ಕಂಗನಾ ಗೌನ್ ಬೆಲೆ ಇಷ್ಟೊಂದಾ... ?
Publish Date: Fri, 06 Dec 2013 (10:56 IST)
Updated Date: Fri, 06 Dec 2013 (10:53 IST)
ಸಿನಿಮಾ ರಂಗದಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳು ಹೆಚ್ಚು ಫ್ಯಾಷನಬಲ್ ಆಗಿರುತ್ತಾರೆ. ಅವರಲ್ಲಿ ಒಂದಷ್ಟು ಜನ ತುಂಬಾ ಫ್ಯಾಷನಬಲ್. ಆ ಪಟ್ಟಿಗೆ ಕಂಗನಾ ರನೌಟ್ ಸೇರ್ಪಡೆ ಆಗುತ್ತಾರೆ. ತಮ್ಮ ಉಡುಗೆ ತೊಡುಗೆಗಾಗಿ ಎಷ್ಟು ಬೇಕಾದರೂ ಖರ್ಚು ಮಾಡಲು ಸಿದ್ಧ . ಅಡಿಯಿಂದ ಮುಡಿಯವರೆಗೂ ಆಕೆ ಕಿಂಚತ್ತು ಭಂಗ ಆಗಬಾರದೆಂದು ನೋಡಿಕೊಳ್ಳುತ್ತಾಳೆ. ಇದಕ್ಕೆ ಹೊಂದುವ ಉದಾಹಣೆ ಇಲ್ಲಿದೆ. ಮುಂಬೈ ನಲ್ಲಿ ಕಾರ್ಯಕ್ರಮಗಳು ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತದೆ. ಅದರಲ್ಲಿ ನಟೀ ಮಣಿಯರ ಭಾಗವಹಿಸುವಿಕೆಯೂ ಸಹ ತುಂಬಾ ಕಾಮನ್. ಇಂತಹ ಒಂದು ಪ್ರೋಗ್ರಾಂನ ಭಾಗವಾಗಿದ್ದ ಕಂಗನಾ ವೇದಿಕೆಯ ಮೇಲೆ ಹೋದ ತಕ್ಷಣ ಇಡೀ ಸ್ಥಳ ಝಗಮಗ! ಅದಕ್ಕೆ ಕಾರಣ ಆಕೆ ಧರಿಸಿದ್ದ ಉಡುಪು.ಆ ಲಾಂಗ್ ಗೌನ್ ನಲ್ಲಿ ಹೊಳೆಯುತ್ತಾ ಬಂದ ಈ ಸುಂದರಿಯನ್ನು ಕಂಡು ಜನರು ಮೂಕವಿಸ್ಮಿತರಾದರು.ಅದರ ಬೆಲೆ ಕೇಳಿ ಮತ್ತಷ್ಟು ಸುಸ್ತಾದರು. ಆಕೆಯ ಉಡುಪಿನ ಬೆಲೆ ಸುಮಾರು ಐದು ಲಕ್ಷ.ಈಕೆ ಕೊಂಡುಕೊಂಡ ಗೌನ್ ಯಾವ ರೀತಿ ಧರಿಸ ಬೇಕು ಎನ್ನುವ ಮಾಹಿತಿಯನ್ನು ಸಹ ನೀಡಿದ್ದರಂತೆ.ಅದೆಷ್ಟು ಕಷ್ಟದ ಡ್ರೆಸ್ ಇರ ಬಹುದು ?! ಆದರೆ ಅದನ್ನು ಧರಿಸಿ ಬಂದ ಬಳಿಕ ಎಲ್ಲರಿಂದ ಸಿಕ್ಕ ಕಾಂಪ್ಲಿಮೆಂಟ್ ಆಕೆ ಧರಿಸಿದ ಕಷ್ಟ ಮರೆ ಮಾಚಿದ್ದೇನೋ ಸತ್ಯ, ಅದನ್ನು ಬಿಚ್ಚಿಡುವಾಗ ಕಷ್ಟ ಪಟ್ಟರಾ? ಅದರ ಬಗ್ಗೆ ನಮಗಿನ್ನು ಮಾಹಿತಿ ಸಿಕ್ಕಿಲ್ಲ!