Article Bollywood Gossips %e0%b2%86%e0%b2%b8%e0%b3%8d%e0%b2%95%e0%b2%b0%e0%b3%8d%e2%80%8c%e0%b2%97%e0%b2%be%e0%b2%97%e0%b2%bf %e0%b2%b0%e0%b3%86%e0%b2%b9%e0%b2%ae%e0%b2%be%e0%b2%a8%e0%b3%8d%e2%80%8c%e0%b2%97%e0%b3%86 3 %e0%b2%a8%e0%b2%be%e0%b2%ae%e0%b2%a8%e0%b2%bf%e0%b2%b0%e0%b3%8d%e0%b2%a6%e0%b3%87%e0%b2%b6%e0%b2%a8 109012200100_1.htm

Daily Horoscope

Select Your Language

Notifications

webdunia
webdunia
webdunia
webdunia

ಆಸ್ಕರ್‌ಗಾಗಿ ರೆಹಮಾನ್‌ಗೆ 3 ನಾಮನಿರ್ದೇಶನ

ಆಸ್ಕರ್
ಭಾರತೀಯರು ಹೆಮ್ಮೆಪಡುವ ರೀತಿಯಲ್ಲಿ 'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರದ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ 81ನೇ ಆಸ್ಕರ್ ಅಕಾಡೆಮಿ ಪ್ರಶಸ್ತಿಗಾಗಿ ಮ‌ೂರು ನಾಮನಿರ್ದೇಶನಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಒಟ್ಟಾರೆ ಈ ಚಿತ್ರವು 10 ನಾಮನಿರ್ದೇಶನಗಳನ್ನು ಪಡೆದುಕೊಂಡಿದೆ.

'ಜೈ ಹೋ' ಒರಿಜಿನಲ್ ಹಾಡಿಗಾಗಿ ಗುಲ್ಜಾರ್ ಅವರೊಂದಿಗೆ ಮತ್ತು 'ಓ ಸಾಯಾ' ಹಾಡಿಗಾಗಿ ಮಾಯಾ ಅರುಳ್‌ಪ್ರಕಾಶಮ್‌ರೊಂದಿಗೆ ಹಾಗೂ ಉತ್ತಮ ಸಂಗೀತಕ್ಕಾಗಿ ಎ.ಆರ್. ರೆಹಮಾನ್ ಒಟ್ಟು ಮ‌ೂರು ನಾಮನಿರ್ದೇಶನಗಳನ್ನು ಪಡೆದಿದ್ದಾರೆ.

ಉತ್ತಮ ಚಿತ್ರ, ಉತ್ತಮ ನಿರ್ದೇಶಕ (ಡ್ಯಾನಿ ಬೋಯ್ಲೆ), ಉತ್ತಮ ಚಿತ್ರಕಥೆ (ಸೈಮನ್ ಬೇಪಾಯ್), ಉತ್ತಮ ಛಾಯಾಗ್ರಹಣ, ಉತ್ತಮ ಸೌಂಡ್ ಮಿಕ್ಸಿಂಗ್, ಉತ್ತಮ ಸೌಂಡ್ ಎಡಿಟಿಂಗ್ ಹಾಗೂ ಉತ್ತಮ ಸಂಕಲನಕ್ಕಾಗಿ ಕೂಡ 'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರ ನಾಮನಿರ್ದೇಶನಗೊಂಡಿದೆ.

'ದಿ ಕ್ಯೂರಿಯಸ್ ಕೇಸ್ ಆಫ್ ಬೆಂಜಮಿನ್ ಬಟನ್' ಚಿತ್ರ ಆಸ್ಕರ್ ಪ್ರಶಸ್ತಿ ವಿಭಾಗದಲ್ಲಿ ಅತಿ ಹೆಚ್ಚಿನ ಅಂದರೆ 13 ನಾಮನಿರ್ದೇಶನಗಳನ್ನು ಪಡೆದುಕೊಂಡಿದೆ. ಅತ್ಯುತ್ತಮ ಚಿತ್ರಗಳ ಸಾಲಿನಲ್ಲಿರುವ ಇತರ ಚಿತ್ರಗಳೆಂದರೆ ಸ್ಲಮ್‌ಡಾಗ್ ಮಿಲಿಯನೇರ್, ಫ್ರಾಸ್ಟ್/ನಿಕ್ಸನ್, ಮಿಲ್ಕ್, ದಿ ರೀಡರ್ ಚಿತ್ರಗಳು.

ಮುಂಬೈಯಲ್ಲಿನ ಕೊಳೆಗೇರಿ ಬಾಲಕನೊಬ್ಬ ಟೀವಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಕೋಟ್ಯಧಿಪತಿಯಾಗುವ ಕಥೆಯನ್ನು ಹೊಂದಿರುವ ಸ್ಲಮ್‌ಡಾಗ್ ಮಿಲಿಯನೇರ್ ಚಿತ್ರ ಈಗಾಗಲೇ ನಾಲ್ಕು ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಇದೀಗ ಆಸ್ಕರ್ ಪ್ರಶಸ್ತಿ ಸಾಲಿನಲ್ಲಿ ಸಾಗುತ್ತಿದ್ದು, ಅಂತಿಮ ಫಲಿತಾಂಶ ಫೆಬ್ರವರಿ 22ರಂದು ಹೊರ ಬೀಳಲಿದೆ.

Share this Story:

Follow Webdunia kannada