Article Bollywood Gossips %e0%b2%87%e0%b2%b7%e0%b3%8d%e0%b2%9f%e0%b3%81 %e0%b2%95%e0%b3%8d%e0%b2%b0%e0%b3%87%e0%b2%9c%e0%b3%86 %e0%b2%86%e0%b2%b9%e0%b2%be 113110500013_1.htm

Select Your Language

Notifications

webdunia
webdunia
webdunia
webdunia

ಇಷ್ಟು ಕ್ರೇಜೆ ಆಹಾ!

ಮಲ್ಟಿ ಸ್ಟಾರ್
PR
ಮಲ್ಟಿ ಸ್ಟಾರ್ ಗಳ ಸಿನಿಮಾದಲ್ಲಿ ನಟಿಸೋಲ್ಲ ಅಂತ ಸ್ಯಾಂಡಲ್ ವುಡ್ ನ ಮಂದಿ ಬೊಂಬಡಾ ಬಜಾನ ಮಾಡ್ತಾ ಇದ್ದರೆ ಬೇರೆ ಭಾಷಿಗರು ನಾವು ಹೇಗೆ ಮಾಡಿದ್ರು ಗೆದ್ದೇ ಗೆಲ್ತಿವಿ ಎಂದು ಧೈರ್ಯವಾಗಿ ಒಟ್ಟಿಗೆ ನಟಿಸಿ ಗೆದ್ದು ತೋರಿಸಿದ್ದಾರೆ. ನಮ್ ಕನ್ನಡ ಇಂಡಸ್ಟ್ರಿ ತುಂಬಾ ಸ್ಮಾಲು ಬಿಡಿ ಅದಕ್ಕೆ ಹೀಗೆ ಅಂತ ನೀವು ಹೇಳ ಬಹುದು , ಇರಬಹುದು, ಆದರೆ ಸಿನಿಮಾ ವಾಸ್ತು ಪ್ರಕಾರ ಮಲ್ಟಿ ತಾರೆಗಳ ಚಿತ್ರಗಳು ಗೆದ್ದಿರುವುದು ತುಂಬಾ ಕಡಿಮೆ. ಅಯ್ಯೋ ಹಾಗಾದ್ರೆ ಹಿಂದಿನ ಕಾಲದಲ್ಲಿ ಅಂತಹ ವಾತಾವರಣ ಇತ್ತಲ್ಲ ಈಗೇನು ಹೊಸ ಪರಿ ಅಂಬೋ ನಿಮ್ಮ ಬೇಸರ ನಮಗೆ ಅರ್ಥ ಆಗುತ್ತೆ. ಆದರೆ ಸತ್ಯವಾಗಲು ಅದರ ಬಗ್ಗೆ ಯಾರಿಗೂ ಕಾರಣ ತಿಳಿದಿಲ್ಲ ಬಿಡಿ .

ಏನೇ ಹೇಳಿ ಬೇರೆ ಭಾಷಿಗ ಚಿತ್ರದಲ್ಲಿ ಹಲವಾರು ಸೂಪರ್ ತಾರೆಗಳು ಒಟ್ಟಾಗಿ ಸೇರಿ ನಟಿಸುವ ಪರಿ ಈಗ ಕಾಮನ್. ತೆಲುಗಿನ ಮಹಾನ್ ತಾರೆಯರಾದ ವೆಂಕಟೇಶ್ ಮತ್ತು ರಾಮ್ ಚರಣ್ ತೇಜ ಈಗ ಆ ಪಟ್ಟಿಗೆ ಸೇರ್ಪಡೆ ಆಗಿದ್ದಾರೆ. ಕೃಷ್ಣ ವಂಶಿ ನಿರ್ದೇಶನದಲ್ಲಿ ಚಿತ್ರದಲ್ಲಿ ಈ ನಕ್ಷತ್ರಗಳು ಮಿನುಗಲು ಹೊರಟಿದ್ದಾರೆ. ಇದನ್ನು ಬ೦ಡಲ ಗಣೇಶ್ ನಿರ್ಮಿಸಲು ಹೊರಟಿದ್ದಾರೆ. ಅನದಗೆ ಕಥೆ ಸಿಕ್ಕಾಪಟ್ಟೆ ಭಿನ್ನ ಆಗಿದೆ ಅಂತಾರೆ ನಿರ್ದೇಶಕರು.


ಈ ತಾರೆಯರ ಪ್ಯಾನ್ಗಳಿಗೆ ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ಕ್ಯುರಿಯಸ್ ಉಂಟಾಗಿದೆ. ವಾವ್ ಎಂಗೆ ಇರ ಬಹುದು ಕತೆ ಎನ್ನುವ ಕುತೂಹಲ ಟಾಲಿವುಡ್ ಗಲ್ಲಿಗಲ್ಲಿಯಲ್ಲಿ ಮನೆ ಮಾಡಿದೆ. ಒಟ್ಟಾರೆ ಇನ್ನು ಪಾತ್ರವರ್ಗದ ಶೋಧನೆ ನಡೀತಾ ಇದೆ. ಇನ್ನು ಆರಂಭವೇ ಆಗಿಲ್ಲ ಆಗಲೇ ಇಷ್ಟು ಕ್ರೇಜೆ ಆಹಾ!

Share this Story:

Follow Webdunia kannada