Publish Date: Thu, 16 Aug 2007 (17:50 IST)
Updated Date: Thu, 16 Aug 2007 (17:08 IST)
ವಿವೇಕ್ ಅಗ್ನಿಹೋತ್ರಿ ನಿರ್ದೆಶನದ ಬಿಲ್ಲೂರಾಣಿ ಐಟಂಸಾಂಗ್‌ಗೆ ಜಾನ್ ಅಬ್ರಾಹಂ ಹಾಗೂ ಬಿಪಾಶಾ ನರ್ತಿಸಿರುವುದು ಬಾಲಿವುಡ್ ರಂಗದಲ್ಲಿ ಬೆಚ್ಚನೆಯ ಬಿಸಿಗಾಳಿ ಹಾದುಹೋಗಿದೆ.
ಗೋಲ್ ಚಿತ್ರದಲ್ಲಿ ಸರೋಜ್‌ಖಾನ್ ಅವರ ನೃತ್ಯ ನಿರ್ದೆಶನವಿದ್ದು, ಅರ್ಷದ್‌ವಾರ್ಸಿ ಅವರು ನೃತ್ಯಕ್ಕೆ ಹೆಜ್ಜೆ ಹಾಕಿದ್ದಾರೆ. ನಿರ್ದೆಶಕ ವಿವೇಕ್ ಅಗ್ನಿಹೋತ್ರಿ ಎರಡು ವರ್ಷಗಳ ಹಿಂದೆ ಚಾಕೋಲೇಟ್ ಚಿತ್ರವನ್ನು ನಿರ್ಮಿಸಿದ ಖ್ಯಾತಿಯನ್ನು ಹೊಂದಿದ್ದಾರೆ.
ಜಾನಪದ ಮತ್ತು ಮುಜರಾ ರೀತಿಯ ಸಂಪೂರ್ಣ ಭಾರತೀಯ ಶೈಲಿಯ ಸಂಗೀತವನ್ನು ಅಳವಡಿಸಲಾಗಿದ್ದು, ಆನಂದರಾಜ್ ಸ್ವರವನ್ನು ನೀಡಿದ್ದು ಹೊರದೇಶಗಳಲ್ಲಿ ಭಾರಿ ಯಶಸ್ವಿಯಾಗಬಹುದು ಎಂದು ನಿರ್ದೆಶಕ ವಿವೇಕ್ ಅಗ್ನಿಹೋತ್ರಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.