Select Your Language

Notifications

webdunia
webdunia
webdunia
webdunia

ಕತ್ರಿನ ಮತ್ತು ರಣಬೀರ್ ಸಹ ಜೀವನ ನಡೆಸಲು ಸಿದ್ಧ ಆಗಿದ್ದಾರ ?!

ಕತ್ರಿನ ಮತ್ತು ರಣಬೀರ್ ಸಹ ಜೀವನ ನಡೆಸಲು ಸಿದ್ಧ ಆಗಿದ್ದಾರ ?!
, ಶುಕ್ರವಾರ, 18 ಏಪ್ರಿಲ್ 2014 (10:41 IST)
PR
ಬಾಲಿವುಡ್ ನಲ್ಲಿ ಮದುವೆಗೆ ಮುನ್ನ ಒಟ್ಟಿಗೆ ಇರುವ ಸಂಪ್ರದಾಯ ಹೊಸದಲ್ಲ.ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಸಲುವಾಗಿ ಇಂತಹ ಜೀವನಶೈಲಿಗೆ ಅವರು ಆದ್ಯತೆ ನೀಡುತ್ತಾರೆ. ಇತ್ತೀಚಿನ ಅಂತಹ ಜೋಡಿಗಳಲ್ಲಿ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಸೇರ್ಪಡೆ ಆಗುತ್ತಾರೆ. ಅವರು ಅನೇಕ ವರ್ಷಗಳ ಕಾಲ ಒಟ್ಟಿಗೆ ಇದ್ದು.ಆನಂತರ ಮದುವೆ ಆದದ್ದು ಎಲ್ಲರಿಗು ಗೊತ್ತೇ ಇದೆ. ಈಗ ಆ ಸಾಲಿಗೆ ಮತ್ತೊಂದು ಜೋಡಿ ಸೇರ್ಪಡೆ ಆಗಿದೆ.

ಕಳೆದ ಕೆಲವು ವರ್ಷಗಳಿಂದ ಕತ್ರಿನ ಕೈಫ್ ಮತ್ತು ರಣಬೀರ್ ಕಪೂರ್ ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಾ ಇದ್ದ ಸಂಗತಿ ಎಲ್ಲರಿಗೂ ಗೊತ್ತೇ ಇದೆ. ಈಗ ಅವರು ಒಬ್ಬರನ್ನೊಬ್ಬರು ಬಿಟ್ಟು ಇರಲಾರದಂತಾಗಿದ್ದಾರೆ. ಆದ್ದರಿಂದ ಆದಷ್ಟು ಬೇಗ ಸಂಸಾರ ನಡೆಸುವತ್ತ ಯೋಜನೆ ಕೈಗೊಂಡಿದ್ದಾರೆ ಈ ಜೋಡಿ. ಈ ಕಾರಣಕ್ಕಾಗಿ ರಣಬೀರ್ ಫ್ಲಾಟ್ ಹುಡುಕುವುದಕ್ಕೆ ಗಮನ ನೀಡಿದ್ದಾರೆ.

webdunia
PR
ಒಟ್ಟೊಟ್ಟಿಗೆ ಅನೇಕ ಚಿತ್ರಗಳಲ್ಲಿ ನಟಿಸುತ್ತಿರುವ ಈ ಜೋಡಿಗೆ ಭೇಟಿ ಮಾಡಲು ಸಮಯವೇ ಸಿಗದ ಕಾರಣ ಇಬ್ಬರು ಒಟ್ಟಿಗೆ ಇರಲು ಸಿದ್ಧ ಆಗಿದ್ದಾರೆ. ಈಗ ತನ್ನ ತಾಯಿ ತಂದೆ ನೀತೂ ಸಿಂಗ್ ಮತ್ತು ರಿಷಿಕಪೂರ್ ಇರುವ ಪಾಲಿಹಿಲ್ ನಿಂದ ಹೊರ ಬರಲು ರಣಬೀರ್ ನಿಶ್ಚಯಿಸಿದ್ದಾರೆ. ಕತ್ರಿನ ಜೊತೆ ಬದುಕಲು ಸ್ವಂತ ಅಪಾರ್ಟ್ಮೆಂಟ್ ತೆಗೆದುಕೊಳ್ಳ ಬೇಕು ಎಂದು ನಿಶ್ಚಯಿಸಿರುವುದಾಗಿ ಹೇಳಿದ್ದಾರೆ ರಣಬೀರು! ಪಾಪ ನೀತು ಸಿಂಗ್ ಎಷ್ಟೇ ಕಷ್ಟ ಪಟ್ಟರು ಈ ಜೋಡಿಯನ್ನು ಬೇರೆ ಮಾಡಲು ಆಗಲಿಲ್ಲ!

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada