Article Bollywood Gossips %e0%b2%8e%e0%b2%b0%e0%b2%a1%e0%b3%8a%e0%b2%82%e0%b2%a6%e0%b3%8d%e0%b2%b2 %e0%b2%ae%e0%b3%82%e0%b2%b0%e0%b3%81 %e0%b2%9a%e0%b2%bf%e0%b2%a4%e0%b3%8d%e0%b2%b0%e0%b2%a6%e0%b2%b2%e0%b3%8d%e0%b2%b2%e0%b2%bf %e0%b2%b6%e0%b3%8d%e0%b2%b5%e0%b3%87%e0%b2%a4%e0%b2%be %e0%b2%aa%e0%b2%82%e0%b2%a1%e0%b2%bf%e0%b2%a4%e0%b3%8d 113101100010_1.htm

Daily Horoscope

Select Your Language

Notifications

webdunia
webdunia
webdunia
webdunia

ಎರಡೊಂದ್ಲ ಮೂರು ಚಿತ್ರದಲ್ಲಿ ಶ್ವೇತಾ ಪಂಡಿತ್

ಎರಡೊಂದ್ಲ ಮೂರು
PR
ಈ ಟೀವಿ ಕನ್ನಡದಲ್ಲಿ ಪ್ರಸಾರವಾದ ಬಿಗ್ಬಾಸ್ ಬಂದ ನಂತರ ಬಹುತೇಕರ ಅದೃಷ್ಟ ಬದಲಾಗಿದೆ. ಶ್ವೇತಾ ಪಂಡಿತ್ ಕೂಡಾ ಅವರಲ್ಲಿ ಒಬ್ಬರು. ಇತ್ತೀಚೆಗಷ್ಟೇ ಲೂಟಿ ಎನ್ನುವ ಚಿತ್ರದಲ್ಲಿ ಶ್ವೇತಾ ಪಂಡಿತ್ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಬಂದಿತ್ತು.

ಈಗ ಅದೇ ಶ್ವೇತಾ ಮತ್ತೊಂದು ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಅವರಿಗೆ ನಾಯಕನಾಗಿ ಚಂದನ್ ಕಾಣಿಸಿಕೊಂಡಿದ್ದಾರೆ, ಇದ್ಯಾರು ಚಂದನ್ ಎನ್ನಬೇಡಿ, ಈಟಿವಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಹೀರೋ. ಅವರಿಬ್ಬರು ನಟಿಸುತ್ತಿರುವ ಹೊಸ ಚಿತ್ರಕ್ಕೆ ಎರಡೊಂದ್ಲ ಮೂರು ಎಂದು ನಾಮಕರಣ ಮಾಡಲಾಗಿದೆ.

ಹೆಸರಿನ ಕೆಳಗೆ ಸ್ನೇಹ ಪ್ರೀತಿ ಪ್ರೇಮ ಎಂಬ ಅಡಿಬರಹವೂ ಇದೆ. ಇದೊಂದು ಪಕ್ಕಾ ಲವ್ಸ್ಟೋರಿ ಎಂಬುದರಲ್ಲಿ ಸಂಶಯವೇ ಇಲ್ಲ. ಈ ಮೂಲಕ ಕುಮಾರ್ದತ್ ಎಂಬವರು ನಿರ್ದೆಶಕರಾಗುತ್ತಿದ್ದಾರೆ. ಕಥೆ ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯೂ ಇವರದ್ದೇ. ಮಾಮು ಟೀ ಅಂಗಡಿಯಲ್ಲೂ ಕೆಲಸ ಮಾಡಿರುವ ಕುಮಾರ್ ಈಗ ಎರಡೊಂದ್ಲಾ ಮೂರು ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಅಣಿಯಾಗುತ್ತಿದ್ದಾರೆ. ದೀಪಕ್ ಪಾಟಿಲ್ ಹಾಗೂ ನಳಿನಿ ನಾಗರಾಜ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇವರಿಬ್ಬರಿಗೂ ಇದು ಮೊದಲ ಚಿತ್ರ. ಇದೊಂದು ಪಕ್ಕಾ ಲವ್ಸ್ಟೋರಿ, ಬದುಕಿನಲ್ಲಿ ಸ್ನೇಹ, ಪ್ರೀತಿಯ ಪ್ರಾಮುಖ್ಯತೆಯನ್ನು ಹೇಳಲಾಗುತ್ತದೆ. ಯುವಕರನ್ನು ಟಾರ್ಗೆಟ್ ಮಾಡಿರುವುದರಿಂದ ಚಿತ್ರದುದ್ದಕ್ಕೂ ಮನರಂಜನೆಯೇ ತುಂಬಿದೆ ಎಂದಿದ್ದಾರೆ ಕುಮಾರ್ದತ್. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಸಾಗರ, ಸೊರಬ, ಬೆಂಗಳೂರು ಸುತ್ತಮುತ್ತಲಿನ ಪ್ರದೇಶದಲ್ಲಿ 30 ದಿನಗಳ ಕಾಲ ಚಿತ್ರೀಕರಣಗೊಳ್ಳಲಿದೆ. ನವೆಂಬರ್ 5ಕ್ಕೆ ಚಿತ್ರದ ಮುಹೂರ್ತ.

Share this Story:

Follow Webdunia kannada