Publish Date: Mon, 10 Sep 2007 (17:43 IST)
Updated Date: Mon, 10 Sep 2007 (17:42 IST)
ಬಾಲಿವುಡ್ ನಟಿ ಈಶಾ ಡಿಯೋಲ್ ಆಕ್ಷನ್ ಪ್ಯಾಕೆಡ್ ಜೀವನದಲ್ಲಿ ತನ್ನ ಐದು ಫೇವರಿಟ್‌ಗಳ ಬಗ್ಗೆ ಹೇಳುತ್ತಾಳೆ.
ಸಾಸರ್: ಈಶಾ ಡಿಯೋಲ್ ಶಾಲೆಯ ದಿನಗಳಲ್ಲಿ ಒಳ್ಳೆಯ ಕ್ರೀಡಾಪಟು ಆಗಿದ್ದಳಂತೆ. ಅವಳ ಬಳಿ ಫುಟ್ಬಾಲ್ ಶೂಗಳ ದೊಡ್ಡ ಸಂಗ್ರಹವೇ ಇದೆ.ನಾನು ದೊಡ್ಡ ಸಾಸರ್ ಅಭಿಮಾನಿ. ಏಳು ವರ್ಷಗಳ ತನಕ ಸಾಸರ್ ಆಟ ಆಡಿದ್ದೇನೆ.
ಫುಟ್ಬಾಲ್ ಮೈದಾನದಲ್ಲಿ ಇರುವುದು ಆಹ್ಲಾದಕರ ಭಾವನೆ ಉಂಟುಮಾಡುತ್ತದೆ" ಎನ್ನುವುದು ಈಶಾ ಅಂಬೋಣ.
ಐಸ್ ಕ್ರೀಮ್: ಈಶಾ ಕ್ಯಾಲರಿ ಕೌಂಟ್ ಬಗ್ಗೆ ತಲೆಕೆಡಿಸಿಕೊಳ್ಳದೇ ಸಿಕ್ಕ ಸಿಕ್ಕ ಐಸ್ ಕ್ರೀಮ್‌ಗಳನ್ನು ತಿನ್ನುವ ರೂಢಿ ಬೆಳೆಸಿಕೊಂಡಿದ್ದಾಳೆ. "ಚಾಕಲೇಟ್ ಸಾಸ್ ಜತೆಗೆ ವೆನಿಲ್ಲಾ ಐಸ್ ಕ್ರೀಮ್ ಮೆಲ್ಲುವುದೆಂದರೆ ತುಂಬ ಇಷ್ಟ.ಪ್ರತಿ ಭಾನುವಾರ ನಾನು ಐಸ್ ಕ್ರೀಮ್ ತಿನ್ನುವುದು ನಿಮ್ಮ ಕಣ್ಣಿಗೆ ಬೀಳಬಹುದು" ಎಂದು ಈಶಾ ಉವಾಚ.
ಪೆಟ್: ಈಶಾ ಡಿಯೋಲ್ ನಾಲ್ಕು ಸಾಕುನಾಯಿಗಳ ಓನರ್. ತನ್ನ ಚಿತ್ರ ಡಾರ್ಲಿಂಗ್ ಹೆಸರಿನ ಇನ್ನೊಂದು ಶ್ವಾನ ಕೂಡ ಶ್ವಾನಗುಂಪಿಗೆ ಸೇರ್ಪಡೆಯಾಗಿದೆಯಂತೆ. ಅವು ನನ್ನ ಜಾನ್ ಎಂದು ಡಿಯೋಲ್ ಹೇಳುತ್ತಾಳೆ.
ಡ್ಯಾನ್ಸ್: ಶಾಸ್ತ್ರೀಯ ನೃತ್ಯ ಭರತನಾಟ್ಯ ಕಲಿಯಿರಿ ಎಂದು ಮಾಮಾ ಮಾಲಿನಿ ತನ್ನ ಪ್ರಿಟಿ ಪುತ್ರಿಯರಿಗೆ ಹೇಳಿ ಹೇಳಿ ಸಾಕಾಗಿಹೋಯಿತಂತೆ. ಭರತನಾಟ್ಯ ಬಹಳ ಓಜಸ್ಸಿನಿಂದ ಕೂಡಿದೆ ಎನ್ನುವುದು ಅವರ ಭಾವನೆ. ಹೀಗಾಗಿ ಒಡಿಸ್ಸಿ ನೃತ್ಯವನ್ನು ಆರಿಸಿಕೊಂಡರು,
"ನೃತ್ಯ ನನ್ನ ಜೀವನದ ಹಂಬಲ. ಪೂಜೆ ರೀತಿಯಲ್ಲಿ ಅದನ್ನೂ ಮಾಡುತ್ತೇನೆ. ದೇವ, ದೇವತೆಗಳ ನೃತ್ಯದಿಂದ ನನಗೆ ಆಂತರಿಕ ನೆಮ್ಮದಿ ಸಿಗುತ್ತದೆ" ಎಂದು ಈಶಾ ಹೇಳುತ್ತಾಳೆ. ತನ್ನ ತಾಯಿಯಂತೆ ಈಶಾ ಕೂಡ ಧಾರ್ಮಿಕ ಭಕ್ತಿಯುಳ್ಳವಳು.
ನನ್ನ ಮಾಮ್ ಕೃಷ್ಣ ಭಕ್ತೆ. ಆದರೆ ನಾನು ಈಶ್ವರ ಭಕ್ತೆ. ಈಶ್ವರನಿಂದ ಶಕ್ತಿ ಮತ್ತು ಸ್ಫೂರ್ತಿ ಪಡೆಯುತ್ತೇನೆ ಎಂದು ಹೇಳುತ್ತಾಳೆ.