ಇಂದು ತೆರೆಗೆ ಅಪ್ಪಳಿಸಲಿರುವ ಧೂಂ3..!
Publish Date: Fri, 20 Dec 2013 (10:57 IST)
Updated Date: Fri, 20 Dec 2013 (10:57 IST)
ಇಂದು ಬಹು ನಿರೀಕ್ಷಿತ ಚಿತ್ರ ಧೋಮ್3 ತೆರೆಯನ್ನು ಅಪ್ಪಳಿಸಲಿದೆ. ಸಾಕಷ್ಟು ತಿಂಗ
ಳುಗಳಿಂದ ಸುದ್ದಿ ಮಾಡುತ್ತಿರುವ ಯಶ್ ಚೋಪ್ರ ಪ್ರೊಡಕ್ಷನ್ ಹೌಸ್ ನಿಂದ ಬಿಡುಗಡೆ ಆಗುತ್ತಿದೆ. ಅಮೀರ್ ಖಾನ್ ,ಅಭಿಷೇಕ್ ಬಚ್ಚನ್, ಕತ್ರಿನಾ ಕೈಫ್ ನಟಿಸಿರುವ ಈ ಚಿತ್ರವು ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ.ಈ ಚಿತ್ರದ ಟಿಕೆಟ್ ದರಗಳು ಸಹ ಅನೇಕ ವಿಧದಲ್ಲಿವೆ ಮಲ್ಟಿಪ್ಲೆಕ್ಸ್ ಗೆ 250 -500 , ಐ ಮ್ಯಾಕ್ಸ್ 400 -600 ರುಗಳ ವರೆಗೂ ಇದೆ. ಇದು ಸಾವಿರ ಕೋಟಿ ರೂಪಾಯಿಗಳನ್ನು ಗಳಿಕೆ ಮಾಡುವ ಸಾಧ್ಯತೆ ಇದೆ ಎಂದು ಚಿತ್ರ ತಂಡ ತಿಳಿಸಿದೆ. ಆದಿತ್ಯ ಚೋಪ್ರ ಈ ಚಿತ್ರದ ನಿರ್ಮಾಪಕರು.ಇದು ಹಾಡು, ಚಿತ್ರೀಕರಣ ಸ್ಥಳಗಳು, ಹೂಡಿರುವ ಮೊತ್ತ ಹೀಗೆ ಪ್ರತಿಯೊಂದು ಅಂಶಗಳಿಂದಲೂ ಸುದ್ದಿ ಮಾಡಿತ್ತು.ಇದರಲ್ಲಿ ಅಮೀರ್ ಖಾನ್ ಮೊಟ್ಟ ಮೊದಲ ಬಾರಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.