Publish Date: Thu, 01 Nov 2007 (14:00 IST)Updated Date: Thu, 01 Nov 2007 (13:58 IST)
IFM
ಲವ್ಲಿ ಸಿಕ್ಸೆರ್, ಹೌವಿಸ್ ದೆಟ್ ಮುಂತಾದ ಯಾವುದೇ ಕೂಗಾಟ, ಅರಚಾಟಗಳೂ ಮಹೇಂದ್ರ ಸಿಂಗ್ ಧೋನಿ ಅವರು ಕಂಡುಬಂದಾಗ ಉದ್ಗಾರವಾಗಲಿಲ್ಲ. ಕಾರಣವೇನೆಂದರೆ ಧೋನಿ ಈ ಬಾರಿ ಕ್ರಿಕೆಟ್ ಮೈದಾನದಲ್ಲಿ ಇರಲಿಲ್ಲ.
ಬದಲಿಗೆ ನಾಗೇಶ್ ಕಕುನೂರ್ ಅವರ ಆಶಾಯೆನ್ ಚಿತ್ರೀಕರಣದ ಸೆಟ್‌ನಲ್ಲಿ ಅವರು ಜಾನ್ ಅಬ್ರಾಹಂ ಜತೆಗಿದ್ದರು. ಜಾನ್ ಅಬ್ರಹಾಂ ಕೂಡ ಕ್ರಿಕೆಟ್‌ನ ಉತ್ಕಟ ಅಭಿಮಾನಿ ಮತ್ತು ಧೋನಿ ಅಭಿಮಾನಿ ಕೂಡ.ಪ್ರಸಕ್ತ ಅವರಿಬ್ಬರ ಕೇಶವಿನ್ಯಾಸವು ಒಂದೇ ರೀತಿಯಲ್ಲಿದೆ.
ಏಕೆಂದರೆ ಒಬ್ಬನೇ ಕೇಶವಿನ್ಯಾಸಕಾರ ಅವರಿಬ್ಬರಿಗೆ ಕೇಶವಿನ್ಯಾಸ ಮಾಡುವುದು. ಧೋನಿ ಮತ್ತು ಜಾನ್ ಆಶಾಯೆನ್ ಸೆಟ್‌ನಲ್ಲಿ ಸುದೀರ್ಘ ಕಾಲ ಚರ್ಚಿಸಿದರು ಜತೆಗೆ ಜಾನ್ ಅವರ ಗಂಭೀರ ನಟನೆಯನ್ನೂ ಕೂಡ ಕ್ರಿಕೆಟ್ ತಾರೆ ವೀಕ್ಷಿಸಿದರು.
ಇತ್ತೀಚೆಗೆ ಧೋನಿ ಬಾಲಿವುಡ್ ಚಿತ್ರರಂಗದಲ್ಲಿ ತೀವ್ರ ಆಸಕ್ತಿ ತೋರಿಸುತ್ತಿದ್ದಾರೆ. ಆರಂಭದಲ್ಲಿ ದೀಪಿಕಾ ಜತೆ ಈಗ ಜಾನ್ ಅಬ್ರಹಾಂ ಜತೆ. ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆ ಮಾಡುವ ಚಿಂತನೆ ಧೋನಿಗೆ ಇದೆಯೇ ಎಂದು ನೀವು ಭಾವಿಸಿದ್ದರೆ ಅವರನ್ನೇ ಕೇಳುವುದು ಒಳ್ಳೆಯದು.