Article Bollywood Gossips %e0%b2%95%e0%b2%a4%e0%b3%8d%e0%b2%b0%e0%b2%bf%e0%b2%a8%e0%b2%be%e0%b2%b3 %e0%b2%92%e0%b2%82%e0%b2%a6%e0%b3%81 %e0%b2%b0%e0%b2%be%e0%b2%a4%e0%b3%8d%e0%b2%b0%e0%b2%bf%e0%b2%97%e0%b3%86 1 %e0%b2%95%e0%b3%8b%e0%b2%9f%e0%b2%bf 108102500015_1.htm

Daily Horoscope

Select Your Language

Notifications

webdunia
webdunia
webdunia
webdunia

ಕತ್ರಿನಾಳ ಒಂದು ರಾತ್ರಿಗೆ 1 ಕೋಟಿ !

ಕತ್ರಿನಾ ಕೈಫ್
IFM
ಖಂಡಿತಾ ಹಾಗೆಲ್ಲ ಯೋಚನೆ ಮಾಡಬೇಡಿ. ಹಾಗಂತ ಶೀರ್ಷಿಕೆ ಸುಳ್ಳಲ್ಲ- ನಿಜ. ಕತ್ರಿನಾಳ ಒಂದು ರಾತ್ರಿಗೆ ಒಂದು ಕೋಟಿ ಕೊಡಬೇಕಾದರೆ ಏನೋ ವಿಶೇಷ ಇರಬೇಕಲ್ಲವೇ? ಹೌದು - ವಿಶೇಷವಿದೆ. ಅದೇ ಹೊಸವರ್ಷ.

ಕಳೆದ ವರ್ಷ ಮಾದಕ ನಟಿ ಬಿಪಾಶ ಬಸು, ಅದಕ್ಕಿಂತಲೂ ಮುಂಚಿನ ವರ್ಷ ಸೆಕ್ಸ್‌ಬಾಂಬ್ ಮಲ್ಲಿಕಾ ಶೆರಾವತ್ ರಾತ್ರಿಯಿಡೀ ಕುಣಿದು 'ಅಭಿಮಾನಿ'ಗಳ ಮನತಣಿಸಿದ್ದ ಮುಂಬೈನ ಜೆ.ಡಬ್ಲ್ಯೂ. ಮ್ಯಾರಿಯೋಟ್ ಹೊಟೇಲ್‌ನಲ್ಲಿ ಈ ಬಾರಿ ಸೈಲೆಂಟ್ ಕಿಲ್ಲರ್ ಕತ್ರಿನಾ ಕೈಫ್ ಕಾಣಿಸಿಕೊಳ್ಳಲಿದ್ದಾರೆ. ಹೊಸವರ್ಷಾಚರಣೆಯ ಅಂಗವಾಗಿ ಪ್ರತಿವರ್ಷದ ಡಿಸೆಂಬರ್ 31ರ ರಾತ್ರಿ ನಡೆಯುವ ಮೋಜಿನ ಕೂಟದ ತಾಂಡವ ಈ ವರ್ಷ ಕತ್ರಿನಾ ಕೈಫ್‌ ಪಾಲಿಗೊಲಿದಿದೆ. ಅದಕ್ಕಾಗಿ ಹೊಟೇಲ್‌ನವರು ಅವಳಿಗೆ ಕೊಡುತ್ತಿರುವುದು ಬರೋಬ್ಬರಿ ಒಂದು ಕೋಟಿ ರೂಪಾಯಿ!

ಅಂದು ಸೆಕ್ಸೀ ಉಡುಪು ಧರಿಸಿ ಕುಣಿಯಲಿರುವ ಕತ್ರಿನಾಳ ಉಡುಗೆ ವಿನ್ಯಾಸ ರಾಕಿ ಮಾಡಲಿದ್ದು, ಕೊರಿಯೊಗ್ರಫಿ ಹೊಣೆ ಬಾಸ್ಕೋ ಚೇಸರ್‌ರಿಗೆ. "ಕತ್ರಿನಾ ಹೊಸವರ್ಷಾಚರಣೆ ಸಂಭ್ರಮದಲ್ಲಿ ನೃತ್ಯ ಮಾಡಲಿದ್ದು, ಅದಕ್ಕಾಗಿ 1 ಕೋಟಿ ಪಡೆಯುತ್ತಿರುವುದು ಹೌದು" ಎಂದು ಹೆಸರು ಹೇಳಲಿಚ್ಛಿಸದ ಮೂಲಗಳು ತಿಳಿಸಿವೆ.

ಇತ್ತ, ಪಡೆಯಲಿರುವ ಮೊತ್ತದ ಬಗ್ಗೆ ಖಚಿತಪಡಿಸಲು ನಿರಾಕರಿಸಿರುವ ಕತ್ರಿನಾ ಕೈಫ್, ನೃತ್ಯ ಪ್ರದರ್ಶನ ಮಾಡುತ್ತಿರುವುದು ಹೌದೆಂದು ಒಪ್ಪಿಕೊಂಡಿದ್ದಾರೆ.

ಹಾಂಕಾಂಗ್‌‌ನಲ್ಲಿ ಹುಟ್ಟಿ 14ರ ಹರೆಯದಲ್ಲೇ ಮಾಡೆಲಿಂಗ್ ಹುಚ್ಚು ಬೆಳೆಸಿಕೊಂಡಿದ್ದ ಈಕೆ ಬಾಲಿವುಡ್‌ಗೆ ಬಂದದ್ದು 'ಬೂಮ್' ಚಿತ್ರದ ಮೂಲಕ. ಅತ್ಯಂತ ಕಳಪೆ ಗುಣಮಟ್ಟದ ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಗುಲ್ಶನ್ ಗ್ರೋವರ್, ಜಾಕಿ ಶ್ರಾಫ್, ಸಲ್ಮಾನ್‌ರಶ್ದಿಯ ಮಾಜಿ ಪ್ರೇಯಸಿ ಪದ್ಮಲಕ್ಷ್ಮೀ, ಝೀನತ್ ಅಮಾನ್, ಮಧು ಸಪ್ರೆ ಮತ್ತು ಕತ್ರಿನಾ ಕೈಫ್ ನಟಿಸಿದ್ದರು. ಫ್ಯಾಷನ್‌ಲೋಕದ ಪಾತಕಕೃತ್ಯಗಳನ್ನು ವಿವರಿಸುವ ಗೋಜಿನಲ್ಲಿ ಅತಿ ಕಡಿಮೆ ಬಟ್ಟೆಯಲ್ಲಿ ನಾಯಕಿಯನ್ನು ತೋರಿಸಲಾಗಿತ್ತು.

ನಂತರದ ದಿನಗಳಲ್ಲಿ ಅವಕಾಶಗಳನ್ನು ನಿಧಾನವಾಗಿ ಗಿಟ್ಟಿಸಿಕೊಂಡ ಕೈಫ್- ಸರ್ಕಾರ್, ಮೈನೆ ಪ್ಯಾರ್ ಕ್ಯೂಂ ಕಿಯಾ, ಹಮ್ ಕೋ ದೀವಾನಾ ಕರ್ ಗಯೆ, ನಮಸ್ತೇ ಲಂಡನ್, ಆಪ್ನೇ, ಪಾರ್ಟ್ನರ್, ವೆಲ್‌ಕಮ್, ರೇಸ್, ಸಿಂಗ್ ಈಸ್ ಕಿಂಗ್ ಮುಂತಾದ ಚಿತ್ರಗಳಲ್ಲಿ ಮಿಂಚಿದ್ದಳು. ಹಲವಾರು ಚಿತ್ರಗಳನ್ನು ಕೈಯಲ್ಲಿ ಹಿಡಿದುಕೊಂಡಿರುವ ಕೈಫ್ ಈಗ ಬಾಲಿವುಡ್‌ನ ಬಹುಬೇಡಿಕೆಯ ನಟಿಯೂ ಹೌದು.

ಚಿತ್ರರಂಗದಲ್ಲಿ ಅವಕಾಶಗಳನ್ನು ಒದಗಿಸಿಕೊಡಲು 'ಬ್ಯಾಡ್‌ಬಾಯ್' ಸಲ್ಮಾನ್ ಖಾನ್ ಸಹಾಯ ಮಾಡಿದ್ದ ಎಂದು ಸ್ವತ: ಅವಳೇ ಒಪ್ಪಿಕೊಂಡು ಆತನ ಜತೆ ತಿರುಗುತ್ತಿದ್ದಳು. ಸಲ್ಮಾನ್ ಜೈಲಿಗೆ ಹೋದಾಗಲೂ ಆಗಾಗ ಭೇಟಿ ಕೊಟ್ಟು ಗಾಸಿಪ್‌ಗೆ ಕಾರಣವಾದ ಈಕೆ ಇತ್ತೀಚಿನ ದಿನಗಳಲ್ಲಿ ಮನಸ್ಸು ಬದಲಾಯಿಸಿದಂತಿದೆ. ಈಗ ಆತನಿಂದ ದೂರವಾಗಿದ್ದಾಳೆ ಎನ್ನುತ್ತಿದೆ ಬಾಲಿವುಡ್ ಮೂಲಗಳು.


Share this Story:

Follow Webdunia kannada