ಇರ್ಫಾನ್‌ರನ್ನು ಹಗುರವಾಗಿ ಕಾಣುವಂತಿಲ್ಲ
Publish Date: Tue, 06 Nov 2007 (17:16 IST)
Updated Date: Tue, 06 Nov 2007 (17:15 IST)
ಇತ್ತೀಚೆಗೆ ಇರ್ಫಾನ್ ಖಾನ್ ವಿರುದ್ಧ ಮಾಡಿದ ಒಂದು ಆರೋಪವೆಂದರೆ ಭಾನುವಾರ ಅವರು ಯಾವುದೇ ಚಿತ್ರದಲ್ಲಿ ಸಂದರ್ಭ ಎಷ್ಟೇ ತುರ್ತಿನದಾಗಿರಲಿ ಕೆಲಸ ಮಾಡಲು ನಿರಾಕರಿಸುತ್ತಾರೆಂಬುದು. ಕಳೆದ ನ.4ರಂದು ಇರ್ಫಾನ್ ತಮ್ಮ ಗಂಟಲನ್ನು ಸರಿಪಡಿಸಿಕೊಂಡು, ಇವತ್ತು ಭಾನುವಾರ, ಕ್ರೇಜಿ 4 ಚಿತ್ರೀಕರಣದಲ್ಲಿ ಕ್ರೇಜಿಯಂತೆ ಪಾಲ್ಗೊಂಡಿಲ್ಲವೇ ಎಂದು ಮರುಪ್ರಶ್ನೆ ಹಾಕುತ್ತಾರೆ. ನಾನು ಭಾನುವಾರ ರಜೆ ತೆಗೆದುಕೊಂಡಿದ್ದು ಈದ್ ದಿನ ಮಾತ್ರ. ಅದೂ ನನ್ನ ಪುತ್ರ ರಮ್ಜಾನ್ ಉಪವಾಸವನ್ನು ಮೊದಲ ಬಾರಿ ಆಚರಿಸಿದಾಗ ಎಂದು ಇರ್ಫಾನ್ ಹೇಳಿದರು. ನನ್ನ ಕುಟುಂಬಕ್ಕಾಗಿ ಕನಿಷ್ಟ ಒಂದು ದಿನ ರಜೆ ಪಡೆಯುವುದು ಬೇಡವೇ ಎಂದು ಅವರು ಪ್ರಶ್ನಿಸುತ್ತಾರೆ. ತಮ್ಮನ್ನು ಹಗುರವಾಗಿ ಪರಿಗಣಿಸುವಂತಿಲ್ಲ ಎಂಬ ಅವರ ಸಂಕಲ್ಪದಿಂದ ಕಠೋರವಾದಿ ಎಂಬ ಹೆಸರು ಬಂದಿದ್ದಾಗಿ ಅವರು ನುಡಿದರು. . "
ನಾನು ಚಿತ್ರದ ನಟನೆಗೆ ಹೆಚ್ಚು ಶುಲ್ಕ ಮತ್ತು ಮುಖ್ಯ ಪಾತ್ರ ಬೇಕೆಂದು ಕೇಳುತ್ತೇನೆಂಬ ಸುದ್ದಿಗಳು ಹಬ್ಬಿವೆ. ಅವೆಲ್ಲವೂ ಸುಳ್ಳು, ನನ್ನನ್ನು ಹಗುರವಾಗಿ ಪರಿಗಣಿಸಬಾರದೆಂದು ಮಾತ್ರ ನಾನು ಒತ್ತಾಯಿಸುತ್ತೇನೆ. ನನ್ನ ಸಹಿ ಹಾಕಿಸಿಕೊಂಡ ಮೇಲೆ ನನ್ನನ್ನು ಚಿತ್ರದಲ್ಲಿ ಸರಿಯಾಗಿ ಬಳಸಿಕೊಳ್ಳಬೇಕು ಎಂದು ಅವರು ನುಡಿದರು.