ಎಲ್ಲರಿಗೂ ಧನ್ಯವಾದಗಳು: ಬಿಗ್ ಬಿ ..
Publish Date: Thu, 07 Nov 2013 (14:26 IST)
Updated Date: Thu, 07 Nov 2013 (14:25 IST)
ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಎಂದಿಗೂ ಬೇಡಿಕೆ ಕಳೆದುಕೊಳ್ಳದ ನಟ. ಅವರು ಕೇವಲ ಸಿನಿಮಾಗಳಿಂದ ಮಾತ್ರವಲ್ಲ ತಮ್ಮ ಬರಹಗಳು ಮತ್ತು ಸಾಮಾಜಿಕ ಜಾಲತಾಣ ಗಳಿಂದಲೂ ಅಪಾರವಾದ ಸ್ನೇಹಿತರನ್ನು ಸಂಪಾದಿಸಿದ್ದಾರೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಅವರು ಭಾಗವಹಿಸುವಿಕೆ ವಿನೂತನ. ಅವರ ಟ್ವಿಟ್ಟರ್ ಅಕೌಂಟ್ ನಲ್ಲಿ ಅವರನ್ನು ಫಾಲೋ ಮಾಡೋ ಮಂದಿ ಈಗ ಎಪ್ಪತ್ತು ಲಕ್ಷ ಜನರಂತೆ. ಬಾಲಿವುಡ್ ಆಕ್ಟೀವ್ ಬ್ಲಾಗರ್ ಆಗಿರುವ ಬಿಗ್ ಬಿ ಅವರ ಬ್ಲಾಗ್ ಫಾಲೋಯರ್ಸ್ ಸಂಖ್ಯೆ ಸಹ ಹತ್ತು ಲಕ್ಷ ಮೀರಿದೆಯಂತೆ.ನನ್ನನ್ನು ಟ್ವಿಟ್ಟರ್ ನಲ್ಲಿ ಅನುಸರಿಸುತ್ತಿರುವ ಎಪ್ಪತ್ತು ಲಕ್ಷ ಮಂದಿಗೆ ಧನ್ಯವಾದಗಳು ಎಂದು ತಮ್ಮ ಕೃತಜ್ಞತೆಯನ್ನು ಟ್ವೀಟ್ ಮಾಡಿ ಹೇಳಿದ್ದಾರೆ ಬಿಗ್ ಬಿ. ಅವರು ಈಗ 840ಮಂದಿಯನ್ನು ಅನುಸರಿಸುತ್ತಿದ್ದಾರೆ. ತಮಗೆ ದೊರೆತ ಸನ್ಮಾನವನ್ನು ಈರೀತಿ ವ್ಯಕ್ತ ಪಡಿಸುವುದು ಸಹ ಅವರ ಉತ್ತಮ ಗುಣಕ್ಕೆ ಸಾಕ್ಷಿ ಆಗಿದೆ.