Publish Date: Wed, 08 Aug 2007 (13:02 IST)
Updated Date: Wed, 08 Aug 2007 (13:02 IST)
ಬಾಲಿವುಡ್ ತಾರೆ ಇಷಾ ಡಿಯೊಲ್ ಇದೀಗ ಗಾರ್ನಿಯೆರ್ ಬಿಡುಗಡೆ ಮಾಡಿರುವ ಹೊಸ ಫೇರ್‌ನೆಸ್ ಕ್ರೀಮ್‌ನ ಅಧಿಗಕೃತ ರಾಯಭಾರಿಯಾಗಿ ನೇಮಕವಾಗಿದ್ದಾರೆ.
ಇಷಾ ಆಯ್ಕೆಗೆ ಮುನ್ನ ಕಂಪನಿಯು ಕರೀನಾ ಕಪೂರ್,ಸಿಮೋನ್ ಸಿಂಗ್, ಇಷಾ ಕೊಪಿಕರ್ ಇವರ ಮುಖಸೌಂದರ್ಯ, ನಾಜೂಕುತನವನ್ನು ಪರಿಗಣಿಸಿದೆಯಾದರೂ, ಇಷಾಡಿಯೋಲ್‌ರನ್ನೇ ಅಂತಿಮವಾಗಿ ಆರಿಸಿದೆ.
ಗಾರ್ನಿಯರ್ ಹೊಸ ಬ್ರಾಂಡ್ ವಿಶೇಷವಾಗಿ ಹೊಸ ಪೀಳಿಗೆಯನ್ನು ಗಮನದಲ್ಲಿರಿಸಿ ಉತ್ಪನ್ನ ಮಾರುಕಟ್ಟೆಗಿಳಿಸಿದೆ. ಇದಕ್ಕಾಗಿ ಇಷಾ ಹೆಚ್ಚು ಹೊಂದಿಕೆಯಾಗುತ್ತಾರೆ ಎನ್ನುವುದು ಕಂಪನಿಯ ಹೇಳಿಕೆ.
ಇಷಾ ತನ್ನ ಬಿಂದಾಸ್ ಸೌಂದರ್ಯ ಪ್ರದರ್ಶನವನ್ನು ಪ್ರೊವೋಗ್ ಜವುಳಿ ಬ್ರಾಂಡ್ , ಚಿತ್ರೀಕರಣ ಹಂತದಲ್ಲಿರುವ ಕ್ಯಾಶ್, ಡಾರ್ಲಿಂಗ್ ಇತ್ಯಾದಿ ಸಿನೆಮಾಗಳಲ್ಲೂ ಪ್ರದರ್ಶಿಸುತ್ತಿರುವುದು ಗಮನಾರ್ಹ.