ಆಹಾ ಸಲ್ಮಾನ್ ಮದ್ವೆಯಂತೆ.. ಇದು ನಿಮಗೆ ನಾವ್ ಹೇಳ್ ಬೇಕಂತೆ....
, ಮಂಗಳವಾರ, 11 ಮಾರ್ಚ್ 2014 (12:51 IST)
ಅಂತೂ ಸಲ್ಮಾನ್ ಖಾನ್ ಮದುವೆ ಆಗಲೇ ಬೇಕು ಎಂದು ನಿರ್ಧಾರ ಮಾಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಬಾಲಿವುಡ್ ಹೆಣ್ಣುಮಕ್ಕಳ ಜೊತೆ ಓಡಾಡಿಕೊಂಡು ಮದುವೆ ಆಗೇ ಬಿಡ್ತೀನಿ ಎಂದು ಎಲ್ಲರ ಮುಂದೆ ಹೇಳಿ ಕೊನೆಗೆ ಆಗದೆ ಲವ್ ಫೇಯಿಲೂರ್ ಆಗಿ ಒದ್ದಾಡುತ್ತಿದ್ದ ಈ ಮಸಲ್ಸ್ ಹೀರೋ ಅಂತಿಮವಾಗಿ ರುಮಾನಿಯಾ ಮಾಡೆಲ್ ಆದ ಲುಲಿಯ ವೆಂಟರ್ ಜೊತೆಯಲ್ಲಿ ಬದುಕನ್ನು ಹಂಚಿಕೊಳ್ಳಲು ಹೊರಟಿದ್ದಾರೆ. ಅವರು ಕಳೆದ ವರ್ಷದಿಂದ ಡೇಟಿಂಗ್ ಮಾಡುತ್ತಿದ್ದ ಸಂಗತಿ ನಿಮಗೆ ಗೊತ್ತೇ ಇದೆ. ಈಗ ಆ ಸಂಬಂಧಕ್ಕೊಂದು ಅರ್ಥ ನೀಡಲು ಸಿದ್ಧರಾಗಿದ್ದಾರೆ ಸಲ್ಲು. ರಾಷ್ಟ್ರ ಪ್ರಸಿದ್ಧ ಪತ್ರಿಕೆಯಾದ ಇಂಡಿಯಾ ಟುಡೆ ನಡೆಸಿದ ಸಂದರ್ಶನದಲ್ಲಿ ಈ ಸಂಗತಿಯನ್ನು ಸಲ್ಮಾನ್ ಖಾನ್ ಬಿಚ್ಚಿಟ್ಟಿದ್ದಾರೆ. ಆ ವರ್ಷದ ಕೊನೆಯಲ್ಲಿ ತಾನು ಮದುವೆ ಆಗುವ ಸಂಭವ ಇದೆ ಎನ್ನುತ್ತಿದ್ದಾರೆ ಸಲ್ಮಾನ್ ಖಾನ್. ಇನ್ನು ಮೇಲೆ ತನ್ನ ಬದುಕು ಮತ್ತಷ್ಟು ಉಲ್ಲಾಸವಾಗಿ ನಡೆಯುತ್ತದೆ ಎಂದಿದ್ದಾರೆ ಆ ಸಂದರ್ಶನದಲ್ಲಿ ಸಲ್ಮಾನ್ . ತಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ. ಧರ್ಮಕ್ಕಿಂತ ಮಾನವತೆಗೆ ಹೆಚ್ಚು ಆದ್ಯತೆ ನೀಡುತ್ತೇನೆ ಎಂದಿದ್ದಾರೆ ಸಲ್ಮಾನ್ ಖಾನ್.ತನ್ನ ಮನೆ ಅನೇಕ ಧರ್ಮಗಳ ಆಗರ. ತಾಯಿ ಹಿಂದೂ, ತಂದೆ ಪಠಾಣ್,ನಾದಿನಿ ಕ್ಯಾಥಲಿಕ್ , ಭಾವ ಪಂಜಾಬಿ ಎಂದು ಹೇಳಿ ತಮ್ಮ ಮನೆಯ ಧರ್ಮಗಳ ಲೆಕ್ಕವನ್ನು ಜಗತ್ತಿನ ಮುಂದೆ ಇಟ್ಟಿದ್ದಾರೆ ಸಲ್ಮಾನ್. ಹಿಂದೊಮ್ಮೆ ಪತ್ರಿಕೆಯೊಂದು ಸಲ್ಮಾನ್ ಖಾನ್ ರುಮೆನಿಯಾದ ಹುಡುಗಿಯನ್ನು ಮದುವೆ ಆಗ್ತಾಳೆ ಎಂದು ಬರೆದಾಗ ಸಲ್ಮಾನ್ ತಂದೆ ಸಲೀಮ್ ಖಾನ್ ಆ ಸುದ್ದಿಯಲ್ಲಿ ತಿರುಳಿಲ್ಲ ಎಂದು ಹೇಳಿ ಆಅ ಸಂಗತಿಯ ಮೇಲೆ ತಿಪ್ಪೆ ಸಾರಿಸಿದ್ದರು. ಅದಾದ ಸ್ವಲ್ಪ ತಿಂಗಳುಗಳ ಬಳಿಕ ಖುದ್ದು ಸಲ್ಮಾನ್ ಈ ಸಂಗತಿ ಹೊರಗೆಡವಿದ್ದಾರೆ. ಒಟ್ಟಾರೆ ಬಹುದಿನದ ಸುದ್ದಿಯೊಂದು ಈಗ ಹೊರ ಬಿದ್ದಿದೆ.. ಆಹಾ ಸಲ್ಮಾನ್ ಖಾನ್ ಮದ್ವೆಯಂತೆ!