ಇಲಿಯಾನ ಮನ ಗೆದ್ದ ಇಬ್ಬರು ಹೀರೋಗಳು ಯಾರು ಗೊತ್ತೇ?
, ಮಂಗಳವಾರ, 4 ಫೆಬ್ರವರಿ 2014 (11:10 IST)
ವಾರಕ್ಕೊಂದರಂತೆ ತನ್ನ ಚಿತ್ರ ಚಿತ್ರ ಬಿಡುಗಡೆ ಆದರೆ ಯಾವ ಕಲಾವಿದರಿಗೆ ಖುಷಿ ಮತ್ತು ಥ್ರಿಲ್ಲಿಂಗ್ ಆಗುವುದಿಲ್ಲ. ಅಂತಹದ್ದೇ ಒಂದು ಬಗೆಯ ಥ್ರಿಲ್ ನಲ್ಲಿ ಇದ್ದಾಳೆ ಇಲಿಯಾನ. ಆಕೆಯ ಎರಡು ಹಿಂದಿ ಚಿತ್ರಗಳು ಮಾರ್ಚ್ 28 ಹ್ಯಾಪಿ ಎಂಡಿಂಗ್ ಮತ್ತು ಎಪ್ರಿಲ್ 4ರಂದು ಮೈ ತೇರಾ ಹೀರೋ ಬಿಡುಗಡೆ ಆಗಲಿದೆ. ಈ ಎರಡು ಚಿತ್ರಗಳಲ್ಲಿ ಇಲಿಯಾನೆಗೆ ಉತ್ತಮ ಪಾತ್ರಗಳು ಇವೆಯೆಂದು ಹೇಳಿದ್ದಾಳೆ. ಈ ಚಿತ್ರಗಳು ಸೂಪರ್ ಡೂಪರ್ ಸಕ್ಸಸ್ ಆಗುವುದಲ್ಲದೆ, ತನಗೆ ಗ್ಯಾರೆಂಟಿ ಇದರಿಂದ ಒಳ್ಳೆಯ ಬ್ರೇಕ್ ದೊರಕುತ್ತದೆ ಎನ್ನುವ ಸಂಗತಿಯನ್ನು ಸಹ ಹೇಳಿದ್ದಾಳೆ ಇಲಿಯಾನ. ಹ್ಯಾಪಿ ಎಂಡಿಂಗ್ ಚಿತ್ರದಲ್ಲಿ ಸೀನಿಯರ್ ಹೀರೋ ಸೈಫ್ ಅಲಿ ಖಾನ್ ಜೊತೆ ಮತ್ತು ಮೈ ತೇರಾ ದಲ್ಲಿ ವರುಣ್ ಧವನ್ ಜೊತೆಗೆ ಆಕೆ ತನ್ನ ಪ್ರತಿಭೆ ತೋರಿದ್ದಾಳೆ. ಸೈಫ್ ತುಂಬಾ ಒಳ್ಳೆಯವರು. ತುಂಬಾ ಫ್ರೆಂಡ್ಲಿ ಅನ್ನುವ ಮಾತು ಹೇಳಿದ್ದಾಳೆ ಗೋವ ಸುಂದರಿ. ವರುಣ್ ತುಂಬಾ ನಾಟಿ ಬಾಯ್.. ತೆಗೆದ ಬಾಯಿ ಮುಚ್ಚೋದೆ ಇಲ್ಲವಂತೆ ಅಷ್ಟೊಂದು ಮಾತು ಆಡ್ತಾನಂತೆ. ಆತನ ಎನರ್ಜಿ ಲೆವೆಲ್ ಇಲಿಯಾನಳನ್ನು ಮೋದಿ ಮಾಡಿದೆ. ಇಂತಹ ವ್ಯಕ್ತಿಗಳು ನಮಗೆ ಅರಿವು ಇಲ್ಲದಂತೆ ನಮ್ಮಲ್ಲಿ ಎನರ್ಜಿ ತುಂಬುತ್ತಾರೆ ಎಂದು ಹೇಳಿದ್ದಾಳೆ ಆಕೆ.ತಾರೆ ಇಲಿಯಾನ ಇಬ್ಬರು ಹೀರೋಗಳಿಗೆ ಮನ ಸೋತಿದ್ದಾಳೆ !