Article Bollywood Gossips %e0%b2%88 %e0%b2%ac%e0%b3%81%e0%b2%a6%e0%b3%8d%e0%b2%a6%e0%b2%bf %e0%b2%ae%e0%b3%8a%e0%b2%a6%e0%b2%b2%e0%b3%87 %e0%b2%87%e0%b2%b0%e0%b2%ac%e0%b2%be%e0%b2%b0%e0%b2%a6%e0%b2%bf%e0%b2%a4%e0%b3%8d%e0%b2%a4%e0%b2%be %e0%b2%aa%e0%b3%86%e0%b2%a8%e0%b3%8d 113120100005_1.htm

Daily Horoscope

Select Your Language

Notifications

webdunia
webdunia
webdunia
webdunia

ಈ ಬುದ್ದಿ ಮೊದಲೇ ಇರಬಾರದಿತ್ತಾ ಪೆನ್ ?

ಮಡೋನ್ನಾ
PR
PR
ಕೇವಲ ಹೇಳುವುದು ಮಾತ್ರವಲ್ಲ ಅದನ್ನು ಕೃತಿಗೆ ತರುವ ಗುಣ ಸಹ ಕೆಲವರು ತಮ್ಮ ಬದುಕಲ್ಲಿ ಅಳವಡಿಸಿಕೊಂಡಿರುತ್ತಾರೆ. ಅಂತಹ ಉತ್ತಮ ಅಂಶಗಳನ್ನು ಹಾಲಿವುಡ್ ನ ಪ್ರಖ್ಯಾತ ಪಾಪ್ ಗಾಯಕಿ ಮಡೋನ್ನಾ ಹೊಂದಿದ್ದಾರೆ. ಆಕೆಗೆ ಸಹಾಯ ಮಾಡುವುದು ಅಂದ್ರೆ ತುಂಬಾ ಇಷ್ಟ. ಪ್ರಕೃತಿಯ ವಿಕೋಪಕ್ಕೆ ಒಳಗಾದವರಿಗೆ ಉತ್ತಮ ರೀತಿಯಲ್ಲಿ ಸಹಾಯ ಮಾಡುತ್ತಾರಂತೆ. ಮೂರು ವರ್ಷಗಳ ಹಿಂದೆ ಹೈಟಿಯಲ್ಲಿ ಉಂಟಾದ ಭೂಕಂಪದ ಬಗ್ಗೆ ಎಲ್ಲರಿಗೂ ತಿಳಿದೇ ಇದೆ.

ಆ ಸಮಯದಲ್ಲಿ ಭೂಕಂಪದ ಕೋಪದಿಂದ ತತ್ತರಿಸಿದ ಜನಕ್ಕೆ ಮಡೋನ್ನಾ ಹೇರಳವಾಗಿ ಸಹಾಯ ಮಾಡಿದ್ದರಂತೆ. ಈಕೆ ಮತ್ತೊಮ್ಮೆ ಹೈಟಿಗೆ ತನ್ನ ಮಾಜಿ ಪತಿ ನಟ,ನಿರ್ದೇಶಕ-ನಿರ್ಮಾಪಕ ಸಿನ್ ಪೆನ್ ನೀಡಿದ ಆಹ್ವಾನ ಗೌರವಿಸಿ ಅಲ್ಲಿಗೆ ಹೋಗಿದ್ದರು, ಅಲ್ಲಿ ಅನೇಕ ಸಾಮಾಜಿಕ ಸೇವಾ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಪೆನ್.

webdunia
PR
PR
ಈ ಕಾರ್ಯಕ್ರಗಳಿಗೆ ಸಹಕಾರ ನೀಡು ಎಂದು ಮಡೋನ್ನಾಳನ್ನು ಕೇಳಿದಾಗ ಆಕೆ ಸಮ್ಮತಿಸಿದರಂತೆ. ಹೈಟಿ ಅಭಿವೃದ್ಧಿಗೆ ಏನು ಮಾಡಿದರೆ ಒಳ್ಳೆಯದು ಎಂದು ತಿಳಿಯಲು ತನ್ನ ಮಗನನ್ನು ಸಹ ಆಕೆ ಜೊತೆಗೆ ಕರೆದೊಯ್ದರು. ಅಲ್ಲಿನ ಆಸ್ಪತ್ರೆ, ಹಿಂದುಳಿದ ಪ್ರದೇಶಗಳಿಗೆ ಭೇಟಿ ನೀಡಿದರಂತೆ ಮಡೋನ್ನಾ.

ನನ್ನ ಮಾಜಿ ಹೆಂಡತಿ ಮನಸ್ಸು ಎಷ್ಟು ಬಂಗಾರ ಅಂತ ಪೆನ್ ಈಗ ಗುಣಗಾನ ಮಾಡುತ್ತಿದ್ದಾರೆ. ಆ ಬುದ್ದಿ ಮೊದಲೇ ಇದ್ದಿದ್ದಿದ್ದರೆ ಡೈವೋರ್ಸ್ ಕೊಡ್ತಾ ಇರಲಿಲ್ಲ ಎನ್ನುತ್ತಿದ್ದಾರೆ ಕುಹಕಿಗಳು !

Share this Story:

Follow Webdunia kannada