Article Bollywood Gossips %e0%b2%87%e0%b2%82%e0%b2%a1%e0%b2%bf%e0%b2%af%e0%b2%be%e0%b2%a8 %e0%b2%9c%e0%b3%8b%e0%b2%a8%e0%b3%8d%e0%b2%b8%e0%b3%8d %e0%b2%86%e0%b2%97%e0%b2%bf %e0%b2%b6%e0%b2%be%e0%b2%b0%e0%b3%81%e0%b2%96%e0%b3%8d 108083000028_1.htm

Daily Horoscope

Select Your Language

Notifications

webdunia
webdunia
webdunia
webdunia

ಇಂಡಿಯಾನ ಜೋನ್ಸ್ ಆಗಿ ಶಾರುಖ್ ?

ಸಂತೋಷ್ ಶಿವನ್
IFM
'ಹಲೊ', 'ಮಲ್ಲಿ', 'ದ ಟೆರೆರಿಸ್ಟ್' ನಂತಹ ಚಿತ್ರಗಳಿಂದ ಗುರುತಿಸಲ್ಪಟ್ಟಿರುವ ನಿರ್ದೇಶಕ ಸಂತೋಷ್ ಶಿವನ್, ಕಿಂಗ್ ಖಾನ್ ಶಾರುಖ್‌ರ ತಾರಾಗಣದಲ್ಲಿ ಹಾಲಿವುಡ್ ಮೂಲದ ಸಾಹಸ ಚಿತ್ರ 'ಇಂಡಿಯಾನ ಜೋನ್ಸ್' ಅನ್ನು ಹಿಂದಿಗೆ ತರಲಿದ್ದಾರೆ.

ವರದಿಗಳ ಪ್ರಕಾರ ಶಿವನ್, ಶಾರುಖ್‌ರನ್ನು ಮುಖ್ಯಪಾತ್ರದಲ್ಲಿರಿಸಿ ಮೈನವಿರೇಳಿಸುವ ಸಾಹಸ ಚಿತ್ರವನ್ನು ನಿರ್ಮಿಸುವ ಸಿದ್ಧತೆ ನಡೆಸಿದ್ದಾರೆ. ನಿರ್ಮಾಣ ಪೂರ್ವ ಹಂತದಲ್ಲಿರುವ ಈ ಚಿತ್ರದ ಮೂಲಕ 7 ವರ್ಷಗಳ ಅವಧಿಯ ನಂತರ ಶಾರುಖ್ ಮತ್ತು ಶಿವನ್ ಒಂದಾಗುತ್ತಿದ್ದಾರೆ. ಈ ಹಿಂದೆ 'ಅಶೋಕ' ಚಿತ್ರದಲ್ಲಿ ಇವರಿಬ್ಬರು ಜೊತೆಯಾಗಿ ದುಡಿದಿದ್ದರು.

ಶಾರುಖ್, ಶಿವನ್‌ರೊಂದಿಗೆ ದುಡಿಯುವ ಆಶಯವನ್ನು ವ್ಯಕ್ತಪಡಿಸಿದ್ದರು ಮತ್ತು ದೊಡ್ಡ ಬಜೆಟ್‌ನ ಪೂರ್ಣ ಪ್ರಮಾಣದ ಆಕ್ಷನ್ ಚಿತ್ರ ಮಾಡಲು ಬಯಸಿದ್ದರು. ಕಾಕತಾಳೀಯ ವೆಂಬಂತೆ ಶಿವನ್, ಶಾರುಖ್‌ರನ್ನು ಅಂತಹುದೇ ಪಾತ್ರಕ್ಕೆ ಆಹ್ವಾನಿಸಿದ್ದಾರೆ.

ಇದು ದೊಡ್ಡ ಬಜೆಟ್ ಚಿತ್ರ ಮತ್ತು ಪೂರ್ಣಪ್ರಮಾಣದ ಆಕ್ಷನ್ ಚಿತ್ರ. ರೋಮಾನ್ಸ್ ಮತ್ತು ಹಾಸ್ಯದ ಛಾಯೆಗಳು ಸಹ ಚಿತ್ರದಲ್ಲಿವೆ.

Share this Story:

Follow Webdunia kannada