Article Bollywood Gossips %e0%b2%90%e0%b2%b6%e0%b3%8d%e2%80%8c%e2%80%8c%e0%b2%97%e0%b3%86 %e0%b2%b9%e0%b3%86%e0%b2%a3%e0%b3%8d%e0%b2%a3%e0%b3%81 %e0%b2%ae%e0%b2%97%e0%b3%81%e0%b2%b5%e0%b2%82%e0%b2%a4%e0%b3%86 107051100021_1.htm

Select Your Language

Notifications

webdunia
webdunia
webdunia
webdunia

ಐಶ್‌‌ಗೆ ಹೆಣ್ಣು ಮಗುವಂತೆ!

ಐಶ್ವರ್ಯ
PTI
ಮೊನ್ನೆ ಮೊನ್ನೆಯಷ್ಟೆ ಹಸೆ ಮಣೆ ಏರಿರುವ ನವವಿವಾಹಿತೆ ಐಶ್ವರ್ಯಾ ರೈ ಇನ್ನೊಂದು ವರ್ಷದಲ್ಲಿ ಹೆಣ್ಣುಮಗುವಿಗೆ ಜನ್ಮನೀಡಲಿದ್ದಾರೆ ಎಂದು ಬೆಂಗಳೂರಿನ ಖ್ಯಾತ ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಸ್ವಾಮೀಜಿ ಮುಂದಿನ ವರ್ಷ ಇದೇ ಸಮಯದಲ್ಲಿ ಅಭಿ-ಐಷ್ ದಂಪತಿಗಳಿಗೆ ಮುದ್ದಿನ ಹೆಣ್ಣು ಮಗು ಜನಿಸಲಿದೆ ಎಂದರು.

ಈ ಹಿಂದೆ ಐಶ್-ಅಭಿಮದುವೆಯಾಗಲಿದ್ದಾರೆ ಎಂದು ಘೋಷಿಸಿ ದೇಶದ ಅಸಂಖ್ಯಾತ ಮಾಧ್ಯಮಗಳನ್ನು ಆಕರ್ಷಿಸಿದ್ದ ಸ್ವಾಮೀಜಿ ಇದೀಗ ಈ ಜೋಡಿಯ ಭವಿಷ್ಯದ ಪೀಳಿಗೆಯ ಬಗ್ಗೆ ಪ್ರಕಟಿಸಿ ಮತ್ತೆ ಸುದ್ದಿಯಾಗಿದ್ದಾರೆ.

ಅಂದ ಹಾಗೆ ಜ್ಯೋತಿಷ್ಯ ವಿದ್ವಾನ್ ಚಂದ್ರಶೇಖರ ಸ್ವಾಮೀಜಿ ಅಮಿತಾಭ್ ಬಚ್ಚನ್ ಅವರ ಖಾಯಂ ಜ್ಯೋತಿಷಿ. ಐಶ್- ಅಭಿ ಜಾತಕವನ್ನು ಮೊದಲು ನೋಡಿ, ಕಂಕಣ ಭಾಗ್ಯವನ್ನು ಪ್ರಕಟಿಸಿದ್ದು ಇವರ ವಿಶೇಷತೆ.

ಮುಂಬೈಯಲ್ಲಿ ನಡೆದ ಈ ತಾರಾ ಜೋಡಿಯ ಅದ್ಧೂರಿ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಬಂದಿದ್ದ ಸ್ವಾಮೀಜಿ ಐಶ್ ಬಗೆಗಿನ ಹೊಸ ಭವಿಷ್ಯ ನುಡಿದಿದ್ದಾರೆ. ಭವಿಷ್ಯ ನಿಜವಾಗಲು ಇನ್ನೂ ಒಂದು ವರ್ಷ ಕಾಯಬೇಕು.

Share this Story:

Follow Webdunia kannada