ಐದು ನಿಮಿಷಕ್ಕೆ 33 ಲಕ್ಷ. ಇದು ಶ್ರದ್ಧಾ ಕಪೂರ್ ಲೆವೆಲ್ !
, ಬುಧವಾರ, 1 ಜನವರಿ 2014 (17:23 IST)
ಜೀವನದಲ್ಲಿ ಯಾರ ಅದೃಷ್ಟ ಹೇಗೆ ಬದಲಾಗುತ್ತದೆಯೋ ಬಲ್ಲವರಾರು. ಇಂದು ಏನೇನು ಅಲ್ಲದ ವ್ಯಕ್ತಿಯ ಹಣೆ ಬರಹ ನಾಳೆ ಅತ್ಯುನ್ನತವಾಗಿ ಬದಲಾಗ ಬಹುದು. ಅದೇ ರೀತಿ ಸಾಮಾನ್ಯ ಕಲಾವಿದರು ನಾಳೆ ಸೂಪರ್ ಸೆಲಬ್ರಿಟಿ ಆಗಬಹುದು. ಇವೆಲ್ಲಾ ಬಿಡಿ , ಒಂದೆರಡು ಚಿತ್ರಗಳಲ್ಲಿ ನಟಿಸಿ ದೊಡ್ಡ ನಟಿಯಾಗಿ ಬಿಡುವ ಭಾಗ್ಯ ಕೆಲವರಲ್ಲಿ ಮಾತ್ರ ಇರುತ್ತದೆ. ಶ್ರದ್ಧಾ ಕಪೂರ್ ಅದೃಷ್ಟವೂ ಸಹ ಅಂತಹದ್ದೇ ಆಗಿದೆ.
ಈಕೆ ಬಾಂದ್ರಾ ದಲ್ಲಿ ಇರುವ ರೆಸ್ಟೊರೆಂಟ್ ನಲ್ಲಿ ಡಿಸೆಂಬರ್ 31 ರ ರಾತ್ರಿ ಸರಿಯಾಗಿ ದಿನಾಂಕ ಬದಲಾಗುವ ಸಮಯದಲ್ಲಿ ಇರುವ ಐದು ನಿಮಿಷಗಳಲ್ಲಿ ನೀಡುವ ಎಂಟರ್ ಟೈನ್ ಮೆಂಟ್ ಗೆ 33 ಲಕ್ಷ ಪಡೆದಿದ್ದಾಳೆ. ಆಶಿಕಿ2 ರ ಈ ಮಾದಕ ಚೆಲುವೆ ಅದೃಷ್ಟ ಹೀಗೆ ಬದಲಾಗಿದೆ. ತಾನು ಭಾಗವಹಿಸುವ ಮುನ್ನವೇ ತನಗೆ ಪೇಮೆಂಟ್ ನೀಡ ಬೇಕು ಎನ್ನುವ ಕಂಡೀಷನ್ ಸಹ ಓಕೆ ಆಗಿದ್ದು ಎಲ್ಲವೂ ಆಕೆ ಅಂದುಕೊಂಡಂತೆ ನಡೆದಿದೆ. ಇದಕ್ಕಿಂತ ಅದೃಷ್ಟ ಯಾವುದಿದೆ ಎಂದು ಬೇರೆ ತಾರೆಗಳು ಲೈಟಾಗಿ ಹೊಟ್ಟೆ ಉರಿದುಕೊಂಡರಂತೆ!