾರೆ. ಇದು ಈಗ ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಸೀರಿಯಸ್ ಆಗಿ ಹರಡಿರುವ ಸುದ್ದಿ ಆಗಿದೆ ಎಂದೇ ಹೇಳ ಬಹುದು. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಹೀರೋ.
ನಿರ್ಮಾಪಕರು ಈ ಚಿತ್ರದಲ್ಲಿ ಐಶ್ ನಟಿಸಲು ಬೇಕಾದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ ಸದ್ಯಕ್ಕೆ ಆಕೆ ಓಕೆ ಅಂದಿದ್ದಾರಾ ಎನ್ನುವುದು ಗೊತ್ತಿಲ್ಲ, ಕಾರಣ ಇಷ್ಟೇ ಐಶ್ ತನ್ನ ಮಗಳ ಲಾಲನೆ ಪಾಲನೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಅದಕ್ಕಾಗಿ ಆಗಿ ಮಣಿರತ್ನಂ ಅವರ ಚಿತ್ರದಲ್ಲಿ ನಟಿಸುತ್ತಿಲ್ಲ. ಮನಮೋಹಕ ಚಿತ್ರದಲ್ಲಿ ಐಶ್ವರ್ಯ ರಾಯ್ ನಟಿಸಲು ಒಪ್ಪದೇ ಇದ್ದರು ಸಹ ಬಾಲಿವುಡ್ ನಟಿಯನ್ನು ಕರೆತರುವುದು ಬಹುತೇಕ ನಿಶ್ಚಯ ಆಗಿದೆ. ಯಾರು ಎನ್ನುವುದರ ಬಗ್ಗೆ ಕಾದು ನೋಡ ಬೇಕಿದೆ !