Article Bollywood Gossips %e0%b2%88%e0%b2%97%e0%b2%be %e0%b2%a8%e0%b3%87%e0%b2%b9%e0%b2%be %e0%b2%a6%e0%b3%81%e0%b2%aa%e0%b2%bf%e0%b2%af%e0%b2%be %e0%b2%85%e0%b2%ab%e0%b3%87%e0%b2%b0%e0%b3%8d %e0%b2%b8%e0%b2%b0%e0%b2%a6%e0%b2%bf 108102800020_1.htm

Daily Horoscope

Select Your Language

Notifications

webdunia
webdunia
webdunia
webdunia

ಈಗಾ ನೇಹಾ ದುಪಿಯಾ ಅಫೇರ್ ಸರದಿ

ನೇಹಾ ದುಪಿಯಾ
IFM
ಮತ್ತೊಂದು ಬಿಸಿಬಿಸಿ ಸುದ್ದಿ ಬಂದಿದೆ. ಅದು ಬಾಲಿವುಡ್‌ನ ಹಾಟ್ ಸಿಂಬಲ್ ನೇಹಾ ದುಪಿಯಾ ಅಫೇರ್ ಬಗ್ಗೆ. ಅವಳಿಗೊಬ್ಬ ಬಾಯ್‌ಫ್ರೆಂಡ್ ಇದ್ದು, ಅವನ ಜತೆ ಕಳೆದೆರಡು ವರ್ಷಗಳಿಂದ ರೊಮ್ಯಾನ್ಸ್ ಮಾಡುತ್ತಿದ್ದಾಳಂತೆ. ಇತ್ತೀಚೆಗಷ್ಟೇ ದೀಪಿಕಾ-ರಣಬೀರ್ ತಮ್ಮ ಪ್ರೀತಿಯನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದು ನಿಮಗೂ ಗೊತ್ತು. ಅದೇ ಸಾಲಿಗೆ ಸೇರುವ ಹಾದಿಯಲ್ಲಿ ನೇಹಾ ದುಪಿಯಾ ಕೂಡ ಸಾಗಿದ್ದಾಳೆ.

ನೇಹಾ ದುಪಿಯಾ ಅಪರಿಚಿತಳೇನೂ ಅಲ್ಲ. ಖಯಾಮತ್ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಕೇರಳ ಮೂಲದ ಬಾಲೆ ನಂತರ ನಂತರ ನಟಿಸಿದ್ದೆಲ್ಲ ಬಿಸಿ ಬಿಸಿ ಚಿತ್ರಗಳೇ. 'ಜ್ಯೂಲಿ'ಯಲ್ಲಿ ಬಟಾಂಬಯಲು ಬೆತ್ತಲೆ ಬೆನ್ನು ತೋರಿಸಿ ರಸಿಕರ ಹೊಟ್ಟೆಗೆ ಉರಿಹಚ್ಚಿದರೂ ಚಿತ್ರ ಹಿಟ್ ಆಗಲಿಲ್ಲ. ನಂತರ ಬಂದ ಹಾಟ್‌ಚಿತ್ರ 'ಶೀಶಾ' ಇದಕ್ಕಿಂತ ಭಿನ್ನವೇನಲ್ಲ.

ಹಲವು ಚಿತ್ರಗಳಲ್ಲಿ ಸಾಕಷ್ಟು ಜನರ ಜತೆ ತುಟಿಗೆ ತುಟಿ ಬೆಸೆದು, ಬಟ್ಟೆಯ ಅಲರ್ಜಿಯನ್ನು ತೆರೆಯ ಮೇಲೆ ಬಿಂಬಿಸಿದ ಈಕೆ ಹಲವರ ಮನ ಕದ್ದಿದ್ದಾಳೆ ಎನ್ನುವುದೂ ಸುಳ್ಳಲ್ಲ. ನಿರ್ಮಾಪಕರ ಜೇಬು ಇವಳಿಂದ ಸಾಕಷ್ಟು ತುಂಬದಿರುತ್ತಿದ್ದರೆ ಈಕೆ ಈಗಲೂ ಬ್ಯುಸಿ ನಟಿಯಾಗುತ್ತಿರಲೂ ಇಲ್ಲ. ಐಯಾಮ್ 24, ಕಭಿ ಪ್ಯಾರ್ ನಾ ಕರ್ನಾ, ಹಾಟ್, ಪೇಯಿಂಗ್ ಗೆಸ್ಟ್ಸ್, ದಸ್ವಿದಾನಿಯಾ, ರಾತ್ ಗಯೀ ಬಾತ್ ಗಯೀ, ಮಹಾರತಿ, ದೇ ದನಾ ದನ್, ಕುಚ್ ಲವ್, ಕುಚ್ ಡ್ರಾಮಾ, ಸೆಲ್‌ಫೋನ್ ಮುಂತಾದ ಚಿತ್ರಗಳಿವೆ ನೇಹಾ ಕೈಯಲ್ಲಿ.

ಇದೀಗ ಸ್ಕ್ವಾಶ್ ಪ್ಲೇಯರ್ ರಿತ್ವಿಕ್ ಭಟ್ಟಾಚಾರ್ಯ ಜತೆಗೆ ತನಗೆ ಸಂಬಂಧವಿದೆ ಎಂದು ಬಹಿರಂಗವಾಗಿ ಘೋಷಿಸಿಕೊಂಡಿರುವ ನೇಹಾ ದುಪಿಯಾ ಈ ಸಂಬಂಧ ಇಬ್ಬರೂ 'ಪೀಪಲ್' ಮ್ಯಾಗಜಿನ್‌ಗೆ ಸಂದರ್ಶನ ಕೂಡಾ ನೀಡಿದ್ದಾರೆ. ನವೆಂಬರ್ ಸಂಚಿಕೆಯ ಮುಖಪುಟ ಸುದ್ದಿಯಾಗಿ ಇದು ಪ್ರಕಟಗೊಂಡಿದೆ.

ನಮ್ಮಿಬ್ಬರ ತಂದೆ-ತಾಯಿಗಳಿಗೂ ಈ ವಿಚಾರ ಗೊತ್ತು. ಅವರು ನಮ್ಮನ್ನು ಬೆಂಬಲಿಸುತ್ತಿದ್ದಾರೆ. ನಮ್ಮ ಮೇಲೆ ಅವರಿಗೆ ನಂಬಿಕೆಯಿದೆ ಎಂಬ ಮಾತುಗಳು ಅವರಿಬ್ಬರಿಂದ ಬರುತ್ತಿವೆ.

"ಇವಳ ಪರಿಚಯವಾಗುವುದಕ್ಕಿಂತ ಮೊದಲೇ ಇವಳ ತಂದೆ ಬಗ್ಗೆ ನನಗೆ ಗೊತ್ತಿತ್ತು. ನನ್ನ ತಂದೆ-ತಾಯಿಗಳಿಗೂ ನೇಹಾ ಬಗ್ಗೆ ಗೊತ್ತು. ನಾನು ಕಳೆದ 12 ವರ್ಷಗಳಿಂದ ಮನೆಯಲ್ಲಿಲ್ಲ. ಅವರೆಂದೂ ನನ್ನ ಆಸೆಗಳ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಿಲ್ಲ. ನನ್ನ ಹೆತ್ತವರು ಅವಳನ್ನು ತುಂಬಾ ಇಷ್ಟಪಡುತ್ತಿದ್ದಾರೆ. ನೇಹಾ ತುಂಬಾ ಸಿಂಪಲ್ ಮತ್ತು ವಿನಮ್ರ ಹುಡುಗಿ" ಹೀಗೆಂದು ನೇಹಾಳನ್ನು ಅಪಾದಮಸ್ತಕ ಹೊಗಳಿದ್ದಾನೆ ಪ್ರಿಯಕರ ರಿತ್ವಿಕ್.

ಹೊಗಳಿಕೆ ವಿಚಾರದಲ್ಲಿ ಆಕೆಯೇನೂ ಹಿಂದೆ ಬಿದ್ದಿಲ್ಲ. "ಈತ ನನ್ನ ಜೀವನದಲ್ಲಿ ಎಷ್ಟು ಮುಖ್ಯ ಅನ್ನುವುದು ನನ್ನ ಹೆತ್ತವರಿಗೆ ಗೊತ್ತು. ನನ್ನ ಸಹೋದರ ನನ್ನನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾನೆ. ತಂದೆಯ ಶ್ಲಾಘನೆಗೂ ರಿತ್ವಿಕ್ ಪಾತ್ರನಾಗಿದ್ದಾನೆ. ಅವನಲ್ಲಿ ನಾನು ನನ್ನ ತಂದೆಯನ್ನು ನೋಡುತ್ತಿದ್ದೇನೆ" ಎಂದು ಪ್ರಿಯಕರ ರಿತ್ವಿಕ್ ಬಗ್ಗೆ ನೇಹಾ ಹೇಳಿರುವ ಮಾತುಗಳಿವು.

ಅಷ್ಟಕ್ಕೂ ಪ್ರೀತಿ ಹುಟ್ಟಿಕೊಂಡದ್ದು ಹೇಗೆ ಎಂಬ ಪ್ರಶ್ನೆಗೆ "ಗೆಳೆಯನ ಮೂಲಕ ಪರಿಚಯವಾಯಿತು. ಗೆಳೆತನ ಬೆಳೆದು ಪ್ರೀತಿಯಾಗಲು ಬಹಳ ಸಮಯ ಹಿಡಿಯಲಿಲ್ಲ" ಎನ್ನುತ್ತಾಳೆ ನೇಹಾ. ಮದುವೆ ಬಗ್ಗೆ ಸದ್ಯ ಯಾವುದೇ ಪ್ರಶ್ನೆಗಳಿಲ್ಲವಂತೆ. ಎನಿ ಹೌ... ಬೆಸ್ಟ್ ಆಫ್ ಲಕ್ ನೇಹಾ...



Share this Story:

Follow Webdunia kannada