Article Bollywood Gossips %e0%b2%90%e0%b2%b6%e0%b3%8d %e0%b2%b8%e0%b2%b2%e0%b3%8d%e0%b2%b2%e0%b3%81 %e0%b2%9c%e0%b3%8a%e0%b2%a4%e0%b3%86%e0%b2%af%e0%b2%be%e0%b2%97%e0%b3%81%e0%b2%b5%e0%b2%b0%e0%b3%87 108100300020_1.htm

Select Your Language

Notifications

webdunia
webdunia
webdunia
webdunia

ಐಶ್- ಸಲ್ಲು ಜೊತೆಯಾಗುವರೇ...

ಐಶ್ವರ್ಯ ರೈ ಸಲ್ಮಾನ್ ಖಾನ್ ಅಭಿಷೇಕ್ ಬಚ್ಚನ್ ಪ್ರಿಯದರ್ಶನ್
IFM
ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ರಿಯಲ್ ಲೈಫ್‌ನಲ್ಲಿ ಗೋಲ್ಡನ್ ಕಪಲ್ ಆದರೆ ರೀಲ್ ಲೈಫ್‌ಗೆ ಬಂದಾಗ ಐಶ್ವರ್ಯ ಮತ್ತು ಅವರ ಮಾಜಿ ಪ್ರಿಯಕರ ಸಲ್ಮಾನ್ ಖಾನ್ ಜೋಡಿ ತೆರೆಯ ಮೇಲೆ ಮಿಂಚುತ್ತದೆ.

'ಹಮ್ ದಿಲ್ ದೇ ಚುಕೇ ಸನಮ್' ಚಿತ್ರದಲ್ಲಿ ಅದ್ಬುತವಾಗಿ ಮೂಡಿಬಂದ ಈ ಜೋಡಿ ನಂತರ ಎಂದೂ ಜೊತೆಯಾಗಲೇ ಇಲ್ಲ. ಆದರೆ ಪ್ರಸ್ತುತ ಐಶ್ವರ್ಯ ಮುಖ್ಯ ಪಾತ್ರದಲ್ಲಿದ್ದಾರೆ ಎಂದು ಹೇಳಲಾಗುತ್ತಿರುವ ಪ್ರಿಯದರ್ಶನ್‌ರ ಚಿತ್ರವೊಂದಕ್ಕೆ ಸಲ್ಮಾನ್ ಸಹಿ ಹಾಕಿದ್ದಾರೆ.

ಐಶ್ವರ್ಯ ಈ ಚಿತ್ರಕ್ಕೆ ಇನ್ನೂ ತಮ್ಮ ಅಂತಿಮ ಒಪ್ಪಿಗೆ ನೀಡಿಲ್ಲ, ಆದರೆ ಸಲ್ಮಾನ್ ಈ ಬಗ್ಗೆ ಬಹಳ ಉತ್ಸಾಹಿಯಾಗಿರುವಂತೆ ಕಂಡುಬರುತ್ತಿದೆ.

ಆದರೆ ಸಲ್ಮಾನ್ ಮತ್ತು ಐಶ್ವರ್ಯ ತೆರೆ ಮೇಲೆ ಸರಸವಾಡುತ್ತಾ ಕಂಡುಬರುವುದಿಲ್ಲ, ಸಲ್ಲು ಈ ಚಿತ್ರದಲ್ಲಿ ಪುಟ್ಟ ಪಾತ್ರವನ್ನು ಮಾಡಲಷ್ಟೇ ಒಪ್ಪಿಕೊಂಡಿರುವುದು. ಆದರೆ ಈ ಜೋಡಿ ತೆರೆ ಮೇಲೆ ಕೆಲವೊಂದು ಸನ್ನಿವೇಶಗಳಲ್ಲಿ ಜೊತೆಯಾಗಿ ಕಂಡುಬರಲಿದೆ.

ಈ ಮಾಜಿ ಪ್ರೇಮಿಗಳು ಹಳೆಯ ಕಹಿ ನೆನಪನ್ನು ಮರೆತು ಹೊಸ ಆರಂಭವನ್ನು ಮಾಡಲಿ ಎಂಬುದು ನಮ್ಮ ಹಾರೈಕೆ !.

Share this Story:

Follow Webdunia kannada