Publish Date: Sat, 31 Jan 2009 (14:44 IST)
Updated Date: Sat, 31 Jan 2009 (14:44 IST)
ಕನ್ನಡದ ಗುಂಡೂರಾವ್, ತಮಿಳಿನಲ್ಲಿ 'ನಾಗೇಶ್' ಹೆಸರಿನಲ್ಲಿ ಸಿದ್ಧಿಯನ್ನೂ ಪ್ರಸಿದ್ಧಿಯನ್ನೂ ಸಾಧಿಸಿದ್ದ ಹೆಸರಾಂತ ಹಾಸ್ಯ ನಟ, ಅಲ್ಪಕಾಲದ ಅನಾರೋಗ್ಯದ ಬಳಿಕ ಶನಿವಾರ ನಿಧನರಾದರು.
ಹಾಸ್ಯ ಮತ್ತು ಭಾವನಾತ್ಮಕ ಪಾತ್ರಗಳಿಗೆ ಜೀವ ತುಂಬುತ್ತಾ, ತಮಿಳು ಸಿನಿಮಾ ರಂಗದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದ ನಾಗೇಶ್, 1960-70ರ ಅವಧಿಯಲ್ಲಿ ಎಂಜಿಆರ್-ಶಿವಾಜಿ ಗಣೇಶನ್ ನಂತರದ ಅತ್ಯಂತ ಬೇಡಿಕೆಯುಳ್ಳ ನಟರಾಗಿದ್ದರು ಮಾತ್ರವಲ್ಲ, ಈ ಸುಪರ್‌ಸ್ಟಾರ್‌ಗಳ ಬಹುತೇಕ ಎಲ್ಲ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.
1933ರಲ್ಲಿ ಕನ್ನಡದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದ ಅವರ ಮೂಲ ನಾಮಧೇಯ ಗುಂಡೂರಾವ್ ಆಗಿದ್ದು, ಅವರು ಸಾವಿರ ಚಿತ್ರಗಳ ಸರದಾರರಾಗಿದ್ದು, ಹಾಸ್ಯ ಪಾತ್ರ ಮಾತ್ರವಲ್ಲದೆ, ಗಂಭೀರ ಪಾತ್ರಗಳನ್ನೂ ಸಮರ್ಥವಾಗಿ ನಿಭಾಯಿಸಿದವರು.
ಕಮಲ ಹಾಸನ್ ನಟನೆಯ 'ಅಪೂರ್ವ ಸಹೋದರ್ಗಳ್' ಚಿತ್ರದಲ್ಲಿ ಅವರು ವಿಲನ್ ಪಾತ್ರ ವಹಿಸಿದ್ದು, ಈ ಚಿತ್ರವು ಹಿಂದಿಗೂ 'ಅಪ್ಪು ರಾಜಾ' ಹೆಸರಿನಲ್ಲಿ ಡಬ್ ಆಗಿತ್ತು.