Article Bollywood Gossips %e0%b2%90%e0%b2%b6%e0%b3%8d %e0%b2%ac%e0%b3%87%e0%b2%ac%e0%b2%bf %e0%b2%ac%e0%b2%be%e0%b2%b0%e0%b3%8d%e0%b2%ac%e0%b2%bf %e0%b2%ac%e0%b3%8a%e0%b2%82%e0%b2%ac%e0%b3%86 %e0%b2%86%e0%b2%97%e0%b2%b2%e0%b3%8d%e0%b2%b2 109032800084_1.htm

Select Your Language

Notifications

webdunia
webdunia
webdunia
webdunia

ಐಶ್ ಬೇಬಿ ಬಾರ್ಬಿ ಬೊಂಬೆ ಆಗಲ್ಲ

ಬಾರ್ಬಿ
IFM
ನಮ್ಮ ಕರುನಾಡ ಸುಂದರಿ ಐಶ್ ಬೇಬಿ ಬಾರ್ಬಿ ಬೊಂಬೆ ಆಗುವುದಿಲ್ಲವಂತೆ. ಹಾಗಂತ ಸ್ವತಃ ಐಶ್ವರ್ಯಾ ರೈ ಅವರೇ ನಿರ್ಧರಿಸಿದ್ದು, ಸದ್ಯದ ವೃತ್ತಿ ಬದುಕಿನ ಒತ್ತಡದಿಂತ ಬಾರ್ಬಿಗೆ ರೂಪದರ್ಶಿಯಾಗಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

35ರ ಹರೆಯದ ಐಶ್ವರ್ಯಾ ರೈ ಬಾರ್ಬಿ ಡಾಲ್‌ನ ತಯಾರಕ ಸಂಸ್ಥೆ ಮಾಟೆಲ್ ಜತೆಗೆ ಮಾತುಕತೆ ನಡೆಸಿದ್ದರು ಎನ್ನಲಾಗಿತ್ತು. 1994ರಲ್ಲಿ ಐಶ್ವರ್ಯಾ ರೈ ಜಗದೇಕ ಸುಂದರಿಯಾಗಿ ಆಯ್ಕೆಯಾದಂದಿನಿಂದಲೂ, ಬಹಳ ಬಾರಿ ಬಾರ್ಬಿ ಸಂಸ್ಥೆ ಐಶ್ವರ್ಯಾ ರೈ ಅವರನ್ನು ಬಾರ್ಬಿ ಮಾಡೆಲ್ ಆಗಿ ಆಯ್ಕೆ ಮಾಡಲು ಬಯಸಿತ್ತು. ಜತೆಗೆ ಮಾತುಕತೆಯನ್ನೂ ನಡೆಸಿತ್ತು. ಆದರೆ ಈ ಡೀಲ್ ಒಪ್ಪಿಕೊಳ್ಳಲು ಈವರೆಗೂ ಐಶ್ವರ್ಯಾ ರೈ ಅವರಿಗೆ ಸಮಯವೇ ಇರಲಿಲ್ಲವಂತೆ. ಹಾಗೂ ಈ ಬಾರಿಯೂ ಈ ಆಫರ್‌ನ್ನು ನಿರಾಕರಿಸಬೇಕಾಗಿ ಬಂದಿದೆ ಎಂದು ಐಶ್ವರ್ಯಾ ರೈ ಹೇಳಿದ್ದಾರೆ.

ಇತ್ತೀಚೆಗಷ್ಟೆ 50ನೆ ಹುಟ್ಟುಹಬ್ಬವನ್ನು ಆಚರಿಸಿರುವ ವಿಶ್ವವಿಖ್ಯಾತ ಬಾರ್ಬಿ ಗೊಂಬೆಯ ತಯಾಕರ ಸಂಸ್ಥೆ ಮಾಟೆಲ್ ಕಂಪೆನಿಯು ಭಾರತೀಯ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ಗೊಂಬೆಗಳನ್ನು ತಯಾರಿಸಲು ಹೊರಟಿದ್ದು, ಜಗಜದೇಕ ಸುಂದರಿ, ಐಶ್ವರ್ಯಾ ರೈ ಮಾದರಿಯ ಬೊಂಬೆಗಳನ್ನು ತಯಾರಿಸಲು ಮುಂದಾಗಿತ್ತು. ಕಂಪೆನಿಯು ಐಶ್ವರ್ಯಾ ಜನಪ್ರಿಯತೆಯನ್ನು ಬಳಸಿಕೊಂಡು ಇದರಿಂದ ಲಾಭ ಮಾಡುವ ಕನಸು ಕಾಣುತ್ತಿತ್ತು. ಐಶ್ ರೂಪದ ಗೊಂಬೆಯು ಹಸಿರು ಕಣ್ಣುಗಳನ್ನು ಹೊಂದಿದ್ದು, ಭಾರತದ ಪ್ರಮುಖ ವಿನ್ಯಾಸಕರು ರೂಪಿಸಿರುವ ಉಡುಪನ್ನು ತೊಡಲಿದೆ ಎಂದು ನಿಗದಿಯಾಗಿತ್ತು.

ಹೀಗಾಗಿ, ಬಾರ್ಬಿಗೆ ರೂಪದರ್ಶಿಯಾಗುವ ಮೊದಲ ಭಾರತೀಯ ಸುಂದರಿ ಎಂದೂ ಐಶ್‌ ಬೇಬಿಯನ್ನು ಬಿಂಬಿಸಲಾಗಿತ್ತು. ಆದರೆ, ಸದ್ಯ ಐಶ್ ತನ್ನ ಚಿತ್ರಗಳಲ್ಲಿ ಬ್ಯುಸಿಯಾಗಿರುವುದರಿಂದ ಡೇಟ್ಸ್ ಸಮಸ್ಯೆಯಿಂದಾಗಿ ಈ ಆಫರ್ ನಿರಾಕರಿಸುವ ಮೂಲಕ ಎಲ್ಲರ ಕುತೂಹಲಕ್ಕೆ ಅಂತ್ಯ ಹಾಡಿದ್ದಾರೆ. ಬಾರ್ಬಿ ಬೊಂಬೆಗೆ ಈ ಹಿಂದೆ ರೂಪದರ್ಶಿಯರಾಗಿದ್ದ ಹಾಲಿವುಡ್ ತಾರೆಗಳಾದ ಬೆಯಾನ್ಸ್ ನೊಲ್ಸ್, ಎಲಿಜಬೆತ್ ಟೇಲರ್ ಹಾಗೂ ಡಯಾನಾ ರೋಸ್ ಮತ್ತಿತರರು ರೂಪದರ್ಶಿಯಾಗಿದ್ದರು.
webdunia
IFM

Share this Story:

Follow Webdunia kannada