Publish Date: Thu, 06 Mar 2008 (15:05 IST)
Updated Date: Thu, 06 Mar 2008 (15:05 IST)
ಉತ್ತಮ ಕಥೆಯ ಚಿತ್ರಗಳಲ್ಲಿ ಮಾತ್ರ ನಟಿಸುವುದಾಗಿ ಬಾಲಿವುಡ್ ಬಾಂಬ್ ಶೆಲ್ ಬಿಪಾಶಾಬಸು ಹೇಳಿದ್ದಾರೆ.
ಅನೇಕ ಚಿತ್ರಗಳಲ್ಲಿ ಗ್ಲಾಮರ್ ಪಾತ್ರಗಳಿಗೆ ಹಾಗೂ ಐಟಂ ಸಾಂಗ್‌ಗಳಿಗೆ ಮಾತ್ರ ಸೀಮಿತವಾಗಿರಿಸಿಕೊಂಡು ಅನೇಕ ನಿರ್ದೇಶಕರು ತಮ್ಮನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಅಲವತ್ತುಕೊಂಡಿದ್ದಾಳೆ.ಇನ್ನು ಮುಂಬರುವ ದಿನಗಳಲ್ಲಿ ಉತ್ತಮ ಕಥೆಯ ಪಾತ್ರಗಳಿಗೆ ಆದ್ಯತೆ ನೀಡುವುದಾಗಿ ಘೋಷಿಸಿದ್ದಾರೆ.
ಆಸಿಡ್ ಫ್ಯಾಕ್ಟರಿ ಚಿತ್ರವನ್ನು ನಿರ್ಮನಿಸುತ್ತಿರುವ ನಿರ್ದೇಶಕ ಸಂಜಯ ದಾಸ್ ಗುಪ್ತಾ ಅವರಿಗೆ ಚಿತ್ರದಲ್ಲಿ ಉತ್ತಮ ಪಾತ್ರ ನೀಡದಿದ್ದಲ್ಲಿ ಚಿತ್ರದಿಂದ ಹೊರಹೋಗುವುದಾಗಿ ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಬಾಲಿವುಡ್ ಮೂಲಗಳು ತಿಳಿಸಿವೆ
"ಆಸಿಡ್ ಫ್ಯಾಕ್ಟರಿ" ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟರು ಹೆಚ್ಚಿನ ಸಂಖ್ಯೆಯಲ್ಲಿದ್ದು ಮಹಿಳಾ ಪಾತ್ರಧಾರಿಯಾಗಿ ಕೇವಲ ಬಿಪಾಶಾ ನಟಿಸುತ್ತಿದ್ದಾರೆ.ಆದರೆ ಚಿತ್ರಕಥೆಯಲ್ಲಿ ತಮಗೆ ಹೆಚ್ಚಿನ ಆದ್ಯತೆ ನೀಡದಿರುವುದರಿಂದ ಕಥೆಯನ್ನು ಬದಲಿಸಿದಲ್ಲಿ ಮಾತ್ರ ಚಿತ್ರದಲ್ಲಿ ಮುಂದುವರೆಯುವುದಾಗಿ ಹೇಳಿದ್ದಾರೆ.
"ಆಸಿಡ್ ಫ್ಯಾಕ್ಟರಿ" ಚಿತ್ರವನ್ನು ಸಂಜಯ್ ದಾಸ್ ಗುಪ್ತಾ ನಿರ್ದೇಶಿಸುತ್ತಿದ್ದು, ಫರ್ದಿನ್ ಖಾನ್, ಇರ್ಫಾನ್ ಖಾನ್,ಅಫ್ತಾಬ್, ದಿನೋ ಮಾರಿಯಾ, ಮನೋಜ್ ಬಾಜಪೈ ಮತ್ತು ಡ್ಯಾನಿ ಡೆನ್‌ಝೋಪಾ ಅವರುಗಳಶು ನಟಿಸುತ್ತಿದ್ದಾರೆ.