ಕಂಗನಾಗೆ ಒಂಟಿತನವೇ ಇಷ್ಟವಂತೆ. ಯಾಕ್ ಗೊತ್ತಾ?
Publish Date: Sun, 20 Oct 2013 (15:46 IST)
Updated Date: Sun, 20 Oct 2013 (15:45 IST)
ಬಾಲಿವುಡ್ ಹಾಟಿ ಗರ್ಲ್ಸ್ ಪಟ್ಟಿಯಲ್ಲಿ ಕಂಗನಾ ರನೌಟ್ ಸಹ ಇದ್ದಾಳೆ . ಹಿಮಾಚಲ್ ಪ್ರದೇಶದ ಈ ಸುಂದರಿ ನೋಡೋಕೆ ತುಂಬಾ ಮುದ್ದಾಗಿದ್ದಾಳೆ . ಅದೇರೀತಿ ಗ್ಯಾಂಗ್ ಸ್ಟಾರ್ ,ಫ್ಯಾಷನ್ , ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ, ರಾಜ್ - 2, ತನೂ ವೆಡ್ಸ್ ಮನು , ಶೂಶೌಟ್ ಅಟ್ ವಡಾಲಾ ನಂತಹ ಚಿತ್ರಗಳಲ್ಲಿ ರಾಷ್ಟ್ರೀಯ ಪ್ರಶಸ್ತಿ ಸಹ ದೊರಕಿಸಿಕೊಂಡ ಪ್ರತಿಭಾವ೦ತೆ. ಕಂಗನಾ ಕೇವಲ ಬಾಲಿವುಡ್ ನಲ್ಲಿ ಮಾತ್ರವಲ್ಲ ದಕ್ಷಿಣದಲ್ಲೂ ಗೆದ್ದ ನಟಿ . ಯಶಸ್ಸಿನ ಜೊತೆ ಸೋಲು ಈಕೆಯನ್ನು ಕೈ ಹಿಡಿದ ಕಾರಣ ಈಕೆಗೆ ಎಲ್ಲವೂ ಕಾಮನ್ ಆಗಿ ಬಿ ಟ್ಟಿ ದೆಯಂತೆ . ಸೊ ಎರಡನ್ನು ಸಮಾನವಾಗಿ ನಾನು ತಗೋತೀನಿ ಅಂತಾಳೆ ಕಂಗನ. ನನಗೆ ಒಂಟಿಯಾಗಿ ಇರೋಕೆ ಇಷ್ಟ ನನ್ನ ಮನೆಗೆ ನಾನೇ ರಾಣಿ ಅಂತ ಹೇಳೋದರ ಮೂಲಕ ಆಕೆ ಬಿ ಟೌನ್ ಮಂದಿಯಲ್ಲಿ ಆಶ್ಚರ್ಯ ಹುಟ್ಟಿಸಿದ್ದಾಳೆ . ಕೇವಲ ಗ್ಲಾಮರಸ್ ಪಾತ್ರದಲ್ಲಿ ಮಾತ್ರವಲ್ಲ ಸೈನ್ಸ್ ಫಿಕ್ಷನ್ ಗಳಲ್ಲಿ ನಟಿಸುವ ಆಸೆ ಈಕೆಗೆ ಇದೆಯ೦ತೆ . ವುಮನ್ ಬೇಸ್ಡ್ ಚಿತ್ರಗಳಲ್ಲಿ ಹೆಚ್ಚು ನಟಿಸಲು ತನಗಿಷ್ಟ ಎಂದು ಹೇಳಿರುವ ಕಂಗನಾ ರಜ್ಜೋ, ಕ್ವೀನ್, ರಿವಾಲ್ವರ್ ರಾಣಿ ಚಿತ್ರಗಳಲ್ಲಿ ತನಗೆ ಹೆಚ್ಚು ಪ್ರಾಮುಖ್ಯತೆ ಇದೆ ಎಂದು ತಿಳಿಸಿದ್ದಾಳೆ.