ಅಂಕುರ್ (1974) , ಭೂಮಿಕ (1977)ಚಿತ್ರಗಳಿಗೆ ನಿರ್ದೇಶಕ ಶ್ಯಾಮ್ ಬೆನಗಲ್ ಅವರ ಜೊತೆ ಸಹಾಯಕ ನಿರ್ದೇಶಕರಾಗಿದ್ದ ಪ್ರಹ್ಲಾದ್ ಕಕ್ಕರ್ ತಮ್ಮನ್ನು ಜಾಹಿರಾತು ನಿರ್ದೇಶನದ ಕಡೆಗೆ ತೊಡಗಿಸಿಕೊಂಡರು. ಪ್ರಹ್ಲಾದ್ ಕಕ್ಕರ್ ಅವರಿಗೆ ಒಂದು ಸಿನಿಮಾ ನಿರ್ದೇಶಿಸುವ ಯೋಜನೆ ಮತ್ತು ಆಸೆ ಇದೆ. ಇಲ್ಲಿ ಹೆಣ್ಣುಮಗಳ ಬದುಕು ಇಪ್ಪತ್ತೊಂದು ವರ್ಷ ದಿಂದ ಇಪ್ಪತ್ತೊಬ್ಬತ್ತು ವರ್ಷಗಳ ನಡುವೆ ನಡೆಯುವ ಕಥೆ ಇದೆ. ಇದಕ್ಕೆ ಐಶ್ವರ್ಯ ರೈ ಸೂಟ್ ಅಂತ ಕಕ್ಕರ್ ಅಭಿಪ್ರಾಯ.
PR
ಅದಕ್ಕಾಗಿ ಆಕೆ ತನ್ನ ತೂಕ ಕಡಿಮೆ ಮಾಡಿಕೊಳ್ಳ ಬೇಕಿದೆ. ಈ ಚಿತ್ರದಲ್ಲಿ ಐಶ್ ಗರ್ಭಿಣಿ ಯಾಗಿಯೂ ನಟಿಸ ಬೇಕಿದೆ. ಆದರೆ ಆಕೆ ಎರಡು ತಿಂಗಳ ಕಾಲ ತನ್ನ ಮಗಳು ಆರಾಧ್ಯಳಿಂದ ದೂರ ಇರ ಬೇಕಾಗಿದೆ. ಅದಕ್ಕೆ ಕಾರಣ ಈ ಚಿತ್ರದ ಚಿತ್ರೀಕರಣ ದಕ್ಷಿಣ ಆಫ್ರಿಕಾದಲ್ಲಿ ನಡೆಯುವುದು.ನಾನು ಈ ಕಥೆಯನ್ನು ಐಶ್ವರ್ಯ ಅವರಿಗೆ ಹೇಳಿಲ್ಲ, ಹೇಳಿದರೆ ತಪ್ಪದೆ ಆಕೆಯಿಂದ ಓಕೆ ಆಗುತ್ತದೆ ಎನ್ನುವ ನಂಬಿಕೆ ಹೊಂದಿದ್ದಾರೆ ಕಕ್ಕರ್ ಸಾಹೇಬರು. ಒಟ್ಟಾರೆ ಈ ಚಿತ್ರದಲ್ಲಿ ಹೀರೋ ಆಗಿರೋದು ಅಭಿಷೇಕ್ ಬಚ್ಚನ್. ಒಟ್ಟಾರೆ ಕಕ್ಕರ್ ಅವರ ಕನಸು ಹೇಗೆ ಸುಗುಮ ಆಗುತ್ತದೆಯೋ ಕಾಡು ನೋಡುವ!