ಇವರ್ಯಾರು ಮತ್ತು ಅವರು ಯಾರು ಯಾರು ?
, ಬುಧವಾರ, 5 ಫೆಬ್ರವರಿ 2014 (10:35 IST)
ನಮಗೆ ಗೊತ್ತಿರುವಂತೆ ಒಂದೇ ರೀತಿಯ ಏಳು ಜನರು ಜನ್ಮ ಎತ್ತಿರುತ್ತಾರಂತೆ. ಅಂತಹ ಹೋಲಿಕೆಗಳ ಜನ ಕಂಡಾಗ ಆಶ್ಚರ್ಯ ಆಗುವುದು ಸಹಜ. ಆದರೆ ಸಿನಿಮಾರಂಗದಲ್ಲಿ ಆ ರೀತಿಯ ಹೋಲಿಕೆ ಇರುವವರನ್ನು ಕಂಡಾಗ ಹೆಚ್ಚು ವಿಶೇಷ ಅನ್ನಿಸುತ್ತದೆ. ಅಂತಹವರು ಬಾಲಿವುಡ್ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇದ್ದಾರೆ ಎಂದೇ ಹೇಳ ಬಹುದು.. ಈಗ ನೋಡಿ ಇತ್ತೀಚೆಗಷ್ಟೇ ಬಿಡುಗಡೆ ಆದ ಜೈ ಹೋ ಕಥೆ ಬಗ್ಗೆ ಹೇಳೋಕ್ಕಿಂತ ಅದರ ಹೀರೋಯಿನ್ ಡೈಸಿ ಷಾ ಬಗ್ಗೆ ಹೇಳುವುದಾದರೆ, ಆಕೆ ನೋಡಲು ಹಿರಿಯ ನಟಿ ರಾಣಿ ಮುಖರ್ಜಿ ರೀತಿ ಇದ್ದಾಳೆ ಅನ್ನುವುದೇ ಬಾಲಿವುಡ್ ನಲ್ಲಿ ಹರಿದಾಡುತ್ತಿರುವ ಮಾತು. ಕೇವಲ ಡೈಸಿ ಮಾತ್ರವಲ್ಲ ಅನೇಕರು ಇಂತಹ ಹೋಲಿಕೆಯನ್ನು ಹೊಂದಿದ್ದಾರೆ. ಸ್ನೇಹ ಉಳ್ಳಾಲ್ ಕಥೆಯನ್ನು ತೆಗೆದುಕೊಳ್ಳುವುದೇ ಆದರೆ ಆಕೆ ಥೇಟ್ ಐಶ್ವರ್ಯ ರಾಯ್ ಳಂತೆ ಇರೋದು. ಇಬ್ಬರ ಕಣ್ಣು ಮತ್ತು ಬಣ್ಣ .. ಒಂದು ಆಂಗಲ್ ನಲ್ಲಿ ನೋಡಿದರೆ ಇಬ್ಬರು ಬೇರೆ ಬೇರೆ ಅನ್ನಿಸಲ್ಲ. ಸಲ್ಮಾನ್ ಖಾನ್ ಸ್ನೇಹಳನ್ನು ಬಾಲಿವುಡ್ ಗೆ ಪರಿಚಯ ಮಾಡಿದ್ದು. ಜರೈನ್ ನಾ ಖಾನ್ ಕತ್ರಿನಾ ಕೈಫ್, ಇದೆ ಪಟ್ಟಿಗೆ ಸೇರುತ್ತಾರೆ. ವೀರ್ ಚಿತ್ರದಲ್ಲಿ ನಟಿಸಿದ್ದ ಜರೈನಾ ಥೇಟ್ ಕತ್ರಿನಾಳಂತೆ ಕಂಡಿದ್ದಳು ಎಲ್ಲರಿಗು. ಅಂದ್ರೆ ಆಕೆ ಅವಳಿ ಸೋದರಿಯಂತೆ ಕಂಡಿದ್ದಳು . ಕೇವಲ ಹೀರೋಯಿನ್ ಗಳು ಮಾತ್ರವಲ್ಲ ಹೀರೋಗಳು ಸಹ ಇದೆ ರೀತಿ ಹೋಲುತ್ತಾರೆ. ಹರ್ಮನ್ ಬವೇಜಾ ಡ್ಯಾನ್ಸ್ ಸ್ಟೈಲ್ ನೋಡಿದರೆ ಹೃತಿಕ್ ರೋಶನ್ ಹೋಲುತ್ತದೆ, ಒಂದೆರಡು ಚಿತ್ರಗಳ ನಂತರ ಆತ ಬಾಲಿವುಡ್ ನಲ್ಲಿ ಕಾಣಿಸಲಿಲ್ಲ, ಆದರು ಮಾಡಿದ ಚಿತ್ರಗಳು ಆತನ ಬಗ್ಗೆ ಆಸಕ್ತಿ ಹೆಚ್ಚಿಸಿತ್ತು. ಕನ್ನಡದ ರಮೇಶ್ ಅರವಿಂದ್ ಕಮಲ್ ಹಾಸನ್ ರಂತೆ, ಡಾ. ಅಂಬರೀಶ್ ರಂತೆ ರಾಕ್ ಲೈನ್ ವೆಂಕಟೇಶ್ ಹೀಗೆ ಅನೇಕರು ನಮ್ಮಲ್ಲೂ ಇದ್ದಾರೆ.