ಏಕ್ತಾ ಕಪೂರ್ ಮತ್ತೊಂದು ಕೆ ಧಾರವಾಹಿ ಕುಂಕುಂ ಭಾಗ್ಯ
, ಮಂಗಳವಾರ, 1 ಏಪ್ರಿಲ್ 2014 (10:02 IST)
ಮತ್ತೊಮ್ಮೆ ನಿರ್ಮಾಪಕಿ ಏಕ್ತಾ ಕಪೂರ್ ಅವರ ಕೆ ಸರಣಿ ಆರಂಭ ಆಗಿದೆ. ಕಿರುತೆರೆಯ ಧಾರವಾಹಿ ಲೋಕದಲ್ಲಿ, ಕ್ಯುಕಿ ಕಿ,ಸೇರಿದಂತೆ ಅನೇಕಾನೇಕ ಕೆ ಅಕ್ಷರದ ಆರಂಭಿಕ ಧಾರಾವಾಹಿಗಳನ್ನು ಜನರ ಕೈಗೆ ನೀಡಿದ ಏಕ್ತಾ ಕಪೂರ್ ಈಗ ಜೀ ವಾಹಿನಿಗೆ ಕುಂಕುಂ ಭಾಗ್ಯ ಅನ್ನುವ ಧಾರವಾಹಿ ಜನರ ಕೈಗೆ ಇಡುತ್ತಿದ್ದಾರೆ.ಇದರ ಬಗ್ಗೆ ಏಕ್ತಾ ಹೇಳೋದಿಷ್ಟೇ ಈ ಹೆಸರು ಆಕಸ್ಮಿಕವಾಗಿ ಧಾರಾವಾಹ ಟೈಟಲ್ ಆಗಿದೆ. ನನ್ನ ಹಳೆಯ ಕೆ ಹೆಸರಿನ ಧಾರಾವಾಹಿಗಳಂತೆ ಇದು ಸಹ ಯಶಸ್ಸು ನೀಡಲಿ ಎನ್ನುವ ಆಶಯ ಹೊಂದಿದ್ದೇನೆ ಎಂದಿದ್ದಾರೆ ಈಕೆ. ನಮಗೆ ಕಥೆಗೆ ಹೊಂದುವ ಶೀರ್ಷಿಕೆ ಕುಂಕುಂ ಭಾಗ್ಯ ಅಂತ ಅನ್ನಿಸಿದ ತಕ್ಷಣ ಅದನ್ನು ಆಯ್ಕೆ ಮಾಡಿದೆವು, ಆ ಬಳಿಕ ಇದು ಕೆ ಅಕ್ಷರದ ಆರಂಭದ್ದು ಅಂತ ಆನಂತರ ಅರಿವಿಗೆ ಬಂತು ಎಂದಿದ್ದಾರೆ.
ಕ್ಯುಕಿ ಸಾಸ್ ಭಿ ಕಭಿ ಬಹು ತಿ, ಕಹಾನಿ ಘರ್ ಘರ್ ಕೀ , ಕಾಹಿನ್ ಖಿಸ್ಸೀ ರಾಜ್ , ಕಸೌಟಿ ಜಿಂದಗಿ ಕ ಮತ್ತು ಕಸಂಸೆ ಇವೆಲ್ಲವೂ ಏಕ್ತಾ ಕಪೂರ್ ಅವರ ಯಶಸ್ವಿ ಧಾರಾವಾಹಿಗಳು . ಇದು ಕೌಟುಂಬಿಕ ಕಥೆಯನ್ನು ಹೊಂದಿದೆಯೋ, ಲವ್ ಸ್ಟೋರಿನಾ ಇವ್ಯಾವುದರ ಬಗ್ಗೆ ಹೇಳಾರೆ ಕಾದು ನೋಡಿ ಆನಂದಿಸಿ ಎಂದು ಹೇಳಿದ್ದಾರೆ ಏಕ್ತಾ. ಅವರ ತಂದೆ ಜೀತೇಂದ್ರ ಅವರ ಚಿತ್ರಗಳಂತೆ ಏಕ್ತಾ ಅವರ ಧಾರಾವಾಹಿಗಳು ಸಹ ಅತ್ಯಂತ ರಿಚ್ ಆಗಿರುತ್ತೆ ...ಅವರ ಪ್ರಕಾರ ಭಿಕ್ಷುಕ ಸಹ ಕಲರ್ ಫುಲ್ ಬಟ್ಟೆ ಧರಿಸಿರ ಬೇಕು.. ಒಟ್ಟಾರೆ ವಾಸ್ತವತೆಯಿಂದ ದೂರ ಇರುವ ಕಥೆಯು ಮತ್ತೆ ಸಿದ್ಧ ಆಗಿದೆ.. ಪ್ರೇಕ್ಷಕರ ಮನರಂಜಿಸಲು!