Article Bollywood Gossips %e0%b2%93%e0%b2%82 %e0%b2%b6%e0%b2%be%e0%b2%82%e0%b2%a4%e0%b2%bf %e0%b2%b5%e0%b2%bf%e0%b2%b6%e0%b3%87%e0%b2%b7 %e0%b2%aa%e0%b3%8d%e0%b2%b0%e0%b2%a6%e0%b2%b0%e0%b3%8d%e0%b2%b6%e0%b2%a8 107110900022_1.htm

Select Your Language

Notifications

webdunia
webdunia
webdunia
webdunia

ಓಂ ಶಾಂತಿ ವಿಶೇಷ ಪ್ರದರ್ಶನ

ಅಭಿಷೇಕ್
IFM
ಓಂ ಶಾಂತಿ ಓಂನ ಪ್ರೀಮಿಯರ್ ಪ್ರದರ್ಶನ ಲಂಡನ್‌ನಲ್ಲಿ ನಡೆಯಲು ನಿಗದಿಯಾಗಿದ್ದರೂ, ಕುತೂಹಲದಿಂದ ನಿರೀಕ್ಷಿಸುತ್ತಿರುವ ಚಿತ್ರದ ವಿಶೇಷ ಪ್ರದರ್ಶನಕ್ಕೆ ಶಾರೂಕ್ ಖಾನ್ ಚಿತ್ರೋದ್ಯಮದ ಗಣ್ಯರನ್ನು ಯಶರಾಜ್ ಸ್ಟುಡಿಯೋಸ್‌ನಲ್ಲಿ ಆಹ್ವಾನಿಸಿದ್ದರು. ಚಿತ್ರಪ್ರದರ್ಶನಕ್ಕೆ ಅಮಿತಾಬ್ ಬಚ್ಚನ್ ತಮ್ಮ ಪುತ್ರ ಅಭಿಷೇಕ್ ಜತೆ ಆಗಮನವು ಬಚನ್-ಶಾರೂಕ್ ನಡುವೆ ಶೀತಲಯುದ್ಧ ನಡೆಯುತ್ತಿದೆಯೆಂಬ ಎಲ್ಲ ಊಹಾಪೋಹಗಳಿಗೆ ತೆರೆ ಎಳೆಯಿತು.

ರಿಷಿ ಕಪೂರ್ ಅವರ ಉಪಸ್ಥಿತಿ ಕೂಡ ಆಶ್ಚರ್ಯ ಮೂಡಿಸಿತು. ಏಕೆಂದರೆ ಅವರ ಪುತ್ರನ ಚೊಚ್ಚಲ ಚಿತ್ರ ಸವಾರಿಯಾ ಕೂಡ ಶುಕ್ರವಾರ ಬಿಡುಗಡೆಯಾಗಿದೆ. ಆದರೆ ರಿಷಿಕಪೂರ್ ಓಂ ಶಾಂತಿಯ ಅವಿಭಾಜ್ಯ ಅಂಗವಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅಪರೂಪವಾಗಿ ಕಾಣಿಸುತ್ತಿರುವ ರೇಖಾ ಕೂಡ ಹಾಜರಿದ್ದರು.

ಸೈಫ್ ಅಲಿ ಖಾನ್ ತಮ್ಮ ಮಕ್ಕಳು ಮತ್ತು ಕರೀನಾ ಕಪೂರ್ ಜತೆ ಆಗಮಿಸಿದ್ದರು. ಪ್ರಿಯಾಂಕ ಕೈಗಳಿಗೆ ಮೆಹಂದಿ ಹಚ್ಚಿಕೊಂಡಿದ್ದರು. ಗಾಡ್ ತುಸ್ಸಿ ಗ್ರೇಟ್ ಹೊ ಚಿತ್ರದಿಂದ ನೇರವಾಗಿ ಇಲ್ಲಿಗೆ ಬಂದೆ. ತಪ್ಪಾಗಿ ಏನೂ ಭಾವಿಸಬೇಡಿ ಎಂದು ಪ್ರಿಯಾಂಕ ಹಾಸ್ಯಮಯವಾಗಿ ಹೇಳಿದಳು.

Share this Story:

Follow Webdunia kannada