Article Bollywood Gossips %e0%b2%93%e0%b2%82 %e0%b2%b6%e0%b2%be%e0%b2%82%e0%b2%a4%e0%b2%bf %e0%b2%93%e0%b2%82 %e0%b2%b5%e0%b3%80%e0%b2%95%e0%b3%8d%e0%b2%b7%e0%b2%a3%e0%b3%86%e0%b2%97%e0%b3%86 %e0%b2%b8%e0%b2%be%e0%b2%a7%e0%b3%81%e0%b2%97%e0%b2%b3 %e0%b2%b9%e0%b2%bf%e0%b2%82%e0%b2%a1%e0%b3%81 107110600026_1.htm

Daily Horoscope

Select Your Language

Notifications

webdunia
webdunia
webdunia
webdunia

ಓಂ ಶಾಂತಿ ಓಂ ವೀಕ್ಷಣೆಗೆ ಸಾಧುಗಳ ಹಿಂಡು

ರಜನಿಕಾಂತ್
ಬಾಲಿವುಡ್‌ನಲ್ಲಿ ಇಷ್ಟೊಂದು ಉತ್ಸಾಹ ಮತ್ತು ರೋಮಾಂಚನ ಎಂದೂ ಆಗಿರಲಿಲ್ಲ. ಅತ್ಯಂತ ನಿರೀಕ್ಷಿತ ಎರಡು ಚಿತ್ರಗಳಾದ ಓಂ ಶಾಂತಿ ಓಂ ಮತ್ತು ಸವಾರಿಯ ದಿನಾಂಕಗಳು ಪ್ರಕಟವಾದ ಬಳಿಕ ಅನೇಕ ಸ್ಥಳಾಂತರಗಳು ಮತ್ತು ವಲಸೆಗಳು ನಡೆದಿವೆ. ಸೂಪರ್ ಸ್ಟಾರ್ ರಜನಿಕಾಂತ್ ಅವರ ಇತ್ತೀಚಿನ ಬ್ಲಾಕ್‌ಬಸ್ಟರ್ ಶಿವಾಜಿ ಚಿತ್ರಕ್ಕೆ ರಜನಿ ಅಭಿಮಾನಿಗಳಿಗೆ ಟಿಕೆಟ್ ಸಿಗದೇ ನಿರಾಶರಾದಾಗ ಇಂತಹ ವಲಸೆಗಳು ನಡೆದಿದ್ದವು.

ರಜನಿ ಅಭಿಮಾನಿಗಳು ದೆಹಲಿಗೆ ಪ್ರಯಾಣ ಮಾಡಿ ಶಿವಾಜಿ ಚಿತ್ರದ ಮೊದಲ ದಿನ ಮೊದಲ ಪ್ರದರ್ಶನ ನೋಡಿ ಕೃತಾರ್ಥರಾಗಿದ್ದರು. ಫರಾ ಖಾನ್ ಅವರ ಓಂ ಶಾಂತಿಯ ಟಿಕೆಟ್ ಬುಕಿಂಗ್‌ಗೆ ಕೂಡ ಅದೇ ರೀತಿಯ ವಿದ್ಯಮಾನಗಳು ನಡೆಯುತ್ತಿವೆ.

ಈ ಬಾರಿ ಬರೀ ಬಾಲಿವುಡ್ ಅಭಿಮಾನಿಗಳಲ್ಲ, ಜತೆಗೆ ಸಂತರು ಮತ್ತು ಸಮಾನಮನಸ್ಕ ಜನರು ಓಂ ಶಾಂತಿಯ ಪ್ರಥಮ ಮಾಹಿತಿ ಪಡೆಯಲು ಮುಂಬೈಗೆ ತೆರಳಿದ್ದಾರೆ. ಸಾಧುಗಳು ಕೂಡ ಓಂ ಶಾಂತಿ ವೀಕ್ಷಿಸುವ ಮೂಲಕ ನಿರ್ವಾಣಕ್ಕೆ ದಾರಿ ಸಿಗುತ್ತದೆಂದು ಭಾವಿಸಿರಬಹುದು.

Share this Story:

Follow Webdunia kannada