ಆಸ್ಕರ್ ಪ್ರಶಸ್ತಿ ಗೆಲ್ಲುವ ದಿನಗಳು ದೂರವಿಲ್ಲ: ನುಲಿದ ವಿದ್ಯಾಬಾಲನ್
ಮುಂಬೈ , ಬುಧವಾರ, 5 ಮಾರ್ಚ್ 2014 (16:20 IST)
ದೇಶದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿ ಪಡೆಯುತ್ತೇನೆ ಎನ್ನುವ ಬಗ್ಗೆ ಭರವಸೆಯಿರಲಿಲ್ಲ. ಅದು ತಾನಾಗಿ ದೊರೆತಿದೆ. ಅದರಂತೆ ಆಸ್ಕರ್ ಪ್ರಶಸ್ತಿ ಕೂಡಾ ಪಡೆಯುವ ದಿನಗಳು ದೂರವಿಲ್ಲ ಎಂದು ಬಾಲಿವುಡ್‌ನ ಹಾಟ್ ನಟಿ ವಿದ್ಯಾ ಬಾಲನ್ ನುಲಿದಿದ್ದಾರೆ.
ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಮೇ 1 ರಿಂದ ಮೇ 11 ರವರೆಗೆ ನಡೆಯಲಿರುವ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ರಾಯಭಾರಿಯಾಗಿರುವ ವಿದ್ಯಾಬಾಲನ್ ಮಾತನಾಡಿ, ಆಸ್ಕರ್ ಪ್ರಶಸ್ತಿ ಪಡೆಯುವ ಬಗ್ಗೆ ನಾನು ಯೋಚಿಸಿಲ್ಲ. ಆದರೆ, ದೇವರು ಸದಾ ನನ್ನ ಪರವಾಗಿದ್ದರಿಂದ ಖಂಡಿತವಾಗಿ ಆಸ್ಕರ್ ಪ್ರಶಸ್ತಿ ಪಡೆಯುತ್ತೇನೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.