Article Bollywood Gossips %e0%b2%87%e0%b2%ae%e0%b3%8d%e0%b2%b0%e0%b2%be%e0%b2%a8%e0%b3%8d %e0%b2%95%e0%b2%be%e0%b2%b0%e0%b3%8d %e0%b2%aa%e0%b3%8d%e0%b2%b0%e0%b3%80%e0%b2%a4%e0%b2%bf %e0%b2%88 %e0%b2%aa%e0%b2%b0%e0%b2%bf 113072500009_1.htm

Daily Horoscope

Select Your Language

Notifications

webdunia
webdunia
webdunia
webdunia

ಇಮ್ರಾನ್ ಕಾರ್ ಪ್ರೀತಿ ಈ ಪರಿ

ಇಮ್ರಾನ್
PTI
ಒಬ್ಬೊಬ್ಬರಿಗೆ ಒಂದೊಂದು ವಸ್ತುವಿನ ಪ್ರೀತಿ ವ್ಯಾಮೋಹ ಇರುವುದು ನಿಜವೇ. ಜಾನ್ ಅಬ್ರಾಹಂಗೆ ಬೈಕ್ ಮೇಲೆ ಇರುವ ಪ್ರೀತಿಯಂತೆ ಇಮ್ರಾನ್ಗೆ ತಮ್ಮ ಕಾರ್ ಮೇಲೆ ಪ್ರೀತಿ ಮೂಡಿದೆಯಂತೆ. ಆ ಮೋಹ ಎಷ್ಟರ ಮಟ್ಟಿಗೆ ಹಬ್ಬಿದೆ ಎಂದರೆ ಬೇರೆಯವರಿಗೆ ಅದನ್ನು ಓಡಿಸಲು ಕೊಡುವುದಿರಲಿ, ಮುಟ್ಟಲೂ ಬಿಡುತ್ತಿಲ್ಲವಂತೆ. ಅಷ್ಟರಮಟ್ಟಿಗಿದೆ ಅವರ ಕಾರ್ ಪ್ರೀತಿ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಮುಂಜಾನೆ ಎದ್ದು ಎಷ್ಟೇ ಕೆಲಸವಿದ್ದರೂ ಅವರ ಕಾರ್ಗೆ ಸ್ನಾನ ಮಾಡಿಸುವ ಜವಾಬ್ದಾರಿಯನ್ನು ಅವರು ಬೇರಾರಿಗೂ ಬಿಟ್ಟುಕೊಡುತ್ತಿಲ್ಲ. ಮನೆಯ ಕೆಲಸದವರಿಗೂ ಈ ಕೆಲಸ ಮಾಡಲು ಬಿಡುತ್ತಿಲ್ಲದಿರುವುದು ಅವರಿಗೆ ಅಚ್ಚರಿಯ ಸಂಗತಿಯಾಗಿದೆಯಂತೆ.

ಇದಕ್ಕೆ ಕಾರಣ ಬೇರೇನೂ ಇಲ್ಲ. ಅವರು ಖರೀದಿಸಿದ ಹೊಸ ಕಾರು ದುಬಾರಿಯದಾಗಿದ್ದು ಸ್ಟೋಟ್ಸ್ ಲುಕ್ ಹೊಂದಿದೆಯಂತೆ. ಯಾರಿಗೂ ಚಾಲನೆ ಮಾಡಲು ಬಿಟ್ಟುಕೊಡದ ಅವರ ಕಾರ್ ಪ್ರೀತಿಯ ಪರಿಗೆ ಮನೆಯವರೇ ಬೇಸ್ತುಬಿದ್ದಿದ್ದಾರಂತೆ. ಇದು ಹೀಗೇ ಮುಂದುವರೆದರೆ ಸರ್ವಿಸ್‍ಗೆ ಕಾರು ಕೊಟ್ಟಾಗಲೂ ಅವರು ಅಲ್ಲಿ ಕೂತು ಕಾರನ್ನು ಕಾಯುತ್ತಾರೆಯೇ ಎಂಬುದು ತರ್ಲೆಗಳು ಕೇಳುತ್ತಿರುವ ಪ್ರಶ್ನೆ.

Share this Story:

Follow Webdunia kannada