ಇದು ಜನ ಗಣ ಮನ 'ರಣ್' ಹೈ ವಿವಾದ!
ಜನ ಗಣ ಮನ ರಣ್ ಹೈ ಇಸ್ ರಣ್ ಮೇ ಝಕ್ಮಿ ಹುವಾ ಹೈಭಾರತ್ ಕಾ ಭಾಗ್ಯ ವಿಧಾತಾಪಂಜಾಬ್ ಸಿಂಧ್ ಗುಜರಾತ್ ಮರಾಠಾಏಕ್ ದೂಸ್ರೇ ಸೇ ಲಡ್ ಕೇ ಮರ್ ರಹೇ ರೈಇಸ್ ದೇಶ್ ನೇ ಹಮ್‌ಕೋ ಏಕ್ ಕಿಯಾಹಮ್ ದೇಶ್ ಕೇ ಟುಕ್‌ಡೇ ಕರ್ ರಹೇ ಹೈದ್ರಾವಿಡ್ ಉತ್ಕಲ್ ಬಂಗಾಖೂನ್ ಬಾ ಕೇರ್ಏಕ್ ರಂಗ್ ಕಾ ಕರ್ ದಿಯಾ ಹಮ್ನೇ ತಿರಂಗಾ...ಇದು ರಾಷ್ಟ್ರಗೀತೆಯಂತೆ ಕಂಡರೂ ರಾಷ್ಟ್ರಗೀತೆಯಲ್ಲ. ಹಿಂದಿ ಸಿನಿಮಾ ಗೀತೆ. ರಾಮ್ ಗೋಪಾಲ್ ವರ್ಮಾರ ಬಹು ನಿರೀಕ್ಷಿತ ರಣ್ ಚಿತ್ರ ಈಗ ಇಂಥದ್ದೊಂದು ಗೀತೆಯನ್ನು ತನ್ನ ಚಿತ್ರದ ಟೈಟಲ್ ಗೀತೆಯನ್ನಾಗಿ ಬಳಸಿರುವ ಮೂಲಕ ವಿವಾದದ ಕೇಂದ್ರ ಬಿಂದುವಾಗಿದೆ.ಏನಾದರೊಂದು ವಿವಾದದಲ್ಲಿ ಪ್ರತಿ ಬಾರಿ ಸಿಕ್ಕಿಕೊಳ್ಳುವುದೇ ವರ್ಮಾ ಗುಟ್ಟು. ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ವಿವಾದ ಸೃಷ್ಟಿಸಿ ಭರ್ಜರಿ ಪ್ರಚಾರ ಪಡೆಯುವ ವರ್ಮಾ ರಂಗೀಲಾ, ಕಂಪನಿ, ಸರ್ಕಾರ್‌ಗಳಂತಹ ಅದ್ಭುತ ಹಾಗೂ ಹಿಟ್ ಚಿತ್ರಗಳನ್ನು ನೀಡಿದವರು. ಆದರೂ, ಇತ್ತೀಚೆಗೆ ಅವರ ಹಲವು ಪ್ರಯೋಗಗಳು ಸಾಕಷ್ಟು ಪ್ರಚಾರ ಪಡೆದರೂ ತೋಪಾಗುತ್ತಲೇ ಇವೆ. ಇಂತಿಪ್ಪ ವರ್ಮಾ ಈ ಬಾರಿಯೂ ತಮ್ಮ ಹಳೇ ವರಸೆ ಬಿಟ್ಟಿಲ್ಲ. ಅವರ ರಣ್ ಚಿತ್ರಕ್ಕೂ ಈಗ ರಣ ಬಡಿದಿದೆ. ಆದರೆ, ಈ ಬಾರಿಯ ವಿವಾದ ಕೊಂಚ ಗಂಭೀರವಾದುದೇ ಸರಿ.
ಕನ್ನಡಿಗ ಸುದೀಪ್ ಸೇರಿದಂತೆ ಅಮಿತಾಬ್ ಬಚ್ಚನ್‌ನಂತಹ ದಿಗ್ಗಜರೇ ನಟಿಸಿರುವ ಭಾರತೀಯ ಪತ್ರಿಕೋದ್ಯಮದ ಒಳಹೊರಗನ್ನು ಚಿತ್ರಿಸಿರುವ ಬಹು ಕುತೂಹಲ ಕೆರಳಿಸಿರುವ ರಣ್ ಚಿತ್ರದಲ್ಲಿ ರಾಷ್ಟ್ರಗೀತೆಯನ್ನೇ ತಿರುಚಿ ಬರೆದಿರುವುದು ಈಗ ಈ ವಿವಾದಕ್ಕೆ ಕಾರಣ. ರಾಷ್ಟ್ರಗೀತೆಯ ರಾಗವನ್ನು ಚಿತ್ರದಲ್ಲಾಗಲೀ, ಅಥವಾ ಬೇರೆಯೇ ಯಾವುದಕ್ಕಾದರೂ ಬಳಸುವುದು ಸಂವಿಧಾನಕ್ಕೇ ವಿರೋಧ ಎಂದು ಹೇಳಿಕೊಂಡಿರುವ ಸೆನ್ಸಾರ್ ಬೋರ್ಡು ಉಗ್ರವಾಗಿ ಚಿತ್ರವನ್ನು ಟೀಕಿಸಿದೆ. ತಾನು ಈವರೆಗೆ ಈಹಿಸಲಾರದಷ್ಟು ರೀತಿಯಲ್ಲಿ ಈ ಚಿತ್ರದಲ್ಲಿ ರಾಷ್ಟ್ರಗೀತೆಗೆ ಅವಮಾನ ಮಾಡಿದೆ ಎಂದು ಹೇಳಿರುವ ಮಂಡಳಿ ಕೂಡಲೇ ಆ ಗೀತೆಯನ್ನು ಕಿತ್ತು ಹಾಕಲು ಚಿತ್ರ ನಿರ್ಮಾಪಕರಿಗೆ ಸೂಚನೆ ನೀಡಿದೆ.ಸಿನೆಮಾಟೋಗ್ರಾಫ್ ಕಾಯಿದೆ ಹಾಗೂ ರಾಷ್ಟ್ರೀಯ ಗೌರವ ಕಾಯಿದೆಗಳಡಿ ನೋಡಿದರೆ ಅದು ರಾಷ್ಟ್ರಗೀತೆಗೆ ಮಾಡಿದ ಅವಮಾನವೆಂದು ಪರಿಗಣಿಸಲ್ಪಡುತ್ತದೆ ಎಂದು ಸೆನ್ಯಾರ್ ಮಂಡಳಿಯ ಅಧ್ಯಕ್ಷೆ ಶರ್ಮಿಳಾ ಠಾಗೋರ್ ಅವರ ಕಾರ್ಯದರ್ಶಿ ವಿವೇಕ್ ಚವಕ್ ಹೇಳಿದ್ದಾರೆ.ಆದರೆ ಈ ಬಗ್ಗೆ ಇನ್ನೂ ರಣ್ ಚಿತ್ರ ತಂಡ ಏನೂ ಹೇಳಿಕೊಂಡಿಲ್ಲ. ರಣ್ ನಿರ್ಮಾಪಕ ಶೀತಲ್ ತಲ್‌ವಾರ್, ನಾವು ಈಗಾಗಲೇ ಚಿತ್ರದ ಪ್ರೋಮೋವನ್ನು ಸಿಬಿಎಫ್‌ಸಿಗೆ ಕಳುಹಿಸಿದ್ದೇವೆ. ಅಧಿಕೃತವಾಗಿ ನಮಗೆ ಇನ್ನೂ ಮಂಡಳಿಯ ಸೂಚನೆ ತಲುಪಿಲ್ಲ. ಚಿತ್ರತಂಡ ಈ ಬಗ್ಗೆ ಗಂಭೀರವಾಗಿ ಚರ್ಚಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.ಆದರೆ ಸೆನ್ಸಾರ್ ಮಂಡಳಿ ಹೀಗೆ ಸೂಚನೆ ಕೊಡುವುದಕ್ಕೂ ಮೊದಲು ಇತ್ತೀಚೆಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಪ್ರೋಮೋ ಪ್ರದರ್ಶಿಸಿದ ಸಂದರ್ಭ ಪತ್ರಕರ್ತರು ಇದು ರಾಷ್ಟ್ರಗೀತೆಯನ್ನು ಅವಮಾನ ಮಾಡಿದಂತೆ ಅಲ್ಲವೇ ಎಂದು ಪ್ರಶ್ನಿಸಿದ್ದಕ್ಕೆ, ವರ್ಮಾ ಅವರು ಇದನ್ನು ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಲ್ಲ ಎಂದು ವಾದಿಸಿದ್ದರು. ಆದರೆ ಈಗ ಮ್ತತೆ ವರ್ಮಾ ಸುತ್ತ ಅದೇ ಉರುಳು ಬಿದ್ದಿದೆ.ವರ್ಮಾ ಈ ಉರುಳಿನಿಂದ ತಪ್ಪಿಸಲು ಯಾವ ಮಾರ್ಗಕ್ಕೆ ಶರಣು ಹೋಗುತ್ತಾರೋ ಗೊತ್ತಿಲ್ಲ. ಆದರೆ ಚಿತ್ರದಿಂದ ಆ ಹಾಡನ್ನು ತೆಗೆದು ಹಾಕಿದರೆ ಮಾತ್ರ ಸೆನ್ಸಾರ್ ಮಂಡಳಿ ಸರ್ಟಿಫಿಕೆಟ್ ನೀಡುವುದಾಗಿ ಘೋಷಿಸಿರುವುದು ಮಾತ್ರ ವರ್ಮಾರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿರುವುದಂತೂ ನಿಜ.