Article Bollywood Gossips %e0%b2%8e %e0%b2%86%e0%b2%b0%e0%b3%8d %e0%b2%b0%e0%b3%86%e0%b2%b9%e0%b2%ae%e0%b2%be%e0%b2%a8%e0%b3%8d %e0%b2%ae%e0%b2%97 %e0%b2%b9%e0%b2%be%e0%b2%b2%e0%b2%bf%e0%b2%b5%e0%b3%81%e0%b2%a1%e0%b3%8d%e0%b2%a1%e0%b2%bf%e0%b2%97%e0%b3%86 %e0%b2%8e%e0%b2%82%e0%b2%9f%e0%b3%8d%e0%b2%b0%e0%b2%bf 109072900038_1.htm

Daily Horoscope

Select Your Language

Notifications

webdunia
webdunia
webdunia
webdunia

ಎ.ಆರ್.ರೆಹಮಾನ್ ಮಗ ಹಾಲಿವುಡ್ಡಿಗೆ ಎಂಟ್ರಿ!

ಎಆರ್ರೆಹಮಾನ್
IFM
ರೋಜಾ ಚಿತ್ರದ ಮೂಲಕ ಭಾರತೀಯ ಸಿನಿಮಾ ಸಂಗೀತದಲ್ಲಿ ಭರವಸೆ ಹುಟ್ಟಿಸಿದ ಹಿನ್ನೆಲೆ ಗಾಯಕ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಎರಡು ಆಸ್ಕರ್‌ಗಳನ್ನು ಪಡೆದಿದ್ದೇ ಪಡೆದಿದ್ದು. ಅದರ ಫಲವಾಗಿ ಈಗ ಎಲ್ಲರ ದೃಷ್ಟಿ ಭಾರತೀಯ ಚಿತ್ರರಂಗದ ಸಂಗೀತದ ಮೇಲೆ ನೆಟ್ಟಿದೆ ಎಂಬುದು ಸುಳ್ಳಲ್ಲ. ವಿಶ್ವದೆಲ್ಲೆಡೆ ಈಗ ರೆಹಮಾನ್ ಮೇನಿಯಾ ಶುರುವಾಗಿದೆ.

ರೆಹಮಾನ್ ತನ್ನ ಅದ್ಭುತ ಮೈನವಿರೇಳಿಸುವ ಮಧುರ ಸಂಗೀತ ಸುಧೆಯಿಂದ ಭಾರತೀಯರನ್ನು ತೋಯಿಸಿದ್ದು ಸಾರ್ವಕಾಲಿಕ ಸತ್ಯವಾದರೂ, ಸ್ಲಂ ಡಾಗ್ ಮಿಲಿಯನೇರ್ ಚಿತ್ರದ ಜೈ ಹೋ.. ಹಾಡಿಗೆ ಎರಡು ಆಸ್ಕರ್‌ಗಳನ್ನು ಬಾಚಿಕೊಂಡಿದ್ದರಿಂದ ವಿಶ್ವದ ಗಮನವನ್ನು ಭಾರತದೆಡೆಗೆ ಸೆಳೆದಿದ್ದು ಸುಳ್ಳಲ್ಲ. ಜೈ ಹೋ ಹಾಡಿಗಿಂತ ಎಷ್ಟೋ ಸೊಗಸಾದ ಹಲವು ಹಾಡುಗಳು ರೆಹಮಾನ್ ಬತ್ತಳಿಕೆಯಿಂದ ಬಂದಿವೆಯೆಂಬುದು ಭಾರತೀಯರೆಲ್ಲರಿಗೂ ಗೊತ್ತಿರುವ ಸತ್ಯವಾದರೂ, ರೆಹಮಾನ್‌ರೆಡೆಗೆ ವಿಶ್ವದ ಕುತೂಹಲ ತೆರೆದುಕೊಂಡಿದ್ದು ಜೈ ಹೋ ಹಾಡಿನಿಂದಲೇ ಅಂತ ಧಾರಾಳವಾಗಿ ಹೇಳಬಹುದು. ಈಗ ಇಂತಹ ರೆಹಮಾನ್ ವಿಶ್ವಕ್ಕೆ ಇನ್ನೊಂದು ಕಾಣಿಕೆಯನ್ನೂ ನೀಡುತ್ತಿದ್ದಾರೆ. ಅದೇನಪ್ಪಾ ಅಂದರೆ, ತನ್ನ ಆರರ ಹರೆಯದ ಮಗ ಅಲೀಂ!

webdunia
IFM
ತಂದೆಯಂತೆಯೇ ಸಂಗೀತದಲ್ಲಿ ಅಪಾರ ಆಸಕ್ತಿಯಿರುವ ಅಲೀಂ ಹಾಲಿವುಡ್ ಚಿತ್ರ ಕಪಲ್ಸ್ ರಿಟ್ರೀಟ್‌ನಲ್ಲಿ ತನ್ನ ಕಂಠದಾನ ಮಾಡಿದ್ದಾನೆ. ಅರ್ಥಾತ್ ಹಾಡಿದ್ದಾನೆ. ಹೌದು. ಈ ಕಪಲ್ಸ್ ರಿಟ್ರೀಟ್ ಎಂಬ ಹಾಲಿವುಡ್ ಕಾಮಿಡಿ ಚಿತ್ರದ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್. ಅಲೀಂ ಈಗಲೇ ತಾನು ಮುಂದೆ ಹಿನ್ನೆಲೆ ಗಾಯಕನಾಗಬೇಕೆಂಬ ಕನಸು ಹೊತ್ತಿದ್ದಾನಂತೆ!

ಸ್ಲಂಡಾಗ್ ಚಿತ್ರದ ನಂತರ ರೆಹಮಾನ್‌ರಿಗೆ ವಿಶ್ವ ಚಿತ್ರರಂಗದಲ್ಲಿ ಒಂದರ ಮೇಲೊಂದು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಇತ್ತೀಚೆಗೆ ಆಸ್ಕರ್ ಪ್ರಶಸ್ತಿ ನೀಡುವ ಸಮಿತಿಯ ಸದಸ್ಯರಾಗಲೂ ಎ.ಆರ್.ರೆಹಮಾನ್‌ರಿಗೆ ಆಮಂತ್ರಣ ಬಂದಿತ್ತು.

ಈಗ ಮಗ ಹಾಡಿದ್ದಕ್ಕೆ ರೆಹೆಮಾನ್‌ರಿಗೆ ಆಸ್ಕರ್ ಸಿಕ್ಕಷ್ಟೇ ಅಪಾರ ಸಂತೋಷವಾಗಿದೆಯಂತೆ. ಅಷ್ಟೇ ಅಲ್ಲ. ರೆಹೆಮಾನ್ ಕಚೇರಿ ಬಳಗ, ಹಾಗೂ ಕುಟುಂಬ ವರ್ಗಕ್ಕೆ ಇದರಿಂದ ಅಪಾರ ಹೆಮ್ಮೆಯಾಗಿದೆಯಂತೆ. ಪ್ರತಿದಿನವೂ ಈಗ ಎಲ್ಲರ ಬಾಯಲ್ಲೂ ಅಲೀಂ, ಅಲೀಂ, ಅಲೀಂ... ಅಷ್ಟೇ. ಹೀಗೆ ಆರರ ಪೋರ ಎಲ್ಲರ ಮನದಂಗಳಕ್ಕೆ ಲಗ್ಗೆಯಿಟ್ಟಿದ್ದಾನಂತೆ.

ಅಲೀಂ ಅಪ್ಪ ರೆಹಮಾನ್ ಹಾಗೂ ಅಮ್ಮ ಇಬ್ಬರೂ ಮಗ ಅಪ್ಪನ ಹಾದಿಯಲ್ಲೇ ಸಾಗುತ್ತಿರುವುದಕ್ಕೆ ತುಂಬ ಖುಷಿಪಟ್ಟಿದ್ದಾರೆ ಎಂಬುದು ರೆಹಮಾನ್ ಆಪ್ತರ ಮಾತು. ಪೀಟರ್ ಬೆಲ್ಲಿಂಸ್ಲೇ ನಿರ್ದೇಶನದ ಕಪಲ್ಸ್ ರಿಟ್ರೀಟ್ ಕಾಮಿಡಿ ಚಿತ್ರವಾಗಿದ್ದು, ರೆಹಮಾನ್ ಅವರ ಮಧುರ ಸಂಗೀತ ಚಿತ್ರದ ಪ್ಲಸ್ ಪಾಯಿಂಟ್ ಅಂತೆ. ಚಿತ್ರ ಇದೇ ವರ್ಷಾಂತ್ಯದಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ.

Share this Story:

Follow Webdunia kannada