Article Bollywood Gossips %e0%b2%8e%e0%b2%82%e0%b2%a6%e0%b3%82 %e0%b2%ae%e0%b2%be%e0%b2%b8%e0%b2%a6 %e0%b2%9a%e0%b3%86%e0%b2%b2%e0%b3%81%e0%b2%b5%e0%b3%86 %e0%b2%b8%e0%b2%be%e0%b2%82%e0%b2%a1%e0%b3%8d%e0%b2%b0%e0%b2%be %e0%b2%ac%e0%b3%81%e0%b2%b2%e0%b2%95%e0%b3%8d 113062000015_1.htm

Daily Horoscope

Select Your Language

Notifications

webdunia
webdunia
webdunia
webdunia

ಎಂದೂ ಮಾಸದ ಚೆಲುವೆ ಸಾಂಡ್ರಾ ಬುಲಕ್

ಸಾಂಡ್ರಾ ಬುಲಕ್
PR
PR
ಆಕೆಗೀಗ 48ರ ಹರೆಯ. ತಾವು ದತ್ತು ಪಡೆದ ಮೂರರ ಹರೆಯದ ಮಗ ಲೂಯಿಸ್ನನ್ನು ನೋಡಿಕೊಳ್ಳಲು ಸ್ವಲ್ಪ ಕಾಲ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದರು. ಈಗ ಮತ್ತೆ ನಟಿಸಲು ರೆಡಿ ಎಂದಿರುವ ಸಾಂಡ್ರಾ ಬುಲಕ್ ಚೆಲುವು ಇನ್ನೂ ಮಾಸಿಲ್ಲ.

ಎಷ್ಟೋ ವರ್ಷದ ಹಿಂದೆಯೇ ನಾನು ತೆರೆಮರೆಗೆ ಸರಿಯಬೇಕಿತ್ತು. ಆದರೆ ಇನ್ನೂ ಇಲ್ಲೇ ಇದ್ದೇನೆ. ಅಷ್ಟೇ ಏಕೆ ಇನ್ನು ಮುಂದೆಯೂ ಇಲ್ಲೇ ಇರುವೆ ಎಂದು ಘಂಟಾಘೋಷವಾಗಿ ಹೇಳಿದ್ದಾರೆ ಸಾಂಡ್ರಾ. ಅದೇ ವಿಷಯವನ್ನು ಜೋಕ್ ಆಗಿಯೂ ಅವರು ತೆಗೆದುಕೊಳ್ಳಬಲ್ಲರು. 'ಒಮ್ಮೆ ಬಾಲಿವುಡ್ನಲ್ಲಿ ಝಂಡಾ ಊರಿದ ನಟಿಯರು ಅಲ್ಲೇ ಇದ್ದು ಬಿಡುತ್ತಾರೆ. ಅನೇಕ ವರ್ಷಗಳಿಂದ ಆಕ್ಟಿವ್ ಆಗಿರುವ ನಟಿಯರು ಇನ್ನೂ ಆಕ್ಟಿವ್ ಆಗಿ ಹಾಗೇ ಉಳಿದಿದ್ದಾರೆ' ಎಂದು ಹೇಳಿ ನಕ್ಕು ಬಿಡುತ್ತಾರೆ.

40 ದಾಟಿದ ಬಾಲಿವುಡ್ ಹಿರೋಯಿನ್ಗಳು ಕಾಮಿಡಿ ಸಿನೆಮಾ ಮಾಡುವಂತೆ ಸಾಂಡ್ರಾ ಸಹ ದಿ ಹೀಟ್ ಎಂಬ ಕಾಮಿಡಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೊಂದು ಮಹಿಳಾ ಕೇಂದ್ರಿತ ಚಿತ್ರ. ಇದರಲ್ಲಿ ನಟಿಸಲು ಸಾಕಷ್ಟು ಖುಷಿ ಆಗುತ್ತದೆ. ನನ್ನದು ಅದರಲ್ಲಿ ಎಫ್ಬಿಐ ಏಜೆಂಟ್ ಪಾತ್ರ' ಎಂದಿದ್ದಾರೆ ಸಾಂಡ್ರಾ.

Share this Story:

Follow Webdunia kannada