Publish Date: Fri, 27 Jul 2007 (11:58 IST)
Updated Date: Fri, 27 Jul 2007 (11:57 IST)
ಬಾಲಿವುಡ್ ಸಿನಿನಿರ್ಮಾಪಕ ಕರಣ್‌ಜೋಹರ್ ಹಾಗೂ ಮಾಜಿಭುವನವಿಶ್ವಸುಂದರಿ ಲಾರಾದತ್ತಾ ಇದೀಗ ಒಂದೇ ಫ್ರೇಮ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಜಾಗತಿಕ ಮಟ್ಟದ ಜಾಹೀರಾತಿನಲ್ಲಿ ಇವರಿಬ್ಬರೂ ಜಂಟಿ ಅಭಿನಯ ನೀಡಲಿದ್ದಾರೆ. ಜಾಗತಿಕ ಕಂಪನಿ ಲೂಯಿಸ್ ವ್ಯೂಟನ್‌ಗಾಗಿ ಕರಣ್ ಜಾಹೀರಾತು ಆಂದೋಲನದ ತಯಾರಿಯಲ್ಲಿದ್ದಾರೆ.
ಈ ಜಾಹೀರಾತು ಪ್ರಚಾರ ಪ್ರದರ್ಶನದಲ್ಲಿ ಲಾರಾದತ್ತ ಕೂಡ ಪ್ರಮುಖ ಪಾತ್ರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಲಂಡನ್‌ನ ಬೀದಿಗಳಲ್ಲಿ ಒಂದು ದಿನದ ಕಾಲ ಚಿತ್ರೀಕರಣ ನಡೆಯಲಿದೆ. ಆದರೆ ಈ ಕುರಿತು ವಿಶೇಷ ಪ್ರಚಾರ ಲಭಿಸಿರುವುದು ಕರಣ್ ಅದೃಷ್ಟ.
ಚರ್ಮದ ತೊಡುಗೆಗಳು, ಬಳಕೆ ಸಲಕರಣೆಗಳನ್ನು ಕರಣ್ ಪ್ರಚಾರ ಮಾಡುತ್ತಿದ್ದಾರೆ. ಇದನ್ನು ಫ್ರಾನ್ಸ್‌ನ ಡಿಸೈನರ್ ಒಬ್ಬರು ವಿನ್ಯಾಸಮಾಡಿದ್ದಾರೆ. ಆದರೆ ಈ ಎಲ್ಲಾ ಜಾಹೀರಾತು ಚಿತ್ರೀಕರಣವನ್ನು ಕರಣ್ ಉಚಿತವಾಗಿ ಮಾಡಿ ಕೊಡುತ್ತಿದ್ದಾರಂತೆ.
ಪ್ರಸ್ತುತ ಬ್ರಾಂಡ್ ಕರಣ್‌ಗಾಗಿ ಈ ಮೊದಲು ವಿಶೇಷ ಸೌಲಭ್ಯ ನೀಡಿತ್ತು. ಇದರಲ್ಲೊಂದು 'ಕಬಿ ಅಲ್ವಿದಾ ನಾ ಕೆಹ್ನಾ' ಹಾಗೂ ಕಾಫಿ ವಿದ್ ಕರಣ್ ಎಂಬ ಕಾರ್ಯಕ್ರಮಗಳ ವಿನ್ಯಾಸವನ್ನೂ ಈ ಬ್ರಾಂಡ್ ನವರು ಒದಗಿಸಿದ್ದರು. ಇದಕ್ಕಾಗಿ ಕರಣ್ ಉಚಿತ ಸೇವೆ ನೀಡಿತ್ತಿದ್ದಾರಂತೆ.